ಮಧುಗಿರಿ: ಮಧುಗಿರಿ, ಶಿರಾ, ಕೊರಟಗೆರೆ, ಪಾವಗಡ ತಾಲ್ಲೂಕಿನ ಗಡಿನಾಡು ಅಭಿವೃದ್ಧಿ, ಭಾಷೆ, ಬದುಕು ವಿಷಯಗಳ ಕುರಿತು ಒಂದು ದಿನದ ಕಾರ್ಯಾಗಾರ ಸಾಹಿತ್ಯ ಸಂಚಲನ ಮಾಡಬೇಕು ಎನ್ನುವುದು ನಮ್ಮ ಕನಸಾಗಿತ್ತು ಎಂದು ಗಡಿನಾಡ ಸಾಹಿತ್ಯ ಸಂಚಲನದ ಸಾರಥಿ ಸಂಸ್ಥೆಯ ಅಧ್ಯಕ್ಷೆ ಶಮಂತ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಧುಗಿರಿಯ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಗಡಿನಾಡ ಸಾಹಿತ್ಯ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಸಹಜವಾಗಿ ಇಂದಿನ ತಂತ್ರಜ್ಞಾನ, ಆಧ್ಯಾತ್ಮಿಕ ಹಾಗೂ ಬರವಣಿಗೆ, ಭಾಷೆ, ಸೃಜನ ಶೀಲತೆ ಮತ್ತು ತಂತ್ರಜ್ಞಾನ ಹೇಗೆ ಅತಿ ಶೀಘ್ರವಾಗಿ ಂI – ಕೃತಕ ಬುದ್ದಿ ಮತ್ತೆ, ಅhಚಿಣಉPಖಿ ಆವರಿಸಿಕೊಳ್ಳುತ್ತಿದೆ.
ಈ ಭಾಷೆ, ಸೃಜನಶೀಲ ಬರವಣಿಗೆ ಮತ್ತು ತಂತ್ರಜ್ಞಾನ ಗ್ರಾಮೀಣ ಸಾಹಿತ್ಯ ವಿದ್ಯಾರ್ಥಿಗಳಿಗೆ ಅನ್ನೋ ಹೊಸ ಪರಿಕಲ್ಪನೆ. ನನಗೆ ವಾಟ್ಸಪ್ ಪದ್ಯ, ಬರವಣಿಗೆ ಜೊತೆ ಇಂಗ್ಲೀಷ್ ಮಾತ್ರವಲ್ಲ ಕನ್ನಡ ಭಾಷೆಯಲ್ಲಿ ಸಹ ತಂತ್ರಜ್ಞಾನ ಬಳಕೆ ಶೀಘ್ರವಾಗಿ ಹೆಚ್ಚುತ್ತಿದೆ. ಈ ವೇದಿಕೆಯಲ್ಲಿ ಹೊಸ ಪರಿಕಲ್ಪನೆ ತಿಳಿಸುವ ಅವಕಾಶ ದೊರಕಿದ್ದು ಸಂತಸ ತಂದಿದೆ ಎಂದರು.
ಮುಂದುವರಿದು ಮಾತನಾಡಿದ ಅವರು, ಇದಕ್ಕೆ ಮುಖ್ಯ ಕಾರಣ, ಇತ್ತೀಚಿನ ದಿನಗಳಲ್ಲಿ ಭಾಷಾ ಬರಹಗಾರರಿಗೂ ವಿಪರೀತ ಬೇಡಿಕೆ ಇರೋದು ತುಂಬಾ ಜನರಿಗೆ ತಿಳಿದಿಲ್ಲ. ನೀವು ಯಾವುದೇ ಲಿಂಕಡಿನ್, ಇನ್ನಿತರ ಜಾಲತಾಣಗಳಿಗೆ ಭೇಟಿ ನೀಡಿದರೆ ಕನ್ನಡ ಅಥವಾ ಇನ್ನಿತರ ಭಾಷಾ ಕಂಟೆಂಟ್ ಬರಹಗಾರರಿಗೆ ಅತೀ ಹೆಚ್ಚಿನ ಬೇಡಕೆಯಿರೋದು ಗೊತ್ತಾಗುತ್ತದೆ.
ಎಷ್ಟೋ ಕಂಪನಿಗಳು ಸೂಕ್ತ ಕಂಟೆಂಟ್ ಬರಹಗಾರರು ಒದ್ದಾಡುತ್ತಿದ್ದಾರೆ. ಕನ್ನಡ ಬರಹಗಾರರ ಕೊರತೆ ಇದೆ. ಈ ಎಲ್ಲಾ ಅವಕಾಶಗಳು ಬೆಂಗಳೂರು, ಮಂಗಳೂರು, ಮೈಸೂರು ಇನ್ನಿತರ ದೊಡ್ಡ ಊರುಗಳ ಸಾಹಿತ್ಯ, ಜರ್ನಲಿಸಂ ವಿದ್ಯಾರ್ಥಿಗಳಿಗೆ ದಕ್ಕುತ್ತಿದೆಯೆ ಹೊರತು ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂದರು.
ಹಾಗಾಗಿ ನಮ್ಮ ಗ್ರಾಮೀಣ ಜನತೆಯ, ವಿದ್ಯಾರ್ಥಿಗಳ ಸಾಹಿತ್ಯ, ಬರವಣಿಗೆ, ಸೃಜನ ಶೀಲ ರಚನೆ ಕೇವಲ ವಾಟ್ಸಪ್, ಫೇಸ್ಬುಕ್ಗೆ ಮಾತ್ರ ಸೀಮಿತವಾಗುತ್ತಿದೆ. ಭಾಷೆ, ಸೃಜನಶೀಲ ಬರವಣಿಗೆ ಮತ್ತು ತಂತ್ರಜ್ಞಾನ ಇಂದಿನ ದಿನಗಳ ಜಾಬ್ ಮಾರುಕಟ್ಟೆಯಲ್ಲಿ ಬಹು ದೊಡ್ಡ ಪಾತ್ರವಹಿಸಿದೆ. ಸಾಮಾಜಿಕ ಜಾಲತಾಣ ಇಂತಹ ಭಾಷಾ ಬರಹಗಾರರಿಗೂ ಒಂದು ಉದ್ಯೋಗ ಕಲ್ಪಿಸಿದೆ. ಅಲ್ಲದೆ ಬಹು ರಾಷ್ಟ್ರೀಯ ಕಂಪನಿಗಳು ಅಷ್ಟೇಕೆ ರಾಜ್ಯ ಸರ್ಕಾರಗಳೂ ತಮ್ಮ ಆಗು ಹೋಗುಗಳ ಬಗ್ಗೆ ಭಾರತೀಯ ಭಾಷೆಗಳಲ್ಲಿ ಪ್ರಕಟಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾವಗಡದ ಜಪಾನಂದ ಮಹಾರಾಜ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು, ಲೇಖಕಿ ಶೈಲಾ ನಾಗರಾಜ್, ಪ್ರಾಂಶುಪಾಲ ಮುನೀಂದ್ರ ಕುಮಾರ್, ಹಿರಿಯ ಸಾಹಿತಿ ಪ್ರೊ.ಮಲನ ಮೂರ್ತಿ, ಕಸಾಪದ ಎಂ. ಎಸ್.ಶಂಕರನಾರಾಯಣ್, ರಂಗಧಾಮಯ್ಯ, ಉಪನ್ಯಾಸಕ ಎಸ್.ಮಹಾಲಿಂಗೇಶ್ ಇತರರಿದ್ದರು.