ಬೆಂಗಳೂರು: ಕಳೆದೆರಡು ದಿನಗಳ ಹಿಂದೆ ಬೊಮ್ಮನಹಳ್ಳಿ ಭಾಗದ ಕೂಡ್ಲು ಸಮೀಪ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ. ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿದೆ. ಆದ್ರೆ, ಅರಣ್ಯಾಧಿಕಾರಿಗಳ ಕೈಗೆ ಸಿಗದೇ ಅತ್ತ ಬೋನಿಗೆ ಬೀಳದೇ ಆಟವಾಡಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಚರಣೆಗಳಿದ ಅರಣ್ಯಾಧಿಕಾರಿಗಳು, ಅರವಳಿಕೆ ಮದ್ದನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಅರವಳಿಕೆ ಚುಚ್ಚುಮದ್ದು ನಿಡುವ ವೇಳೆ ವೈದ್ಯ ಕಿರಣ್ ಮೇಲೆ ದಾಳಿ ಮಾಡಿ ಪರಾರಿಯಾಗಿದೆ.
ಅರವಳಿಕೆ ಚುಚ್ಚುಮದ್ದು ನೀಡಲು ಬಂದಿದ್ದ ವೈದ್ಯ ಕಿರಣ್ ಮೇಲೆ ಚಿರತೆ ದಾಳಿ ಕುತ್ತಿಗೆಗೆ ಪರಚಿದೆ.
ಕೂಡಲೇ ಅಂಬ್ಯುಲೆನ್ಸ್ ಮೂಲಕ ವೈದ್ಯ ಕಿರಣ್ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ವೇಳೆ ಚಿರತೆ ಶಾರ್ಪ್ ಶೂಟರ್ ಮೇಲೂ ದಾಳಿ ಮಾಡಿದೆ. ಲೆಪರ್ಡ್ ಟಾಸ್ಕ್ಫೋರ್ಸ್ ಶಾರ್ಪ್ ಶೂಟರ್ ಧನ್ರಾಜ್ ಎನ್ನುವರಿಗೆ ಕಾಲು ಮತ್ತು ಭುಜಕ್ಕೆ ಗಾಯವಾಗಿದೆ.
ಹಾಗೇ ಕಾರ್ಯಚರಣೆಯಲ್ಲಿರುವ ಬಿಬಿಎಂಪಿ ಸಿಬ್ಬಂದಿ ಮಹೇಶ್ ಮೇಲೂ ದಾಳಿ ಮಾಡಿದ್ದು, ಅವರ ಕಾಲಿಗೆ ಗಾಯವಾಗಿದೆ.
ಈ ಹಿನ್ನೆಲೆಯಲ್ಲಿ ಮೂವರು ಚಿಕಿತ್ಸೆಗೆ ತೆರಳಿದ್ದಾರೆ.ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ, ಆ ಅರವಳಿಕೆ ನೀಡಿದ 15 ನಿಮಿಷ ಮಾತ್ರ ಪವರ್ ಇರುತ್ತೆ. ಇಘ ಅರವಳಿಕೆ ಮದ್ದು ನೀಡಿ 20 ನಿಮಿಷ ಕಳೆದಿದೆ. ಹೀಗಾಗಿ ಚಿರತೆ ಮತ್ತೆ ಆ್ಯಕ್ಟಿವ್ ಆಗಿರುವ ಸಾಧ್ಯತೆ ಇದೆ. ಇದರಿಂದ ಅರಣ್ಯ ಸಿಬ್ಬಂದಿ ಅಲರ್ಟ್ ಆಗಿದ್ದು, ಕಾರ್ಯಚರಣೆ ಮುಂದುವರೆಸಿದ್ದಾರೆ.