ದೊಡ್ಡಬಳ್ಳಾಪುರ: ಕೇಂದ್ರದ ಅಡಿಯಲ್ಲಿ ಶ್ರಮಿಸುವ ಯೋಧರು ಎಂದು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವ ಪರಿಸ್ಥಿತಿ ಅರಸೇನಾ ಪಡೆಗಳಿಗೆ ಎದುರಾಗಿದೆ ಎಂದ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್.ಕೇಂದ್ರೀಯ ಅರಸೇನಾ ಪಡೆಗಳ ಮಾಜಿಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2019ನೇ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿಎಫ್ ನ ವೀರ ಯೋಧರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ .
ಹುತಾತ್ಮರಿಗೆ 5ನೇ ವಾರ್ಷಿಕ ಸ್ಮರಣಾಂಜಲಿ ಹಾಗೂ ಅರಸೇನಾ ಪಡೆಯ ಸಮಾವೇಶ ಕಾರ್ಯಕ್ರಮವನ್ನ ಯಲಹಂಕದ ಸಿಆರ್ ಪಿ ಎಫ್ ಗ್ರೂಪ್ ಸೆಂಟರ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ದೇಶಕಾಯುವ ಯೋಧರಿಗೆ ತಾರತಮ್ಯ ಭಾವನೆಯಿಂದ ನೋಡುವುದು ಸರಿಯಲ್ಲ.
ಇದು ಕೇಂದ್ರ ಸರ್ಕಾರದ ವೈಫಲ್ಯ ದೇಶ ಕಾಯುವ ಯೋಧ ತನ್ನ ಸೌಲಭ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ . ಸದಾ ದೇಶ ಸೇವೆಯಲ್ಲಿರುವ ಯೋಧ ನಿವೃತ್ತಿ ನಂತರ ತನ್ನ ಸೌಲಭ್ಯಗಳಿಗೆ ಬೇಡಿಕೊಳ್ಳುವ ಪರಿಸ್ಥಿತಿಯು ಬದಲಾಗಬೇಕಿದೆ. ದೇಶದ ಆಧಾರ ಸ್ಥಂಬಗಳಾದ ಯೊಧ, ರೈತ, ಕೃಷಿಕಾರ್ಮಿಕ ಹಾಗೂ ಕಾರ್ಮಿಕರನ್ನು ಕಡೆಗಣಿಸುವುದು ಸರಿಯಲ್ಲ.
ಬೆಂಗಳೂರು ನಗರ ಅಭಿವೃದ್ಧಿ ಜವಾಬ್ದಾರಿಹೊತ್ತಿರುವ ನಾನು ನಗರ ಅಭಿವೃದ್ಧಿ ಇಲಾಖೆಯಲ್ಲಿ ಯೋಧರಿಗೆ ನೀಡಬಹುದಾದ ಹುದ್ದೆ
ಗಳನ್ನು ನೀಡುವ ಕುರಿತು ಚರ್ಚಿಸಿ ಉತ್ತಮ ತೀರ್ಮಾನ ಕೈಗೊಳ್ಳುತ್ತೇನೆ ಹಾಗೂ ಮಾಜಿ ಯೋಧರ ಮನವಿಯನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ತಿಳಿಸಿದರು, ಅರೇಸೇನಾ ಪಡೆ ಯೋಧರ ಸಮಸ್ಯೆ ಕುರಿತು ಸುಧೀರ್ಘವಾಗಿ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳಲಾಗುವುದು,
ಸದಾ ದೇಶದ ರಕ್ಷಣೆ ಹಾಗೂ ಹಿತಕ್ಕಾಗಿ ಶ್ರಮಿಸುವಯೋಧರ ನೋವನ್ನು ಶೀಘ್ರವಾಗಿ ಬಗೆಹರಿಸ ಲಾಗುವುದು, ಈ ಹಿಂದೆ ನಮ್ಮ ಸರ್ಕಾರ ನೀಡಿದಪ್ರತ್ಯೇಕ ಸೈನಿಕ್ ಬೋರ್ಡನ್ನು ನಂತರ ಬಂದ ಬಿಜೆಪಿ ಸರ್ಕಾರ ತೆರವುಗೊಳಿಸಿದೆ ಎಂದು ತಿಳಿಸಿದ್ದಾರೆ ಈ ಕುರಿತು ಚರ್ಚಿಸಿ ಮಾಜಿ ಸೈನಿಕರ ಬೋರ್ಡ್ ಕುರಿತು ಮನುಸ್ಥಾಪನೆ ಚಿಂತಿಸಲಾಗುವುದು ಎಂದು ತಿಳಿಸಿದರು.
ನಂತರ ಮಾತನಾಡಿ ಹೆಚ್.ಆರ್. ಸಿಂಗ್ ಪುಲ್ವಾಮ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುವ ಈ ಬೃಹತ್ ಸಮಾವೇಶ ವಿಶೇಷವಾಗಿದ್ದು .ಮಾಜಿ ಯೋಧರ ಹಲವು ಕುಂದು ಕೊರತೆಗಳನ್ನು ಸ್ಥಳೀಯ ಸರ್ಕಾರದ ಪ್ರತಿನಿಧಿಗಳ ಮುಂದೆ ಮಂಡಿಸಲು ಉತ್ತಮ ವೇದಿಕೆಯಾಗಿರುವುದು ಮಾಜಿ ಯೋಧರ ಭಾಗ್ಯವೆಂದರೆ ತಪ್ಪಾಗಲಾರದು,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರೇಸೇನಾ ಪಡೆಗಳ ಬೇಡಿಕೆಗಳನ್ನು ಅರಿತು ತ್ವರಿತವಾಗಿ ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ವಕ್ತಾರರಾದ ನಿಕೇತ್ ರಾಜ್ ಮೌರ್ಯ ಮಾತನಾಡಿ ಹಲವಾರು ಸಂದರ್ಭಗಳಲ್ಲಿ ದೇಶದ ಗೌರವ ಹಾಗೂ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಅರೆಸೇನಾ ಪಡೆಗಳ ಮಾಜಿ ಯೋಧರು ತಮ್ಮ ಹಕ್ಕಿಗಾಗಿ ಬೀದಿಯಲ್ಲಿ ನಿಂತಿರುವುದು ಶೋಚನೀಯ ಸಂಗತಿ, ಮಾಜಿ ಯೋಧರು ಕೇಳುತ್ತಿರುವುದು ಬಿಕ್ಷೆಯಲ್ಲ ಅವರ ಹಕ್ಕನ್ನು ಕೇಳುತ್ತಿದ್ದಾರೆ .
ಈಗಿನ ಸರ್ಕಾರಗಳು ಅರೆಸೇನಾ ಪಡೆಗಳ ಮಾಜಿ ಯೋಧರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರಗಳ ಆದ್ಯಕರ್ತವ್ಯವಾಗಿದೆ, ದೇಶ ಕಾಯುವ ಯೋಧನಿಗೆ ಯಾವುದೇ ಜಾತಿ,ಧರ್ಮದ,ಪಕ್ಷಗಳಿಲ್ಲ ಯೋಧರ ಸೇವೆ ಬಯಸುವ ಸರ್ಕಾರಗಳಿಗೆ ಯೋಧರ ಕಷ್ಟ ಕೇಳುವ ಕಿವಿ ಇಲ್ಲದಿರುವುದು ವಿಪರ್ಯಾಸವೇ ಸರಿ , ಯೋಧರ ಈ ಮನವಿಯನ್ನು ಸರ್ಕಾರದ ಗಮನಕ್ಕೆ ಖಂಡಿತ ತರಲಾಗುವುದು ಎಂದು ತಿಳಿಸಿದರು .
ನಿವೃತ್ತ ಸೈನಿಕ ಅನಂತ ರಾಜಗೋಪಾಲ ಮಾತನಾಡಿ ದೇಶದ ಗಡಿಯನ್ನು ಹಗಲು ರಾತ್ರಿ ಎನ್ನದೆ ಕಾಯುವವರು ದೇಶಕ್ಕೆ ಯಾವುದೇ ಅಪತ್ತು ಎದುರಾದಲ್ಲಿ ಎದೆಯೋಡ್ಡಿ ನಿಂತು ತನ್ನ ಪ್ರಾಣವನ್ನು ಲೆಕ್ಕಿಸದೇ ಹೋರಾಡುವ ಯೋಧ ತನ್ನ ಕರ್ತವ್ಯದಿಂದ ನಿವೃತ್ತಿ ಹೊಂದಿದ ನಂತರ ತನ್ನ ತವರಿಗೆ ಅಥವಾ ತಾಯ್ನಾಡಿಗೆ ಬಂದರೆ ಇಲ್ಲಿ ಅವನೊಬ್ಬ ಮಾಮೂಲು ಸೆಕ್ಯೂರಿಟಿ ಗಾರ್ಡ್ (ಕಾವಲುಗಾರ) ಸೇವೆ ಸಲ್ಲಿಸುವ ಪರಿಸ್ಥಿತಿ ಇದೆ.
ಕಾರ್ಯಕ್ರಮದಲ್ಲಿ ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ, ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಹೆಚ್ ಕೃಷ್ಣಪ್ಪ, ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಅನಂತ ರಾಜಗೋಪಾಲ, ನರಸಿಂಹಮೂರ್ತಿ ಸೇರಿದಂತೆ ಸಾವಿರಾರು ಮಾಜಿ ಯೋಧರು ಉಪಸ್ಥಿತರಿದ್ದರು.