ವಿಶ್ವ ಫುಲ್ಟಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು ತಮ್ಮ ಅದ್ಭುತ ಆಟವನ್ನು ಮುಂದುವರಿಸಿದ್ದಾರೆ. ಮೇಜರ್ ಲೀಗ್ ಸಾಕರ್ (MLS) ಈಸ್ಟರ್ನ್ ಕಾನ್ಫರೆನ್ಸ್ ಸೆಮಿಫೈನಲ್ ಪಂದ್ಯದಲ್ಲಿ, ಅವರು ಹೊಸ ದಾಖಲೆಯ ಒಡೆಯರಾಗಿದ್ದಾರೆ. ಮತ್ತೊಬ್ಬ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ದೊ ಅವರ ಸಾಧನೆಯನ್ನು ಮೀರಿ ನಿಂತಿದ್ದಾರೆ. ನವೆಂಬರ್ ೨೩ ರ ಭಾನುವಾರದಂದು ನಡೆದ ಪಂದ್ಯದಲ್ಲಿ ಇಂಟರ್ ಮಿಯಾಮಿ ತಂಡವು ಸಿನ್ಸಿನಾಟಿ ಎಫ್ಸಿ ತಂಡವನ್ನು ೪-೦ ಗೋಲುಗಳ ಅಂತರದಿಂದ ಸೋಲಿಸಿತು. ಅರ್ಜೆಂಟೀನಾದ ದಿಗ್ಗಜ ಮೆಸ್ಸಿ ಅವರೇ ಈ ಪಂದ್ಯದಲ್ಲಿ ಹೀರೋ ಆಗಿದ್ದರು. ಪಂದ್ಯದ ೧೯ನೇ ನಿಮಿಷದಲ್ಲಿ ಮೆಸ್ಸಿ ಅವರು ಮೊದಲ ಗೋಲು ಗಳಿಸುವ ಮೂಲಕ ಪ್ರಥಮಾರ್ಧದಲ್ಲಿ ಮಿಯಾಮಿ ತಂಡಕ್ಕೆ ಮುನ್ನಡೆ
ಒದಗಿಸಿದರು.
ದ್ವಿತೀಯಾರ್ಧದಲ್ಲಿ ಅವರು ನೇರವಾಗಿ ಗೋಲು ಗಳಿಸಲು ಸಾಧ್ಯವಾಗದಿದ್ದರೂ ಮೂರು ಗೋಲುಗಳಿಗೆ ಸಹಕರಿಸಿದರು. ೫೭ನೇ ನಿಮಿಷದಲ್ಲಿ ಮ್ಯಾಟಿಯೊ ಸಿಲ್ವೆಟ್ಟಿ ಗೋಲು ಗಳಿಸಿದರೆ, ೬೨ನೇ ಮತ್ತು ೭೪ನೇ ನಿಮಿಷಗಳಲ್ಲಿ ಟ್ಯಾಡಿಯೊ ಅಲ್ಲೆಂಡೆ ಎರಡು ಗೋಲುಗಳನ್ನು ಬಾರಿಸಿದರು. ಇದರಲ್ಲಿ ಮೆಸ್ಸಿ ಅವರ ಸಹಕಾರ ಎಲ್ಲರ ಗಮನ ಸೆಳೆಯಿತು. ಈ
ಗೆಲುವಿನೊಂದಿಗೆ ಮೆಸ್ಸಿ ಅವರು ತಮ್ಮ ತಂಡವನ್ನು ಈಸ್ಟರ್ನ್ ಕಾನ್ಫರೆನ್ಸ್ ಫೈನಲ್ಗೆ ಒಯ್ಯುವಲ್ಲಿ ಸಫಲರಾಗಿದ್ದಾರೆ. ಅಲ್ಲಿ ಅವರು ನ್ಯೂಯಾರ್ಕ್ ಸಿಟಿ ಎಫ್ಸಿ ತಂಡವನ್ನು ಎದುರಿಸಲಿದ್ದಾರೆ.
ವಿಶ್ವದ ಮೊದಲ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಅವರು ೧೩೦೦ ಗೋಲು ಕೊಡುಗೆಗಳ ಗರಿಷ್ಠ ಸಂಖ್ಯೆಯನ್ನು ಮೆಸ್ಸಿ ತಲುಪಿದ್ದಾರೆ. ಇದು ಅವರ ಅತ್ಯುತ್ತಮ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ೮೯೬ ಗೋಲುಗಳು ಮತ್ತು ೪೦೪ ಗೋಲುಗಳಿಗೆ ಸಹಕಾರನೀಡಿದ್ದು ಸೇರಿವೆ. ಬಾರ್ಸಿಲೋನಾ ತಂಡಕ್ಕಾಗಿ ಅವರು ಒಟ್ಟು ೯೪೧ ಗೋಲುಗಳ ಕೊಡುಗೆಗಳನ್ನು ನೀಡಿದ್ದಾರೆ. ಅರ್ಜೆಂಟೀನಾ ರಾಷ್ಟಿçÃಯ ತಂಡಕ್ಕಾಗಿ ೧೧೭ ಗೋಲುಗಳ ಕೊಡುಗೆಗಳನ್ನು ನೀಡಿದ್ದಾರೆ. ಪ್ಯಾರಿಸ್ ಸೇಂಟ್-ಜರ್ಮೈನ್ ( PSG) ತಂಡಕ್ಕಾಗಿ ೬೬ ಗೋಲುಗಳ ಕೊಡುಗೆಗಳನ್ನು ನೀಡಿದ್ದಾರೆ.
ಇಂಟರ್ ಮಿಯಾಮಿ ತಂಡಕ್ಕಾಗಿ ಇದುವರೆಗೆ ೧೧೭ ಗೋಲುಗಳ ಕೊಡುಗೆಗಳನ್ನು ನೀಡಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಫುಟ್ಬಾಲ್ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಮೆಸ್ಸಿ ಅವರಾಗಿದ್ದಾರೆ. ೩೮ ವರ್ಷದಅವರು ಇದೀಗ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಈ ಇಬ್ಬರು ದಿಗ್ಗಜ ಆಟಗಾರರು ಮಾತ್ರ ವಿಶ್ವ ಫುಟ್ಬಾಲ್ ನಲ್ಲಿ ೧೦೦೦ ಕ್ಕಿಂತ ಹೆಚ್ಚು ಗೋಲು ಕೊಡುಗೆಗಳನ್ನು ಹೊಂದಿದ್ದಾರೆ. ರೊನಾಲ್ಡೊ ೧೨೯೮ ಪಂದ್ಯಗಳಲ್ಲಿ ೧೨೧೩ ಗೋಲು ಕೊಡುಗೆಗಳನ್ನು ನೀಡಿದ್ದಾರೆ.



