ಬೆಂಗಳೂರು: ಭಾರತವು ಅತ್ಯಂತ ದೊಡ್ಡ ಲಾಜಿಸ್ಟಿಕ್ಸ್, ಮೆಟೀರಿಯಲ್ ಹ್ಯಾಂಡ್ಲಿಂಗ್, ವೇರ್ ಹೌಸಿಂಗ್ ಮತ್ತು ಆಟೊಮೇಷನ್ ಪ್ರದರ್ಶನ ಲಾಜಿಮ್ಯಾಟ್(LogiMAT) ಇಂಡಿಯಾ 2024 ಆಯೋಜಿಸುವ ನಿರೀಕ್ಷೆಯಲ್ಲಿ ಉದ್ಯಮವು ಮಹತ್ತರ ಬದಲಾವಣೆಗೆ ಸಜ್ಜಾಗುತ್ತಿದೆ.
ಈ ಉತ್ಸಾಹವು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಜನವರಿ 16, 2024ರಂದು ಅದಕ್ಕೆ ಪೂರ್ವಗಾಮಿ ರೋಡ್ ಶೋ ಸಮೀಪವಾಗುತ್ತಿದ್ದಂತೆ ಮತ್ತಷ್ಟು ಹೆಚ್ಚಾಗುತ್ತಿದೆ. ಈ ರೋಡ್ ಶೋ ಪ್ರಮುಖ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ನಿರ್ವಹಣೆ ಕಂಪನಿಗಳಿಂದ ಒಳನೋಟಯುಕ್ತ ಚರ್ಚೆಗಳನ್ನು ಉತ್ತೇಜಿಸಲಿವೆ, ಆವಿಷ್ಕಾರಗಳನ್ನು ಅನಾವರಣಗೊಳಿಸಲಿವೆ ಮತ್ತು ಉದ್ಯಮದ ನಾಯಕರೊಂದಿಗೆ ಅರ್ಥಪೂರ್ಣ ಸಹಯೋಗಗಳನ್ನು ಉತ್ತೇಜಿಸಲಿದ್ದು ಮಹತ್ತರ ಕಾರ್ಯಕ್ರಮಕ್ಕೆ ವೇದಿಕೆ ಸೃಷ್ಟಿಸಲಿದೆ.
ಲಾಜಿಮ್ಯಾಟ್ ಇಂಡಿಯಾ ಲಾಜಿಸ್ಟಿಕ್ಸ್, ಮೆಟೀರಿಯಲ್ ಹ್ಯಾಂಡ್ಲಿಂಗ್, ವೇರ್ ಹೌಸಿಂಗ್ ಮತ್ತು ಪೂರೈಕೆ ಸರಣಿ ಪರಿಹಾರಗಳಲ್ಲಿ ಅತ್ಯಾಧುನಿಕ ಸುಧಾರಣೆಗಳಿಗೆ ದೇಶದ ಪ್ರಮುಖ ಪ್ಲಾಟ್ ಫಾರಂ ಆಗಿದೆ. ಮೆಸ್ಸಿ ಸ್ಟಗ್ಗಾರ್ಟ್ ಇಂಡಿಯಾ ನೇತೃತ್ವದ ಈ ಪ್ರದರ್ಶನ ಉದ್ಯಮದ ನಾಯಕರು, ವೃತ್ತಿಪರರು ಮತ್ತು ಅನ್ವೇಷಕರನ್ನು ಒಗ್ಗೂಡಿಸಲು ವೇದಿಕೆಯಾಗಿ ಕೆಲಸ ಮಾಡುತ್ತದೆ. ಇದು ಉದ್ಯಮ ವಿಸ್ತರಣೆ ಮತ್ತು ಜಾಲದ ಪ್ರಗತಿಗೆ ಮೌಲ್ಯಯುತ ಅವಕಾಶಗಳನ್ನು ಒದಗಿಸುವ ಮೂಲಕ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರಸ್ತುತಪಡಿಸುವ ಮೂಲಕ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಕ್ಷೇತ್ರವನ್ನು ಕ್ರಾಂತಿಕಾರಕಗೊಳಿಸಲಿದೆ.
ಪ್ರಧಾನಮಂತ್ರಿಗಳ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಮತ್ತು ಗತಿ ಶಕ್ತಿಗೆ ಅನುಗುಣವಾಗಿ ಲಾಜಿಮ್ಯಾಟ್ ಇಂಡಿಯಾ 2024ಯು ಕಾರ್ಯಕ್ಷಮತೆ ಗರಿಷ್ಠಗೊಳಿಸುವ ಮತ್ತು ವೆಚ್ಚದ ದಕ್ಷತೆ ನೀಡುವ ವಿಸ್ತಾರ ಶ್ರೇಣಿಯ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ.
ಲಾಜಿಮ್ಯಾಟ್ ಇಂಡಿಯಾ, ಇನ್ವೆಸ್ಟ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಮತ್ತು ಉದ್ಯಮ ಸಂಘಟನೆಗಳ ಸಹಯೋಗ ಹೊಂದಿದ್ದು ಪ್ರದರ್ಶಕರು ಮತ್ತು ಸಂದರ್ಶಕರಿಗೆ ಅವಕಾಶಗಳ ವಿಶ್ವವನ್ನು ತೆರೆಯುತ್ತದೆ. ರೋಡ್ ಶೋನಲ್ಲಿ ಭಾಗವಹಿಸುವ ಉದ್ಯಮಗಳಾಗಿ ಅವುಗಳಿಗೆ ಯೂರೋಪ್ ನ ಅತ್ಯಂತ ದೊಡ್ಡ ಇಂಟ್ರಾಲಾಜಿಸ್ಟಿಕ್ಸ್ ಪ್ರದರ್ಶನ ಲಾಜಿಮ್ಯಾಟ್ ಒದಗಿಸುವ ಉದ್ಯಮದ ಅವಕಾಶಗಳನ್ನು ಬಳಸಿಕೊಳ್ಳಲು ಉತ್ತೇಜಿಸಲಾಗುತ್ತದೆ.
ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿದ್ದು ಲಾಜಿಸ್ಟಿಕ್ಸ್, ಪೂರೈಕೆ ಸರಣಿ ವೇರ್ ಹೌಸಿಂಗ್ ಮತ್ತು ಆಟೊಮೇಷನ್ ಕೇಂದ್ರವೂ ಆಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತೃತೀಯ ಅತ್ಯಂತ ಒತ್ತಡದ ಕಾರ್ಗೊ ವಿಮಾನ ನಿಲ್ದಾಣವಾಗಿದ್ದು ದಕ್ಷತೆಯಿಂದ ಸರಕುಗಳ ಚಲನೆ ಸಾಧ್ಯವಾಗಿಸುತ್ತಿದೆ. ಡಿ.ಎಚ್.ಎಲ್., ಫೆಡೆಕ್ಸ್ ಮತ್ತು ಬ್ಲೂಡಾರ್ಟ್ ಇಲ್ಲಿ ಸದೃಢ ವ್ಯಾಪ್ತಿ ಹೊಂದಿವೆ. ಕರ್ನಾಟಕ ಲಾಜಿಸ್ಟಿಕ್ಸ್ ನೀತಿ 2017 ಮತ್ತು ಸ್ಮಾರ್ಟ್ ಸಿಟೀಸ್ ಮಿಷನ್ ಈ ವಲಯದ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸುವ ಗುರಿ ಹೊಂದಿವೆ.
ಈ ರೋಡ್ ಶೋ ಒಳನೋಟಯುಕ್ತ ಅನುಭವ ನೀಡುವುದಲ್ಲದೆ ಜಾಗತಿಕ ಲಾಜಿಸ್ಟಿಕ್ಸ್ ಪರಿಣಿತಿಯನ್ನು ಲಾಜಿಮ್ಯಾಟ್ ಇಂಡಿಯಾ ಮೂಲಕ ಪ್ರದರ್ಶಿಸಲಿದೆ. ಇದು ಭಾರತದಲ್ಲಿ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ನಿರ್ವಹಣೆ ಉದ್ಯಮಗಳಿಗೆ ಮೈಲಿಗಲ್ಲಾಗಲಿದ್ದು ಲಾಜಿಮ್ಯಾಟ್ ಇಂಡಿಯಾದಲ್ಲಿ ಭಾಗವಹಿಸುವ ಉದ್ಯಮಗಳಿಗೆ ಪ್ರಗತಿಗೆ ವೇಗ ತುಂಬುವ ಗುರಿ ಹೊಂದಿವೆ.
ಬೆಂಗಳೂರಿನಲ್ಲಿ ಲಾಜಿಮ್ಯಾಟ್ ಇಂಡಿಯಾ ರೋಡ್ ಶೋನಲ್ಲಿ ಭಾಗವಹಿಸಲು ಇಂದೇ ನೋಂದಣಿ ಮಾಡಿ:https://logimat.evenuefy.com/dashboard/sharedT/0o1hg2.