ಮಾಗಡಿ: ಪಟ್ಟಣದ ಸರಕಾರಿ ಆಸ್ಪತ್ರೆ ಬಳಿಯಲ್ಲಿ ಶಾಸಕರಾದ ಹೆಚ್.ಸಿ.ಬಾಲಕೃಷ್ಣರವರು ರಾಜ್ಯ ಸರ್ಕಾರದಿಂದ 42 ಕೋಟಿ ಹಣ ಬಿಡುಗಡೆ ಮಾಡಿಸಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ.ಆದರೆ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿಯವರು ಪತ್ರಿಕಾಗೋಷ್ಠಿ ನಡೆಸಿ ಇಲ್ಲಸಲ್ಲದ ಆರೋಪ ಮಾಡಿ ತಾಲ್ಲೂಕಿನ ಜನತೆಯಲ್ಲಿ ಗೊಂದಲ ಸೃಷ್ಟಿಸುವುದನ್ನು ಬಿಡಬೇಕಿದೆ ಎಂದು ಬ್ಯಾಂಕ್ ಕಾಂಗ್ರೆಸ್ ಅದ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದಲ್ಲಿ ನೂತನ ಆಸ್ಪತ್ರೆ ನಿರ್ಮಿಸಲು 42 ಕೋಟಿ ಹಣ ಬಿಡುಗಡೆಯಾಗಿದ್ದು ಈಗಾಗಲೇ ಶಾಸಕ ಬಾಲಕೃಷ್ಣರವರು ಗುದ್ದಲಿಪೂಜೆ ನೆರವೇರಿಸಿದ್ದಾರೆ.ಕಾಮಗಾರಿ ಆರಂಭವಾಗಬೇಕಿದೆ.ಆದರೆ ಹೆಚ್.ಎಂ.ಕೃಷ್ಣಮೂರ್ತಿಯವರು ನೂರಾರು ಮರಗಳನ್ನು ಕಡಿಯಲಾಗುತ್ತಿದೆ.ಇದರಿಂದ ಸಾರ್ವಜನಿಕರಿಗೆ ಆಮ್ಲಜನಕದ ಕೊರತೆಯಾಗುತ್ತದೆ.ಈ ಸಂಭAದ ಕಾನೂನು ಮೊರೆ ಹೋಗಲಾಗಿದೆ ಎಂದಿದ್ದಾರೆ.ಆದರೆ ಮರ ಕಡಿಯುವ ಸಂಭAದ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಹೈಕೋರ್ಟ್ ನಲ್ಲಿ ಸರಕಾರದ ವಕೀಲರು ಸ್ಪಷ್ಟಪಡಿಸಿದ್ದಾರೆ.ಭವಿಷ್ಯದಲ್ಲಿ ಮರ ಕಡಿಯುವ ಅಗತ್ಯ ಬಂದರೆ ಕಾನೂನು ಬದ್ದ ಅನುಮತಿ ಪಡೆಯಲಾಗುವುದು ಎಂದ ಅವರು ಹೆಚ್.ಎಂ.ಕೃಷ್ಣಮೂರ್ತಿಯವರು ಆರ್ಥಿಕವಾಗಿ ಸಭಲರಾಗಿದ್ದಾರೆ.ಅವರಿಗೆ ಸರಕಾರಿ ಆಸ್ಪತ್ರೆ ಬೇಕಿಲ್ಲದಿರಬಹುದು.ಆದರೆ ಮಾಗಡಿಯ ಶ್ರೀಸಾಮಾನ್ಯರಿಗೆ, ಕಡುಬಡವರಿಗೆ,ನಿರ್ಗತಿಕರಿಗೆ ಆಸ್ಪತ್ರೆ ಅನಿವಾರ್ಯವಾಗಿದೆ ಎಂದ ಅವರು
ಕೃಷ್ಣಮೂರ್ತಿಯವರು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸ್ಥಳಾಂತರ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ಇಲ್ಲಿ ಆಸ್ಪತ್ರೆ ನಿರ್ಮಿಸುತ್ತಿರುವುದರಿಂದ ಪ್ರತಿಮೆ ಭಂಗ ಬಾರದಂತೆ ಅದೇ ಸರ್ವೇ ನಂಬರಿನಲ್ಲಿ ಕೇವಲ 100 ಅಡಿ ಅಂತರದಲ್ಲಿ ಸ್ಥಳಾಂತರಿಸಲು ಹೈಕೋರ್ಟ್ ಅನುಮತಿ ನೀಡಿದೆ.ನಾವು ಈ ಸಂಭAದ ಈಗಾಗಲೇ ನೀಲಿನಕ್ಷೆ ತಯಾರಿಸಿದ್ದು ಉತ್ತರಾಭಿಮುಖವಾಗಿ ಪ್ರತಿಷ್ಢಾಪಿಸಲಾಗುವುದು ಎಂದು ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದರು.
ಪುರಸಭಾ ಸದಸ್ಯರಾದ ತಿರುಮಲೆ ರಂಗಹನುಮಯ್ಯ ಮಾತನಾಡಿ ಶಾಸಕ ಬಾಲಕೃಷ್ಣರವರು ಐದು ಭಾರಿ ಜನಪ್ರತಿನಿಧಿಯಾಗಿದ್ದು ಅನುಭವಿ ರಾಜಕಾರಣಿಯಾಗಿದ್ದಾರೆ.ಯಾವ್ಯಾವ ಇಲಾಖೆಯಲ್ಲಿ ಹಣ ತರಬೇಕೆಂಬ ಚಾಕಚಕ್ಯತೆ ಅವರಿಗಿದೆ.ಜೊತೆಗೆ ಇದೇ ಜಿಲ್ಲೆಯವರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಳಿಯಲ್ಲಿ ನಿಕಟವಾಗಿರುವ ಕಾರಣ ಅನುದಾನ ಬಿಡುಗಡೆಗೊಳಿಸಲು ತೊಂದರೆಯಾಗುವುದಿಲ್ಲ.ಗ್ಯಾರಂಟಿ ಯೋಜನೆಯ ನಡುವೆಯೂ ಅನುದಾನ ತರುವುದು ಸುಲಭದ ಮಾತಲ್ಲ.ಈಗಾಗಲೇ ಎನ್ಇಎಸ್ ನಿಂದ ಹಳೇ ಬಸ್ ನಿಲ್ದಾಣದವರೆಗೆ ರಸ್ತೆ ಪೂರ್ಣ ಹಂತದಲ್ಲಿದೆ.ಕೆಶಿಪ್ ರಸ್ತೆ ಪ್ರಗತಿಯಲ್ಲಿದ್ದು ಇನ್ನು ಕೆಲವೇ ತಿಂಗಳಲ್ಲಿ ಮುಕ್ತಾಯವಾಗುತ್ತದೆ.ಇದಕ್ಕೆ ಪಕ್ಷಾತೀತವಾಗಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು.ರಾಜಕೀಯ ಬಂದಾಗ ರಾಜಕೀಯ ಮಾಡೋಣ ಇನ್ನಿತರೆ ಸಮಯದಲ್ಲಿ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ರಂಗಹನುಮಯ್ಯ ಕರೆ ನೀಡಿದರು.
ಕುದೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಟಿ.ಜಿ.ವೆಂಕಟೇಶ್ ಮಾತನಾಡಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದವರು ಅವರ ಬಗ್ಗೆ ನಮಗೂ ಅಪಾರ ಗೌರವವಿದೆ.ಅದರಂತೆ ಆಸ್ಪತ್ರೆಯೂ ಅತ್ಯಮೂಲ್ಯವಾಗಿದೆ. ಯಾವುದೇ ಧಕ್ಕೆ ಬಾರದಂತೆ ಕೆಂಪೇಗೌಡರ ಪ್ರತಿಮೆ ಸ್ಥಳಾಂತರಿಸಲಾಗುತ್ತದೆ.ಶಾಲಾ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕೆ ಯಾರೂ ಕೂಡಾ ಅಡ್ಡಿಪಡಿಸಬಾರದು.ಸಾಮಾನ್ಯ ಜನರು ಗಂಭೀರ ಖಾಯಿಲೆಗಳಿಗೆ ತುತ್ತಾದರೆ ಹೆಚ್ಚಿನ ಚಿಕಿತ್ಸೆ, ಬೆಂಗಳೂರು, ರಾಮನಗರಕ್ಕೆ ಹೋಗುವ ಪರಿಸ್ಥಿತಿಯನ್ನು ಶಾಸಕ ಬಾಲಕೃಷ್ಣರವರು ಅರ್ಥೆಸಿಕೊಂಡು 42 ಕೋಟಿ ಹಣ ಬಿಡುಗಡೆ ಮಾಡಿಸಿರುವುದು ಶ್ಲಾಘನೀಯ.ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ಯೂನಿವರ್ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾದರೆ ನುರಿತ ವೈದ್ಯರು ಬರುತ್ತಾರೆ.ಇದರಿಂದ ಬಡವರಿಗೆ ಆರೋಗ್ಯ ಸೇವೆ ದೊರೆಯುತ್ತದೆ.ಇದಕ್ಕೆ ತಾಲ್ಲೂಕಿನ ಜನತೆ ಸಹಕಾರ ನೀಡಬೇಕಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಯೋಜನೆ ತಾಲ್ಲೂಕು ಅದ್ಯಕ್ಷ ಕಲ್ಕೆರೆ ಶಿವಣ್ಣ,ಟಿಎಪಿಸಿಎಂಎಸ್ ನಿರ್ದೇಶಕ ತಿಗಳರಪಾಳ್ಯ ರಮೇಶಣ್ಣ,ಮುಖಂಡರಾದ ರೂಪೇಶ್, ಆಗ್ರೋ ಪುರುಷೋತ್ತಮ್, ತಿರುಮಲೆ ಶಿವಕುಮಾರ್, ದೊಡ್ಡಿ ಲೋಕೇಶ್, ವೆಂಕಟೇಶ್ ಸೇರಿದಂತೆ ಮತ್ತಿತರಿದ್ದರು.
ಜನತೆಯಲ್ಲಿ ಗೊಂದಲ ಸೃಷ್ಟಿಸಿರುವುದನ್ನು ಬಿಡಿ: ಕೆ.ಕೃಷ್ಣಮೂರ್ತಿ



