ಬೆಂಗಳೂರು: ಇಲ್ಲಿನ ಡಿಗ್ನಿಟಿ ಫೌಂಡೇಶನ್ ನ ಜಯನಗರ ಕಾಫಿ ಚಾವಡಿ ವಿಭಾಗದವರು ಡಿವಿಜಿ ಯವರ ಮಂಕುತಿಮ್ಮನ ಕಗ್ಗದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಯೂತ್ ಫಾರ್ ಬ್ಯಾಂಕ್ ಜಾಬ್ಸ್ ನ ಸಂಸ್ಥಾಪಕ ಅಧ್ಯಕ್ಷರಾದ ಎಂ ವೆಂಕಟೇಶ ಶೇಷಾದ್ರಿಯವರು ಮಾತನಾಡಿ ಡಿವಿಜಿ ಸರಳತೆ ಮತ್ತು ಉನ್ನತ ಚಿಂತನೆಗಾಗಿ ಹೆಸರುವಾಸಿಯಾಗಿದ್ದಾರೆ. ಡಿವಿಜಿ ಯವರು ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರಲ್ಲ. ಆದರೆ ಅವರು ಮಂಕುತಿಮ್ಮನ ಕಗ್ಗದಂತಹ ಅಪೂರ್ವ ಕೃತಿಯನ್ನು ರಚಿಸಿದರು.
ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಜೀವನಾನುಭವದ ವಿಚಾರಗಳಿವೆ. ಪ್ರತಿ ಕಗ್ಗದಲ್ಲೂ ಜೀವನದ ಮೌಲ್ಯಗಳನ್ನು ತಿಳಿಸುತ್ತದೆ ಎಂದರು.
ಇದಕ್ಕೆ ಮುಂಚೆ ಹಿರಿಯ ನಾಗರೀಕರಿಗೆ ಆಧ್ಯಾತ್ಮಿಕ ಸಂಬಂಧಿತ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬಹುಮಾನ ಪಡೆದವರ ವಿವರಗಳು : ಶ್ರೀಮತಿ ರೇಖಾ ಮತ್ತು ಪ್ರಭಾವತಿ (ಪ್ರಥಮ ಬಹುಮಾನ) ಮುಕ್ತ ಮತ್ತು ಶ್ಯಾಮಲ (ದ್ವಿತೀಯ ಬಹುಮಾನ ) ಮತ್ತು ವಸುಂಧರ ಮತ್ತು ಶೈಲಾವತಿ (ತೃತೀಯ ಬಹುಮಾನ). ವಿಜೇತರಿಗೆ ಕನ್ನಡ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡಲಾಯಿತು. ಜಯನಗರ ಕಾಫಿ ಜಾವಡಿಯವರ ಮುಖ್ಯಸ್ಥೆ ಶಾಂತಾ ಅನಿಲ್ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.