ನೆಲಮಂಗಲ: ಬೆಂಗಳೂರು ಮೂಲದ ಲಾಕಪ್ ಗಿರಿಯನ್ನ ನೆಲಮಂಗಲ ಗ್ರಾಮಾಂತರ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ರೈಲ್ವೆ ಗೊಲ್ಲಹಳ್ಳಿಯಲ್ಲಿ ಸರಗಳ್ಳತನ ಪ್ರಕರಣವೊಂದರ ಬೆನ್ನು ಬಿದ್ದಿದ್ದ ನೆಲಮಂಗಲ ಇನ್ಸ್ಪೆಕ್ಟರ್ ರಾಜೀವ್ ತಂಡಕ್ಕೆ ಲಾಕಪ್ ಗಿರಿ ಮೈಸೂರಿನಲ್ಲಿ ಆರೋಪಿ ಬಂದಿಸಿದ ನಂತರ ಆತನ ಮೇಲೆ 17 ಕ್ಕೂ ಹೆಚ್ಚು ಪ್ರಕರಣಗಳ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸರು ಲಾಕಪ್ ಗಿರಿ ಬಂಧಿಸಿದ ಬಳಿಕ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಂಗಳೂರಿನಲ್ಲಿ ಕೊಲೆ ಪ್ರಕರಣವೊಂದರಲ್ಲಿ ಬಾಗಿಯಾಗಿದ್ದಾನೆ ಎಂಬುದು ತಿಳಿದು ಬಂದಿದೆ. ಅಷ್ಟೆ ಅಲ್ಲದೆ ಲಾಕಪ್ ಗಿರಿ ಶೋಕಿ ಮಾಡಲು ಐಶಾರಾಮಿ ಬೈಕ್‍ಗಳನ್ನ ಕದಿಯುತ್ತಿದ್ದ,
ಕದ್ದ ಬೈಕ್‍ನಲ್ಲಿ ಸರಗಳ್ಳತನ ಮಾಡುತ್ತಿದ್ದ ಅಷ್ಟೆ ಅಲ್ಲ ನಿರ್ಜನ ಪ್ರದೇಶದಲ್ಲಿ ಓಡಾಡುವ ಜೋಡಿಗಳನ್ನ ಟಾರ್ಗೆಟ್ ಮಾಡುತ್ತಿದ್ದ. ಪೊಲೀಸರ ಲಾಕಪ್ ಹಿಡಿದು ಜೋಡಿಗಳನ್ನ ಬೆದರಿಸುತ್ತಿದ್ದ, ಅವರಬಳಿ ಸಿಕ್ಕಿದ್ದನೆಲ್ಲ ದೋಚಿಕೊಂಡು ಅವರನ್ನೆಲ್ಲ ಬೆದರಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ ಈ ಲಾಕಪ್ ಗಿರಿ ಪೊಲೀಸರಿಗೆ ತಲೆನೋವಾಗಿದ್ದ.
Leave a Review