ಬೆಂಗಳೂರು: ಭಾರತೀಯ ವೇದಗಳ ಇಂದಿನ ಪ್ರಸ್ತುತತೆಯ ಮೇಲೆ ಬೆಳಕು ಚೆಲ್ಲುವ “ಲೀವಿಂಗ್ ವೇದ” ಅಂತಾರಾಷ್ಟ್ರೀಯ ಸಮಾವೇಶ 2023 ಬೆಂಗಳೂರಿನ ಜೆ.ಪಿ.ನಗರದ ಶ್ರೀ ಅರಬಿಂದೊ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಲಿವಿಂಗ್ ವೇದ ಅಂತಾರಾಷ್ಟ್ರೀಯ ಸಮಾವೇಶ 2023 ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ವೀರೇಶಾನಂದ, ನಾಸಾ ಬಾಹ್ಯಾಕಾಶ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ ಆರ್ ನಾರಾಯಣಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಭರತ್ ಲಾಲ್ ಮೀನಾ, ಎಸ್ ವ್ಯಾಸ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ ರಾಮಚಂದ್ರ.ಜಿ.ಭಟ್ ಕೋಟೆಮನೆ,
ಬೆಂಗಳೂರು ವಿಶ್ವವಿದ್ಯಾಲ ಯದ ಮಾಜಿ ಉಪಕುಲಪತಿ ಪ್ರೊ ಕೆ.ಆರ್.ವೇಣುಗೋಪಾಲ್, ಸಾಕ್ಷಿ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಡಾ.ಆರ್.ವಿ.ಜಾಗಿರ್ದಾರ್, ದೆಹಲಿಯ ಜೆ ಎನ್ ಯು ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾದ್ಯಾಪಕ ಪೆಪ್ರೊ.ಮಕರಂದ ಪರಾಜಂಪೆ ಹಾಜರಿದ್ದರು.
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಬೆಂಗಳೂರಿನ ಸಾಕ್ಷಿ ಟ್ರಸ್ಟ್, ಶ್ರೀ ಅರಬಿಂದೊ ಸೊಸೈಟಿ, ಬೆಸ್ಟ್ ಇನ್ನೋವೇಶನ್ ವಿಶ್ವವಿದ್ಯಾಲಯ, ಅಮೆರಿಕಾದ ವೇದಿಕ್ ವೇಲ್ನೆಸ್ ವಿಶ್ವವಿದ್ಯಾಲಯ ಹಾಗೂ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಜಂಟಿ ಆಶ್ರಯದಲ್ಲಿ ಲೀವಿಂಗ್ ವೇದ 2023 ಆಯೋಜಿಸಲಾಗಿದೆ.