ಬೇಲೂರು: ತೋಟದಲ್ಲಿ ಮೇಯಲು ಹೋಗಿದ್ದ ಹಸುವನ್ನು ಚಿರತೆಯೊಂದು ಅರ್ಧಂಬರ್ಧ ತಿಂದು ಹಾಕಿರುವ ಘಟನೆ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಬೇಲೂರು ಪಟ್ಟಣ ಸಮೀಪದ ಮಲ್ಲಾಪುರ ಗ್ರಾಮದ ಸುಬ್ರಹ್ಮಣ್ಯ ಎಂಬುವವರಿಗೆ ಸೇರಿದ ಅಡಕೆ ತೋಟಕ್ಕೆ ಹಸುವೊಂದು ಮೇಯಲು ಹೋಗಿದೆ. ಈ ಸಂದರ್ಭ ಹಸು ಮೇಲೆ ದಾಳಿ ನಡೆಸಿ ಅರ್ಧಂಬರ್ದ ತಿಂದು ತೆರಳಿದೆ.
ಬೆಳಗ್ಗೆ ಎಂದಿನಂತೆ ಜಮೀನಿನ ಮಾಲೀಕ ಸುಬ್ರಹ್ಮಣ್ಯ ತೋಟಕ್ಕೆ ಹೋದಾಗ ಹಸುವಿನ ಅರ್ಧಂಬರ್ಧ ದೇಹ ಕಂಡು ಗಾಬರಿಯಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ವಲಯ ಅರಣ್ಯಧಿಕಾರಿ ವಿನಯ್ ಕುಮಾರ್, ಉಪ ಅರಣ್ಯಾಧಿಕಾರಿ ಮಂಜೇಗೌಡ ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಹಸುವನ್ನು ಚಿರತೆಯೇ ತಿಂದಿದೆ ಎಂಬುದನ್ನು ಕಾತ್ರಿ ಪಡಿಸಿ, ಹಸುವಿನ ಮಾಲೀಕರಿಗೆ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದ್ದಾರೆ. ಪಶು ವೈದ್ಯಾಧಿಕಾರಿ ಹರ್ಷ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.