This is the title of the web page
This is the title of the web page

ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪುರುಷರ ಹಾಗೂ ಮಹಿಳೆಯರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ

ಬೇಲೂರು: ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೊಟ್ಟ ಮೊದಲ ಬಾರಿಗೆ ಮೂರು ದಿನಗಳ ಕಾಲ ರಾಷ್ಟ್ರ ಮಟ್ಟದ ಪುರುಷರ ಹಾಗೂ ಮಹಿಳೆಯರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ನಗರದ ಜೂನಿಯರ್ ಕಾಲೇಜು ಮೈದಾನ
ದಲ್ಲಿ ಆಯೋಜಿಸಲಾಗಿತ್ತು.

ಪದ್ಯಾವಳಿಯಲ್ಲಿ ದೇಶದ ನಾನಾ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದು,ಪಂದ್ಯಾವಳಿಯನ್ನು ವೀಕ್ಷಿಸಲು ದಿನ ನಿತ್ಯ ಸಾವಿರಾರು ಜನರು ಆಗಮಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿ  ಪ್ರೋತ್ಸಾಹಿಸಿದರು.

ಮೊದಲ ದಿನ ಸ್ಥಳಿಯ ಕ್ರೀಡಾಪಟುಗಳಿಗೆ ಅವಕಾಶ ನೀಡಿದ್ದು,ಮಹಿಳೆಯರು ಸೇರಿದಂತೆ ವಿಜೇತರಿಗೆ, ನಗದು,ಪಾರಿತೋಷಕ ಪ್ರಶಸ್ತಿಗಳನ್ನು ನೀಡಲಾಯಿತು.ಪಂದ್ಯದಲ್ಲಿ ಮೊದಲನೆ ಬಹುಮಾನವನ್ನು ಬೆಂಗಳೂರಿನ RWF ತಂಡ ಪಡೆದರೆ,ಎರಡನೇ ಬಹುಮಾನವನ್ನು ಬೆಂಗಳೂರಿನMEG  ತಂಡ ಪಡೆದರೆ,ಮೂರನೆ ಬಹುಮಾನವನ್ನುASC ತಂಡ.ನಾಲ್ಕನೆ ಬಹುಮಾನವನ್ನು ಮಂಡ್ಯ ಜಿಲ್ಲೆ ತಂಡ ಪಡೆದು,ಜಯಬೇರಿ ಗಳಸಿದವು.

ಇನ್ನು ರಾಜ್ಯ ಮಟ್ಟದ ಮಹಿಳೆಯರಲ್ಲಿ ಮೊದಲನೆ ಸ್ಥಾನ ಜೈ ಮಾಕಾಳಿ ತಂಡ,ಎರಡನೆ ಬಹುಮಾನ ರಾಮನಗರ ತಂಡ. ಮೂರನೆ ಬಹುಮಾನ, ಮೈಸೂರು, ನಾಲ್ಕನೆ ಬಹುಮಾನ ಚಿಕ್ಕಮಗಳೂರು ತಂಡ ಜಯಗಳಿದವು.
ಇದೇ ಸಂದರ್ಭದಲ್ಲಿ,ಶಾಸಕ ಕೆ.ಎಸ್ ಲಿಂಗೇಶ್, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ.ಬಿಜೆಪಿ ಜಿಲ್ಲಾದ್ಯಕ್ಷ ಹುಲ್ಲಳ್ಳಿ ಸುರೇಶ್.ರಾಜ್ಯ ಒಕ್ಕಲಿಗರ ಮಹಿಳಾ ನಿರ್ದೇಶಕಿ ಸುರಭಿರಘು..ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷ.ಸಿ.ಎಚ್.ಮಹೇಶ್.ಸೇರಿದಂತೆ,ಅನೇಕ ಸದಸ್ಯರು ಭಾಗಿಯಾಗಿದ್ದರು.

ವಿಶೇಷವಾಗಿ ಮೂರು ದಿನಗಳ ಕಾಲ ನಡೆದ ಅದ್ದೂರಿ ಪಂದ್ಯಾವಳಿಯನ್ನು ನಿರೂಪಣೆಯಯನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ನಡೆಸಿ ಕೊಟ್ಟಿದ್ದು,ಮಾತ್ರಪ್ರೇಕ್ಷಕರ ಮನಕಲಕುವಂತಿತ್ತು.