ಇತ್ತೀಚಿನ ದಿನಗಳಲ್ಲಿ ಅಪರಾದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಾರ್ವಜನಿಕರಲ್ಲಿ ಕಾನೂನು ಇಲ್ಲದಿರುವುದು ಎಂದು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಲೀಗಲ್ ಆವರ್ನೆಸ್ ವಿಸ್ಡಂಮ್ ಪೋರಂ ಸಂಸ್ಥೆ ಮನೋರಾಯನ ಪಾಳ್ಯದ ಎಂ.ಎಸ್.ಕಾನ್ವೆಂಟ್ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಳವಳ ವ್ಯಕ್ತ ಪಡಿಸಿದರು.
ಕಾನೂನು ಅರಿವಿದ್ದಾಗ ಮಾತ್ರ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ ಇತ್ತೀಚಿನ ದಿನಗಳಲ್ಲಿ ಅಪರಾದ ಮನೋಭಾವ ಹೆಚ್ಚುತ್ತಿದೆ ಅದರ ಅರಿವು ಶಾಲಾ ಕಾಲೇಜುಗಳಲ್ಲಿ ಮೂಡಿಸಲು ಸರ್ಕಾರ ಕಾನೂನು ಅರಿವು ಕಾರ್ಯಕ್ರಮ ಶಿಕ್ಷಣ ಇಲಾಖೆಯಿಂದ ಆಯೋಜಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಾಸ್ಕೋ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಚಿತ್ರ ಕಲೆ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ವಿಷಯ ಅರ್ಥಮಾಡಿಕೊಂಡು ಚಿತ್ರಕಲೆ ಬಿಡಿಸಿದ್ದು ವಿಶೇಷವಾಗಿತ್ತು.ಈ ಕಾರ್ಯಕ್ರಮದಲ್ಲಿ ವಕೀಲರಾದ ಕೆ.ಪಿ.ಮಂಜುನಾಥ್ ಸಾಹಿತಿಗಳಾದ ಎಂ.ಜಿ ಶುಭಮಂಗಳ, ಪ್ರಾಂಶುಪಾಲರಾದ ನಂದಿನಿ ಪ್ರಕಾಶ್ ಕಲಾವಿದರಾದ ಡಾ: ಶಾಲಿನಿ ವಕೀಲರಾದ ಯೇಜಸ್ ಪಾಷ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ವಿಶೇಷ ಚೇತನರಾದ ನಿರ್ಮಲ ಅವರನ್ನು ಸನ್ಮಾನಿಸಲಾಯಿತು.