ಶಿಡ್ಲಘಟ್ಟ: “ಬದುಕಲ್ಲಿ ಬೆಳಕು ತರುವ ದೀಪಾವಳಿಯ ಸಂಭ್ರಮ ಪ್ರತಿಯೊಬ್ಬರ ಮನ ಮತ್ತು ಮನೆಯನ್ನು ಬೆಳಗಬೇಕು.ಸಿಹಿ ಕಜ್ಜಾಯ, ಹೊಸ ಬಟ್ಟೆ ಧರಿಸಿ
ನಾವೆಲ್ಲರೂ ಎಣ್ಣೆಯ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಹಬ್ಬ ಆಚರಿಸೋಣ. ಆಡಂಬರದ ಪ್ರದರ್ಶನಕ್ಕೆ ಪಟಾಕಿ ಸಿಡಿಸಿ ಅಪಾಯ ತಂದುಕೊಳ್ಳುವುದು ಬೇಡ” ಎಂದು ಹೇಳುವ ಮೂಲಕ ನಗರದ ಗರುಡಾದ್ರಿ ಶಾಲಾ ಮಕ್ಕಳು ಇಂದು ನಗರದ ಪೋಲೀಸ್ ಠಾಣೆಗೆ ಬಂದು ಹಿರಿಯ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ಅಭಿಯಾನ ಮಾಡಿದರು.
ಪ್ರತಿವರ್ಷ ದೀಪಾವಳಿ ಹಬ್ಬದ ಸಂಭ್ರಮದAದು ಮಕ್ಕಳು ಮತ್ತು ಹಿರಿಯರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವಾಗ ನಡೆಯುವ ಅವಘಡಗಳಿಗೆ ತುತ್ತಾಗಿದ್ದಾರೆ. ಹೂಕುಂಡ ಹಚ್ಚಿದಾಗ ಸಂಭ್ರಮಿಸುವುದು ಸಹಜ ಆದರೆ ಅದು ಸಿಡಿದಾಗ ಆಗುವ ಅನಾಹುತ ಕಣ್ಣುಗಳನ್ನು ಸುಡುತ್ತದೆ. ಶಾಶ್ವತವಾಗಿ ಕಣ್ಣು
ತನ್ನ ದೃಷ್ಟಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಅನಾಹುತಗಳಿಗೆ ಈಡಾಗದಂತೆ ಅಭಿಯಾನ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು
ಗರುಡಾದ್ರಿ ಶಾಲಾ ಮಕ್ಕಳಿಂದ ನಡೆದಿದೆ.
ತಾಲೂಕು ತಹಸಿ?ದಾರ್ ಕುಮಾರಿ ಗಗನ ಸಿಂಧು, ಚಿಂತಾಮಣಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಹಾಗೂ ಸರ್ಕಲ್ ಇನ್ಸೆ÷್ಪಕ್ಟರ್ ಎಂ. ಶ್ರೀನಿವಾಸ್, ನಗರ ಪೊಲೀಸ್ ಠಾಣೆ ಸಬ್ ಇನ್ಸೆ÷್ಪಕ್ಟರ್ ವೇಣುಗೋಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ದೀಪಾವಳಿ ಪ್ರತಿಯೊಬ್ಬರ ಮನೆ ಮತ್ತು
ಮನಗಳನ್ನು ಜ್ಞಾನದಿಂದ ಬೆಳಗಲಿ. ಶಬ್ದ ಮಾಲಿನ್ಯ ಉಂಟುಮಾಡುವ ಮತ್ತು ಪಟಾಕಿಗಳಿಂದ ತೊಂದರೆಗೆ ಒಳಗಾಗುವ ಅಪಾಯಗಳಿಂದ ದೂರವಿರುವಂತೆ
ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ