ಬೆಂಗಳೂರು: ರಾಜಾಜಿನಗರ ಆರ್.ಪಿ.ಎ. ಶಾಲೆಯ ಮೈದಾನದಲ್ಲಿ ಶ್ರೀಸಂಜೀವಿನಿ ವೀರಾಂಜನೇಯ ಸ್ವಾಮಿ ದೇವಸ್ಥಾನ ವತಿಯಿಂದ *ಪಂಚಭಾಷೆಯ ಚಲನಚಿತ್ರ ನಟಿ ಡಾ||ಲೀಲಾವತಿ ಸವಿ ನೆನಪಿನಲ್ಲಿ ಲೀಲಾವತಿ ಅಮರ ಚಲನಚಿತ್ರ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಾಜಿ ಸಚಿವರಾದ ವಿ.ಸೋಮಣ್ಣರವರು, ಚಲನಚಿತ್ರ ನಟ ವಿನೋದ್ ರಾಜ್, ಚಲನಚಿತ್ರ ನಿರ್ಮಾಪಕರುಗಳಾದ ಚಿನ್ನೇಗೌಡ, ಭಾಮ ಹರೀಶ್, ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾಮ ಗಿರೀಶ್ ಬಿಜೆಪಿ ಯುವ ನಾಯಕರಾದ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಗಂಗಭೈರಯ್ಯ,ರವೀಂದ್ರ, ಕೆ.ಉಮೇಶ್ ಶೆಟ್ಟಿ ಮತ್ತು ಬಿಜೆಪಿ ಮುಖಂಡ ಸಿ.ಎಂ.ರಾಜಪ್ಪರವರು ಡಾ.ಲೀಲಾವತಿಯವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಡಾ.ಲೀಲಾವತಿ ಅಮರ ಕಾರ್ಯಕ್ರಮ ಚಾಲನೆ ನೀಡಿದರು.
ಮಾಜಿ ಸಚಿವ ವಿ.ಸೋಮಣ್ಣರವರು ಮಾತನಾಡಿ ಕನ್ನಡ ಚಲನಚಿತ್ರರಂಗ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳದಿದೆ.
ನಾಡಿನ ಹೆಸರಾಂತ ಚಲನಚಿತ್ರ ನಟಿ ಲೀಲಾವತಿ ಅಮ್ಮ ನವರು ಪಂಚ ಭಾಷೆ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.
ಕೃಷಿ, ಪರಿಸರ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ಪರಿಸರ ನಡುವೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದರು, ಯಾರಿಗೂ ತೊಂದರೆ ಕೊಡದೇ ಸರಳ ಜೀವನ ನಡೆಸಿದರು.
ನಾನು ಸಚಿವನಾಗಿದ್ದ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಮತ್ತು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸಿದ ಮಹನೀಯರುಗಳ ಹೆಸರುಗಳನ್ನು ಎಲ್ಲ ಯೋಜನೆಗಳಿಗೆ ಹೆಸರು ಇಡಲಾಗಿದೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಸವಿನೆನಪಿನಲ್ಲಿ ಮಲ್ಟಿ ಸೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ.
ಲೀಲಾವತಿ ರವರ ಸಾಧನೆ ಕರ್ನಾಟಕ ಜನರ ಮನಸ್ಸಿನಲ್ಲಿ ಉಳಿದಿದೆ ಎಂದರು.ಸಮಾಜ ಸೇವಕರಾದ ವಿಶ್ವನಾಥ ರಾವ್ ರವರಿಗೆ ಸನ್ಮಾನಿಸಲಾಯಿತು. ಖ್ಯಾತ ಹಿನ್ನಲೆ ಗಾಯಕಿ ಶಮಿತ ಮಲ್ನಾಡ್, ಚಂದನ್ ಶೆಟ್ಟಿ, ನವೀನ್ ಸಜ್ಜುರವರಿಂದ ಸಂಗೀತ ಸಂಜೆ ಆಯೋಜಿಸಲಾಗಿತ್ತು.