ಲೆಜೆಂಡ್ಸ್ ಪ್ರೊ ಟಿ೨೦ ಲೀಗ್ ಮೊದಲ ಆವೃತ್ತಿ ೨೦೨೬ರ ಜನವರಿ ೨೬ರಿಂದ ಫೆಬ್ರವರಿ ೪ ರವರೆಗೆ ಗೋವಾದಲ್ಲಿ ನಡೆಯಲಿದ್ದು, ಆರು ಫ್ರಾಂಚೈಸಿ ತಂಡಗಳು ಮತ್ತು ೯೦ ದಿಗ್ಗಜ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ವೆರ್ನಾದಲ್ಲಿ ಹೊಸದಾಗಿ ಉದ್ಘಾಟಿಸಲಾದ ೧೯೧೯ ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಲೀಗ್ ನಡೆಯಲಿದೆ. ಲೆಜೆಂಡ್ಸ್ ಪ್ರೊ ಟಿ೨೦
ಲೀಗ್ ವಿಶ್ವ ಕ್ರಿಕೆಟ್ ಅತ್ಯುತ್ತಮ ಹಿರಿಯ ಆಟಗಾರರನ್ನು ಒಟ್ಟುಗೂಡಿಸಲಿದೆ. SG ಗ್ರೂಪ್ ಪ್ರಾಯೋಜಕತ್ವದ ಲೆಜೆಂಡ್ಸ್ ಪ್ರೊ ಟಿ೨೦ ಲೀಗ್ ವಿಶ್ವ ದಿಗ್ಗಜ ಕ್ರಿಕೆಟಿಗರನ್ನು ಒಟ್ಟುಗೂಡಿಸಲಿದೆ, ಈ ಟೂರ್ನಿಯಲ್ಲಿ ಭಾರತದ ಮಾಜಿ ಓಪನರ್ ಶಿಖರ್ ಧವನ್, ಸ್ಪಿನ್ನರ್ ಹರ್ಭಜನ್ ಸಿಂಗ್, ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವಾಟ್ಸನ್, ಬ್ಯಾಟರ್ ಮೈಕಲ್ ಕ್ಲಾರ್ಕ್ ದಕ್ಷಿಣ
ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಮೊದಲಾದ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.
ಗೋವಾದಲ್ಲಿ ಕ್ರಿಕೆಟ್ ಮನರಂಜನೆ: ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರನ್ನು ಲೀಗ್ ಕಮಿಷನರ್ ಆಗಿ ನೇಮಕ ಮಾಡಲಾಗಿದ್ದು ಈ ಬಗ್ಗೆ ಮಾತನಾಡಿದ ಅವರು, “ಕ್ರಿಕೆಟ್ನ ಅತಿದೊಡ್ಡ ನೆಲೆಗಳಲ್ಲಿ ಒಂದಾಗಿರುವ ಭಾರತವು ನನಗೆ ವಿಶೇಷ ಜವಾಬ್ದಾರಿಯನ್ನು ಹೊರಿಸಿದೆ. ಅಭಿಮಾನಿಗಳ ಉತ್ಸಾಹ, ಹೆಮ್ಮೆ ಮತ್ತು ಈ ಲೀಗ್ನ ಭಾಗವಾಗಲು ಸಿಕ್ಕಿರುವ ಸವಲತ್ತು ಮತ್ತು ಕೆಲವು ಹಳೆಯ ಸ್ನೇಹಿತರು ಹಾಗೂ ತೀವ್ರ ಪ್ರತಿಸ್ಪರ್ಧಿಗಳೊಂದಿಗೆ ಮತ್ತೆ ಒಂದಾಗುವ ಅವಕಾಶ, ಇದನ್ನು ನಿಜವಾಗಿಯೂ ಲೀಗ್ ಅನ್ನು ವಿಶೇಷವಾಗಿಸಲಿದೆ.
ಈ ಹೊಸ ಜವಾಬ್ದಾರಿಯೊಂದಿಗೆ ಲೆಜೆಂಡ್ಸ್ ಪ್ರೊ ಟಿ೨೦ ಲೀಗ್ನ ಭಾಗವಾಗಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.



