ಬೆಂಗಳೂರು : ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿಶ್ವೇಶ್ವರಯ್ಯ ಲೇಔಟ್ನ ಬಸವೇಶ್ವರ ದೇವಸ್ಥಾನದ ಬಳಿ ರಾತ್ರಿ ೧೧:೩೦ ಸುಮಾರಿಗೆ ಚಿರತೆ ಕಾಣಿಸಿಕೊಂಡಿದ್ದ ರಿಂದ ನಾಗರಿಕರು ಭಯಪಟ್ಟು ಪೊಲೀಸ್ ಕಂಟ್ರೋಲ್ ರೂಂ ೧೧೨ಕ್ಕೆ ರಾತ್ರಿ ಕರೆ ಮಾಡಿರುತ್ತಾರೆ.
ಕೆಂಗೇರಿ ಹೊಯ್ಸಳ ಸಿಬ್ಬಂದಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಸ್ಥಳಕ್ಕೆ ಹೋಗಿ ನೋಡಲಾಗಿ ಚಿರತೆ ಕಾಣಿಸದೆ ಇದ್ದ ಪರಿಣಾಮ ಮುಂಜಾಗ್ರತೆ ಕ್ರಮವಾಗಿ ಅರಣ್ಯ ಇಲಾಖೆಗೆ ತಿಳಿಸಿರುತ್ತಾರೆ ಎಂದು ನೈರುತ್ಯ ಡಿಸಿಪಿ ರವರು ತಿಳಿಸಿರುತ್ತಾರೆ.



