ಬೆಂಗಳೂರು : ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ದಿನಾಂಕ : ೦೮.೧೨.೨೦೨೫ ರಿಂದ ೧೯.೧೨.೨೦೨೫ ರವರೆಗೆ ನಡೆಯಲಿರುವ ಕಾರ್ನಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಅಧಿವೇಶನ ನಡೆಯಲಿದೆ. ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡೂ ಸದನಗಳ ಅಧಿವೇಶನವು ದಿನಾಂಕ ೦೮.೧೨.೨೦೨೫ ರಂದು ಪೂರ್ವಾಹ್ನ ೧೧.೦೦ ಗಂಟೆಗೆ (ಸೋಮವಾರ) ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಪ್ರಾರಂಭವಾಗಲಿದ್ದು, ಸದನದ ತಾತ್ಕಾಲಿಕ ಕಾರ್ಯಕ್ರಮದ ವಿವರಗಳು ಈ ಕೆಳಕಂಡAತಿವೆ. ಅಧಿವೇಶನದಲ್ಲಿ ಇಲಾಖೆಗೆ ಸಂಬAಧಿಸಿದAತೆ ಸದನದಲ್ಲಿ ಮಾನ್ಯ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಮಂಡಿಸಲಿರುವ ಪ್ರಶ್ನೆಗಳಿಗೆ ಸಂಬAಧಿಸಿದAತೆ ಸದನದಲ್ಲಿ ಪ್ರಸ್ತಾಪಿಸಬಹುದಾದ ವಿಷಯಗಳ ಕುರಿತು ಮಾಹಿತಿಯನ್ನು ಟಿಪ್ಪಣಿ ರೂಪದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿ ಕೊಳ್ಳಲು ಕೋರಿದೆ. ೨. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪೊಲೀಸ್ ಪ್ರಧಾನ ಕಛೇರಿಯಿಂದ ಕಳುಹಿಸಿದ ವಿಧಾನ ಸಭೆ/ ವಿಧಾನ ಪರಿಷತ್ತಿನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ತಯಾರಿಸಿ ಶೀಘ್ರ ಮಾಹಿತಿಯನ್ನು ಸಲ್ಲಿಸುವುದು. ಈ ಸಂಬAಧ ಘಟಕಾಧಿಕಾರಿಗಳಿಗೆ ಕೆಳಕಂಡ ನಿರ್ದೇಶನಗಳನ್ನು ನೀಡಲಾಗಿದೆ.



