ನೆಲಮಂಗಲ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ “ಹಳ್ಳಿಯಿಂದ ಹಳ್ಳಿಗೆ ಸಾಹಿತ್ಯ ಸಂಚಾರ” ಕಾರ್ಯಕ್ರಮದ ಭಾಗವಾಗಿ ದಿನಾಂಕ 28.01.2024ರ ಭಾನುವಾರ ಸಂಜೆ 5 ಗಂಟೆಗೆ ಸೋಂಪುರ ಹೋಬಳಿ ಕೆಂಗಲ್ ಗೊಲ್ಲರಹಟ್ಟಿ ಗ್ರಾಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಸೇವಕರಾದ ಜಗದೀಶ್ ಚೌಧರಿ ಅವರು ನೆರವೇರಿಸಲಿದ್ದಾರೆ. ಲೇಖಕ ಚಿಂತಕ ಅಂಕಣಕಾರ ಮಣ್ಣೆ ಮೋಹನ್ ಮತ್ತು ಜಯರಾಮು ಎಂ ರವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹರಿಕಥಾ ದಾಸರಾದ ಚಿಕ್ಕಮಾಳಯ್ಯ ಅವರಿಂದ ಪ್ರಾರ್ಥನೆ, ಜಿ ಎಚ್ ತಿಮ್ಮಪ್ಪ ರವರಿಂದ ಸ್ವಾಗತ, ಅಧ್ಯಕ್ಷರಾದ ಪ್ರದೀಪ್ ಕುಮಾರ್ ರವರಿಂದ ಪ್ರಾಸ್ತಾವಿಕ ನುಡಿ, ಪುನೀತ್ ಕುಮಾರ್ ವಂದನಾರ್ಪಣೆ, ಮಂಜುನಾಥ್ ಸಿ ನಿರೂಪಣೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಪಿಎಂಸಿ ಸದಸ್ಯರಾದ ಗಂಗಣ್ಣನವರು ವಹಿಸಲಿದ್ದಾರೆ. ಶ್ರೀ ಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಪೂಜಾರಿಗಳಾದ ಡಾ ಶಿವಕುಮಾರ ಸ್ವಾಮಿಯವರು ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಬಿ ಪ್ರಕಾಶ್ ಮೂರ್ತಿ, ಸದಾನಂದಾ ರಾಧ್ಯ, ಎನ್ ಜಿ ಗೋಪಾಲ್, ವಕೀಲರಾದ ಕನಕರಾಜು, ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷರಾದ ಉಮಾದೇವಿ, ಪಿಡಿಒ ಮಂಜುಳಾ, ಸದಸ್ಯರಾದ ಚಿಕ್ಕೆಗೌಡ, ಮಾಜಿ ಅಧ್ಯಕ್ಷರಾದ ತಿಮ್ಮಯ್ಯ, ಮುಖಂಡರಾದ ಕರಿಗೌಡ, ಕಸಾಪ ತಾಲೂಕು ಪ್ರತಿನಿಧಿ ಮಂಜುಳಾ ವೆಂಕಟೇಶ್, ಹೋಬಳಿಯ ಅಧ್ಯಕ್ಷ ಶ್ರೀಕಾಂತ್, ಪತ್ರಕರ್ತೆ ವರ್ಷಾ ನಾಯಕ್ ಆಗಮಿಸಲಿದ್ದಾರೆ.
ಮಾನಯ್ಯ ಮತ್ತು ತಂಡದವರಿಂದ ಸೋಬಾನ ಪದಗಳು, ತಾಯಮ್ಮ ಮತ್ತು ತಂಡದವರಿಂದ ಗಣೆ ಪದಗಳು, ಅಕ್ಷಯ್ ಮತ್ತು ತಂಡದವರಿಂದ ಜನಪದ ಗೀತೆಗಳು, ಶಾಲಾ ಮಕ್ಕಳು ಮತ್ತು ಗ್ರಾಮಸ್ಥರಿಂದ ರಂಗಗೀತೆಗಳು, ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದೇಸಂದರ್ಭದಲ್ಲಿ ರಾಷ್ಟ್ರಮಟ್ಟದ ಕ್ರೀಡಾ ಪದಕ ವಿಜೇತ ನವೀನ್ ಕುಮಾರ್ ರವರಿಗೆವಿಶೇಷ ಸನ್ಮಾನವಿದೆ. ಕಾರ್ಯಕ್ರಮಕ್ಕೆ ಅಶ್ವಜ್ಞಾನ ಆನಂತ ಪೌಂಡೇಶನ್ ಸಹಯೋಗ,ಕೆಂಗಲ್ ಗೊಲ್ಲರಹಟ್ಟಿಯ ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್, ಹಾಲು ಉತ್ಪಾ
ದಕರ ಸಹಕಾರ ಸಂಘ ಮತ್ತು ಭಾರತ ಕಿಸಾನ್ ಸಂಘದ ವಿಶೇಷ ಸಹಕಾರವಿದೆ.