ಭಾರತ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಅವರು ನಿರ್ಮಿಸಿದ್ದ ಅಪರೂಪದ ವಿಶ್ವದಾಖಲೆಯೊಂದನ್ನು ಇದೀಗ ಕರ್ನಾಟಕದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ ಮುರಿದಿದ್ದಾರೆ. ಅವರೀಗ ೨೦೨೫ರ ಜಪಾನ್ ಓಪನ್ ಪುರುಷರ ಡಬಲ್ಸ್ ಫೈನಲ್ ತಲುಪುವ ಮೂಲಕ ಎಟಿಪಿ ೫೦೦ ಮಟ್ಟದ ಟೂರ್ನಿಯ ಪುರುಷರ
ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಲಿಯಾಂಡರ್ ಪೇಸ್ ಅವರು ೪೪ ವರ್ಷ ೯ ತಿಂಗಳು ಇದ್ದಾಗ ಈ ಸಾಧನೆ ಮೆರೆದಿದ್ದರು.
ಇದೀಗ ರೋಹನ್ ಬೋಪಣ್ಣ ಅವರು ೪೫ ವರ್ಷ ೬ ತಿಂಗಳಿನಲ್ಲಿ ಈ ಮೈಲಿಗಲ್ಲು ನಿರ್ಮಿಸಿದರು. ಡಬಲ್ಸ್ ಜೊತೆಗಾರ ತಕೇರು ಯುಜುಕಿ ಅವರೊಂದಿಗೆ ಜಪಾನ್ ಓಪನ್ ಫೈನಲ್ ನಲ್ಲಿ ಮೊನಾಕೊದ ಹ್ಯೂಗೋ ನೈಸ್ ಮತ್ತು ಫ್ರಾನ್ಸ್ನ ಎಡ್ವರ್ಡ್ ರೋಜರ್-ವಾಸೆಲಿನ್ ಜೋಡಿ ವಿರುದ್ಧ ೭-೫, ೭-೫ ನೇರ ಸೆಟ್ಗಳಲ್ಲಿ
ಪರಾಭವಗೊಂಡರು. ಆದರೂ ಅವರು ಂಖಿP ೫೦೦-ಮಟ್ಟದ ಪಂದ್ಯಾವಳಿಯ ಪುರುಷರ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ.
೧೮ ವರ್ಷಕ್ಕಿಂತ ಕಿರಿಯ ಜೊತೆಗಾರ ಜಪಾನ್ ಓಪನ್ನಲ್ಲಿ ಶ್ರೇಯಾಂಕಹಿತ ಜೋಡಿಯಾಗಿರುವ ರೋಹನ್ ಬೋಪಣ್ಣ ಮತ್ತು ಯುಜುಕಿ ಅವರು ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ಕ್ರಿಶ್ಚಿಯನ್ ಹ್ಯಾರಿಸನ್ ಮತ್ತು ಇವಾನ್ ಕಿಂಗ್ ಜೋಡಿಯನ್ನು ಸೋಲಿಸಿ ಫೈನಲ್ ತಲುಪಿದ್ದರು ಬೋಪಣ್ಣ ಅವರ ಜೊತೆಗಾರ ತಕೇರು ಯುಜುಕಿ ಅವರು ಬೋಪಣ್ಣ ಅವರಿಗಿಂತ ೧೮ ವರ್ಷ ಚಿಕ್ಕವರು ಎಂಬುದು ವಿಶೇಷ. ಈ ಜೋಡಿ ಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಎರಡನೇ ಶ್ರೇಯಾಂಕದ ಹ್ಯೂಗೋ ನೈಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ಜೋಡಿ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ.
ಲಿಯಾಂಡರ್ ಪೇಸ್ ಅವರು ೪೪ ವರ್ಷ ೯ ತಿಂಗಳ ವಯಸ್ಸಿನಲ್ಲಿ ೨೦೧೮ರ ದುಬೈ ಟೆನಿಸ್ ಚಾಂಪಿಯನ್ಶಿಪ್ನ ಫೈನಲ್ ತಲುಪಿದ ಸಾಧನೆ ಮಾಡಿದ್ದರು. ಆಗ ಅವರು ತಮ್ಮ ಅಮೆರಿಕದ ಜೊತೆಗಾರ ಜೇಮ್ಸ್ ಕ್ಯಾರೆಟ್ಟಾನಿ ಅವರೊಂದಿಗೆ ಫೈನಲ್ನಲ್ಲಿ ಜೀನ್-ಜೂಲಿಯನ್ ರೋಜರ್ ಮತ್ತು ಹೋರಿಯಾ ಟೆಕೌ ವಿರುದ್ಧ ನೇರ ಸೆಟ್ಗಳಲ್ಲಿ ಸೋತಿತ್ತು. ಬೋಪಣ್ಣ ಅವರು ಈಗ ಪೇಸ್ ಅವರ ಈ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆದಿದ್ದಾರೆ.
ಜಾನ್ ಮೆಕೆನ್ರೊ ನಂತರದ ಸ್ಥಾನ ಇನ್ನು ಎಟಿಪಿ ಮಟ್ಟದ ಸ್ಪರ್ಧೆಯ ಪುರುಷರ ಡಬಲ್ಸ್ ಫೈನಲ್ ತಲುಪಿದ ಆಟಗಾರರಲ್ಲಿ ಜಾನ್ ಮೆಕೆನ್ರೋ ನಂತರ ಬೋಪಣ್ಣ ಎರಡನೇ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ. ಜಾನ್ ಮೆಕೆನ್ರೋ ಅವರು ೪೭ ವರ್ಷ ವಯಸ್ಸಿನಲ್ಲಿ ೨೦೦೬ರಲ್ಲಿ ಸ್ಯಾನ್ ಜೋಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಆಗ ಅವರ ಜೊತೆಗಾರ ಜೋನಾಸ್ ಬ್ಜೋರ್ಕ್ಮನ್ ಆಗಿದ್ದರು. ಮೆಕೆನ್ರೋ ಅವರು ನಿವೃತ್ತಿಯಿಂದ ಹೊರಬAದು ಕೇವಲ ಎರಡು ಡಬಲ್ಸ್ ಪಂದ್ಯಾವಳಿಗಳನ್ನು ಆಡಿದ್ದರು.