ಚಿಂತಾಮಣಿ: ತಾಲೂಕಿನ ಕೈವಾರದಲ್ಲಿ ಬೆಂಗಳೂರಿನ ರಾಮಯ್ಯ ಕಾನೂನು ಮಹಾವಿದ್ಯಾಲಯ ಮತ್ತು ಅಂಬೇಡ್ಕರ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಶನಿವಾರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷಿಣಿ ಎಸ್ ಎಂ ರೋಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಎಲ್ಲರೂ ಕಾನೂನಿನ ತಿಳುವಳಿಕೆಯನ್ನು ಹೊಂದಿರಬೇಕು ಮತ್ತು ನಮ್ಮ ದಿನನಿತ್ಯದ ಕಾರ್ಯಗಳಿಗೆ ಅನ್ವಯ ವಾಗುವ ಸಾಮಾನ್ಯ ಕಾನೂನುಗಳನ್ನು ತಿಳಿದುಕೊಂಡು ಅವುಗಳಿಗೆ ವಿಧೇಯರಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶ ಮಾತನಾಡಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಅಂಬೇಡ್ಕರ್ ಅವರು ಬರೆದ ಸಂವಿಧಾನದಿAದ ಬಡವ ಶ್ರೀಮಂತ ಮೇಲು-ಕೀಳು ಎಂಬ ಭೇದಭಾವ ಇಲ್ಲದೆ ಎಲ್ಲರೂ ಸಮಾನರಾಗಿ ಬಾಳಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಮಸ್ತೇನಹಳ್ಳಿ ಪಿ ಡಿ ಓ ಕವಿತ ಅವರು ಮಾತನಾಡಿದರು. ರಾಮಯ್ಯ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರರಾದ ಡಾ. ಉಮಾ ಮಹೇಶ್ ಮತ್ತು ಪ್ರೊ ಸತ್ಯ ನಾರಾಯಣ ಅವರ ಮಾರ್ಗದರ್ಶನದಲ್ಲಿ ಕಾನೂನು ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆ, ಬಾಲಕಾರ್ಮಿಕರ ಪದ್ಧತಿ, ಬಾಲ್ಯ ವಿವಾಹ ಇನ್ನು ಮುಂತಾದ ಕಾಯ್ದೆಗಳ ಬಗ್ಗೆ ಕಿರು ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಿದರು ಮತ್ತು ಆ ಕಾನೂನುಗಳನ್ನು ಉಲ್ಲಂಘನೆ ಆದರೆ ಏನು ಶಿಕ್ಷೆ ಇದೆ ಎಂಬುದರ ಬಗ್ಗೆ ಮನ ಮುಟ್ಟುವ ಹಾಗೆ ತಿಳಿಸಿಕೊಟ್ಟರು.
ಕಾನೂನು ವಿದ್ಯಾರ್ಥಿಗಳಾದ ಕುಶಾಲ್ ನಾಯ್ಡು, ನಿಶ್ಚಿತ್, ನಿಹಾರಿಕಾ, ಸಾಹಿಲ್ ಹಾಗೂ ಶಾಲೆಯ ಶಿಕ್ಷಕರ ಲೋಕೇಶಪ್ಪ, ಧನುಷ್ ಕುಮಾರ, ಉಮೇಶ, ರತ್ನಾ, ವೆಂಕಟೇಶ್ ಬಾಬು, ಶ್ರೀಧರ್ ಹಿರೇಮಠ ಉಪಸ್ಥಿತರಿದ್ದರು