ಬೆಂಗಳೂರು: ಯಾರಲ್ಲಿ ಸೇವಾ ಮನೋಭಾವನೆ ಇರುತ್ತದೋ ಅವರು ಮಾತ್ರ ಲಯನ್ಸ್ ಸದಸ್ಯರಾಗಲು ಸಾಧ್ಯ ಉತ್ತಮವಾದ ಸೇವೆ ಮಾಡಲು ಸಾಧ್ಯ ಎಂದು ಮಲ್ಟಿಪಲ್ ಕೌನ್ಸಿಲ್ಚೇರ್ ಪರ್ಸನ್ ರಾಜಶೇಖರಯ್ಯ ಅಭಿಪ್ರಾಯ ಪಟ್ಟರು.
ಕೆ.ಜಿ ರಸ್ತೆಯಲ್ಲಿರುವ ಎಫ್.ಕೆ.ಸಿ.ಸಿ.ಐ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಎ ಪ್ರಾಂತೀಯ ಅಧ್ಯಕ್ಷೆ ಲತಾ ಅನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾಂತೀಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸೇವೆಯಿಂದ ಸಿಗುವ ಆತ್ಮತೃಪ್ತಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ,
ಅಸಹಾಯಕರಿಗೆ ಸಹಾಯ ಮಾಡುವುದೇ ಸೇವೆಯ ನಿಜವಾದ ಅರ್ಥ , ಈ ಸಮ್ಮೇಳನದಲ್ಲಿ ಮಹಿಳೆ ಮತ್ತು ಮಕ್ಕಳ ಸಾಮಾಜಿಕ ನ್ಯಾಯದ ವಿಷಯ ಉತ್ತಮ ಬೆಳವಣಿಗೆಯಾಗಿದ್ದು ಗಂಡು ಹೆಣ್ಣು ಸಮಾನರು, ಹೆಣ್ಣಿಗೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ ಅವರನ್ನು ಪೂಜ್ಯನೀಯ ಭಾವನೆಯಿಂದ ನೋಡಬೇಕು, ಆಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದರು.
ನಿಜವಾದ ನಾಯಕ ಮಾತನಾಡುವುದಿಲ್ಲ ಕೆಲಸ ಮಾಡಿತೋರಿಸುತ್ತಾನೆ ಎಂಬಂತೆ ಪಿಡಿಜಿ ಅನಿಲ್ ನಾಯಕನು ಆಗಿ ತನ್ನ ಮಡದಿಯನ್ನು ನಾಯಕಿಯನ್ನಾಗಿಸಿ ಪ್ರಾಂತೀಯ ಸಮ್ಮೇಳನ ಯಶಸ್ಸಿಗೆ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.ಜಿಲ್ಲಾ ರಾಜ್ಯಪಾಲರಾದ ಸುರೇಶ್ ರಾಮು ಪಿ.ಎಮ್. ಜೆ.ಎಫ್ ಮಾತನಾಡಿ ಸಭಾಂಗಣ, ಅತಿಥಿಗಳ ಆಯ್ಕೆ ಸೇರಿದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮ್ಮೇಳನದಲ್ಲಿ ಗಮನ ಸೆಳೆದಿದೆ .
ಲಯನ್ಸ್ ಪ್ರಾಂತೀಯ ಸಮ್ಮೇಳನ ಅತ್ಯದ್ಭುತ ದಾಖಲೆ ಎಂದು ಸಮ್ಮೇಳನ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿ ಪ್ರಾಂತೀಯ ಅಧ್ಯಕ್ಷೆ ಲತಾ ಅನಿಲ್ ಅವರಿಗೆ ಇಂಟರ್ನಾಷನಲ್ ಸರ್ಟಿಫಿಕೇಟ್ ವಿತರಣೆ ಮಾಡಿದರು.ಶೇಷಾದ್ರಿಪುರಂ ಕಾಲೇಜಿನ ಪ್ರೊಫೆಸರ್ ಡಾ. ಭಾರ್ಗವಿ ವಿ.ಆರ್ ಸಮ್ಮೇಳನದಲ್ಲಿ ಹೆಂಗಸರು ಮತ್ತು ಮಕ್ಕಳ ಸಾಮಾಜಿಕ ನ್ಯಾಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಹೋಸ್ಟ್ ಕಮಿಟಿ ಚೇರ್ಮನ್ ಲ. ಬಾಲಾಜಿ ಸಿಂಗ್ ಸ್ವಾಗತ ಭಾಷಣ ಮಾಡಿ ಈ ಸಮ್ಮೇಳನದಲ್ಲಿ ಮಹಿಳೆ ಮತ್ತು ಮಕ್ಕಳ ಸಾಮಾಜಿಕ ನ್ಯಾಯದ ವಿಷಯ ಉತ್ತಮ ಬೆಳವಣಿಗೆಯಾಗಿದ್ದು ಗಂಡು ಹೆಣ್ಣು ಸಮಾನರು, ಹೆಣ್ಣಿಗೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ ಅವರನ್ನು ಪೂಜ್ಯನೀಯ ಭಾವನೆಯಿಂದ ನೋಡಬೇಕು, ಆಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದರು.
ಈ ವೇಳೆ ಮೊದಲನೇ ಜಿಲ್ಲಾ ರಾಜ್ಯಪಾರಾದ ಮೋಹನ್ ಕುಮಾರ್, ಎರಡನೇ ಜಿಲ್ಲಾ ರಾಜ್ಯಪಾಲರು ಲ.ಮೋಹನ್, 317 ಈ ಮೊದಲನೇ ರಾಜ್ಯಪಾಲರಾದ ಲ.ನಾರಾಯಣಸ್ವಾಮಿ, ಪಿಡಿಜಿ ಸ್ವಾಮಿಯಪ್ಪನ್ , ಲಯನ್ ಜಯಪ್ರಕಾಶ್ 317ಜಿ, ಲ.ರೇಣುಕುಮಾರ್, 317ಇ ಶ್ರೀನಿವಾಸ್, ಶಶಿಖುರಾನ , ಲಯನ್ ವಿನುತಾ ಪ್ರಕಾಶ್, ಸಿ. ಹೇಮಂತ್ ಕುಮಾರ್ , ಪ್ರೊಫೆಸರ್ ಟಿ.ಜೆ ರಾಮಮೂರ್ತಿ , ಪಿಆರ್ ಎಸ್ ಚೇತನ್ , ಪ್ರಭಾ ಮೂರ್ತಿ, ಲ.ಅನಿಲ್ಕುಮಾರ್, ಡಿಸಿಎಸ್ ಈಶ್ವರನ್ , ಶ್ರೀನಾಥ್ , ಸೆಕ್ರೆಟರಿಯೇಟ್ ಮೆಂಬರ್ಸ್ , ಜಿಎಲ್ ಟಿ ಕೋ ಆರ್ಡಿನೇಟರ್ , ಸ್ಪಾನ್ಸರ್ ಅಜಿತಾ ಸಿರಿ, ಎಲ್ಲಾ ಪ್ರಾಂತೀಯ ಅಧ್ಯಕ್ಷರು, ಲಯನ್ಸ್ ಬಂಧುಗಳು ಅತಿಥೇಯ ಸಮಿತಿ ಅಧ್ಯಕ್ಷರು, ಸತೀಶ್ ,, ವಲಯ ಅಧ್ಯಕ್ಷರಾದ ಜಯಂತಿ, ಹರೀಶ್ , ಶೋಭಾ ಸತೀಶ್ ಇದ್ದರು.