ಅಪ್ಪುರವರ ಜನ್ಮ ದಿನದ ಅಂಗವಾಗಿ ಅಪ್ಪು ಅಭಿಮಾನಿಗಳಿಗೆ ಲೆಜೆಂಡ್ ಡೈರೆಕ್ಟರ್ ಚಿತ್ರ ತಂಡದಿಂದ ಕರುನಾಡ ರಾಜಕುಮಾರ ಎಂಬ ಗೀತೆಯನ್ನು ಮಾಸ್ ಮ್ಯೂಸಿಕ್ ಅಡ್ಡ ಎಂಬ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದು, ಈ ಗೀತೆ ಅಭಿಮಾನಿಗಳಿಗೆ ಬಹಳ ಅಪ್ಪುಗೆಯಾಗಿದೆ. ಈ ಗೀತೆಗೆ ಪ್ರಣವ್ ಸತೀಶ್ ರವರ ಸಂಗೀತ ನಿರ್ದೇಶನವಿದ್ದು,
ಪೃಥ್ವಿರಾಜ್ ಸಂಕಿ ರವರು ಸಾಹಿತ್ಯ ರಚನೆ ಮಾಡಿದ್ದಾರೆ ಹಾಗೂ ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದರಾಜು ರವರು ತಮ್ಮ ಸುಮಧುರವಾದ ಕಂಠದಿಂದ ಹಾಡಿದ್ದಾರೆ.ಲೆಜೆಂಡ್ ಡೈರೆಕ್ಟರ್ ಚಿತ್ರ ತಂಡವು ಅಪ್ಪು ರವರ ಪುಣ್ಯ ಭೂಮಿಗೆ ಭೇಟಿ ನೀಡಿ ಅಭಿಮಾನಿಗಳಿಗೆ ತಂಪಾದ ಮಜ್ಜಿಗೆ ವಿತರಣೆ ಮಾಡಿದ್ದಾರೆ.
ಚಿತ್ರ ತಂಡದ ಜೊತೆಗೆ ಅಣ್ಣಾವ್ರ ಮಗಳಾದ ಶ್ರೀಮತಿ ಲಕ್ಷ್ಮಿ ಗೋವಿಂದರಾಜು, ಶ್ರೀ ಗೋವಿಂದರಾಜು ಹಾಗೂ ಶ್ರೀ ಷಣ್ಮುಖ ಗೋವಿಂದರಾಜು ರವರು ಭಾಗವಹಿಸಿದ್ದರು.ಲೆಜೆಂಡ್ ಡೈರೆಕ್ಟರ್ ಸಿನಿಮಾವು ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ನವಿಲುಗರಿ ನವೀನ್ ಪಿ ಬಿ ಕಥೆ, ಚಿತ್ರ-ಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜೊತೆಗೆ ನಾಯಕ ನಟರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ರೀತ್ಯಾ ರಾಘವೇಂದ್ರ ನಾಯಕ ನಟನಿಗೆ ಜೋಡಿಯಾಗಿದ್ದಾರೆ, ಶ್ರೀಮತಿ ವಿಶಾಲ ಸತೀಶ್ ಸಹ ನಿರ್ಮಾಪಕರಾಗಿದ್ದಾರೆ. ಪ್ರಣವ್ ಸತೀಶ್ ಸಂಗೀತ ನಿರ್ದೇಶನ, ಕ್ಯಾಮೆರಾ ಕೆಲಸ ಹಾಗೂ ಸಂಕಲನ ಗೌತಮ್, ಶಿವಾಜಿ, ಮತ್ತು ಲಲಿತ್ ಕೃಷ್ಣ ನಿರ್ದೇಶನದ ತಂಡದಲ್ಲಿದ್ದಾರೆ. ಇದರ ಜೊತೆಗೆ ಈ ಸಿನಿಮಾದಲ್ಲಿ ಸಾಕಷ್ಟು ಹಿರಿಯ ನಿರ್ದೇಶಕರು ಹಾಗೂ ದೊಡ್ಡ ಸ್ಟಾರ್ ನಟರುಗಳು ಕೂಡ ನಟನೆ ಮಾಡಿದ್ದಾರೆ. ಆದಷ್ಟು ಬೇಗ ಅವರುಗಳ ಬಗ್ಗೆ ಕೂಡ ತಿಳಿಸುವುದಾಗಿ ಸಿನಿಮಾ ತಂಡ ತಿಳಿಸಿದೆ.