ಬೆಂಗಳೂರು: ದಾಸರಹಳ್ಳಿ ವಾರ್ಡ್ ಬಸವ ವನ ಉದ್ಯಾನವನದಲ್ಲಿ ಬಸವ ಜಯಂತಿ ಅಚರಣೆ ಪ್ರಯುಕ್ತ ಮಾಜಿ ಸಚಿವರು, ತುಮಕೂರು ಲೋಕಸಭಾ ಅಭ್ಯರ್ಥಿ
ವಿ. ಸೋಮಣ್ಣ ಕಾಯಕ ಯೋಗಿ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಪಾಲಿಕೆ ಸದಸ್ಯರಾದ ದಾಸೇಗೌಡ, ಬಿಜೆಪಿ ಮುಖಂಡರುಗಳಾದ ಶ್ರೀಧರ್, ಹೆಚ್.ರಮೇಶ್, ವೇಣುಗೋಪಾಲ್, ವಾರ್ಡ್ ಅಧ್ಯಕ್ಷ ಹರೀಶ್ ರವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಮಾತನಾಡಿದ ವಿ.ಸೋಮಣ್ಣ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ದಾಂತ ಕಾಯಕ ಮಹತ್ವವನ್ನು ವಿಶ್ವಕ್ಕೆ ಸಾರಿದ ಮಹಾನ್ ಸಂತ ಕಾಯಕ ಯೋಗಿ ಜಗಜ್ಯೋತಿ ಬಸವೇಶ್ವರರು. 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಮೊದಲನೇಯ ಸಂಸತ್ತು ಸ್ಥಾಪಕ ಬಸವೇಶ್ವರರು.
ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ತೊಲಗಿಸಲು ಕಾಯಕಯೋಗಿ ಬಸವೇಶ್ವರರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಿದಾಗ ಮಾತ್ರ ಸಮಾನತೆ, ಜಾತಿ ನಿರ್ಮೂಲನೆ ಹಾಗೂ ಸಮ ಸಮಾಜ ನಿರ್ಮಾಣ ಮಾಡಬಹುದು ಎಂದರು.ಪ್ರತಿಯೊಬ್ಬರು ಶ್ರದ್ದೆ, ಭಕ್ತಿಯಿಂದ ತಮ್ಮ ಕಾಯಕ ಮಾಡಬೇಕು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜಕ್ಕೆ ಉಪಯೋಗ ಮಾಡಬೇಕು ಹಾಗೂ ದಾಸೋಹ ಮಹತ್ವವನ್ನು ಸಾರಿದರು.
ಇಂದಿನ ಕಲುಷಿತ ಸಮಾಜವನ್ನು ಸರಿಪಡಿಸಲು ಪ್ರತಿಯೊಬ್ಬರು ಜಗಜ್ಯೋತಿ ಬಸವೇಶ್ವರರು ಸಿದ್ದಾಂತವನ್ನು ಜೀವನದಲ್ಲಿ ಜೀವನದಲ್ಲಿ ಆಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಲೋಕಸಭಾ ಚುನಾವಣೆ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. 400ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಲಿದೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.