2024-2029 ರ ಲೋಕಸಭಾ ಚುನಾವಣೆ ಈ ವರ್ಷ ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿದ್ದು ಈ ಸಂಬಂಧ ರಾಜ್ಯದ ಸಿವಿಲ್ ಪೊಲೀಸ್ ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡ ಬಹುದಾದ ಹಿನ್ನೆಲೆಯಲ್ಲಿ ವರ್ಗಾವಣೆ ಕಾವು ಹೆಚ್ಚುತ್ತಿದೆ.
ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಮತ್ತು ಕಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳ ಸ್ವಂತ ಊರುಗಳನ್ನು ಆಧರಿಸಿ ಅವರು ಕೆಲಸ ನಿರ್ವಹಿಸುತ್ತಿರುವ ಜಾಗಗಳ ಅನುಗುಣವಾಗಿ (ಸಾರ್ವಜನಿಕರ ಕುಂದು ಕೊರತೆ ಅಥವಾ ಇನ್ನೂ ಇತರೆ ವಿಷಯಗಳಲ್ಲಿ ಪ್ರತಿದಿನ ಸಂಪರ್ಕದಲ್ಲಿಇರುವ, ಪೊಲೀಸ್ ಠಾಣೆಗಳಲ್ಲಿ.) ಅಧಿಕಾರಿಗಳ ವರ್ಗಾವಣೆಯನ್ನು ಮಾಡಲು ಇಲಾಖೆ ರೂಪರೇಷಗಳನ್ನು (ಮಾರ್ಗಸೂಚಿ ) ಸಿದ್ಧಗೊಳಿಸುತ್ತಿದ್ದಾರೆ ಅಥವಾ ಪೂರ್ವ ತಯಾರಿ ನಡೆದಿದೆ ಎನ್ನಬಹುದು.
ರಾಜ್ಯದಲ್ಲಿ 1068 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು, ಸಂಚಾರಿ ಪೊಲೀಸ್ ಠಾಣೆಗಳು, ಸಿಸಿಬಿ ಘಟಕಗಳು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆಫೀಸ್ಗಳು & 155 ಡಿವೈಎಸ್ಪಿ/ ಎಸಿಪಿ ಕಚೇರಿಗಳು ಹಾಗೂ 30 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 60 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಸಂಖ್ಯೆ ಇರುತ್ತದೆ.
ಅಂದಾಜಿನ ಪ್ರಕಾರ ಸುಮಾರು ಒಂದು ಲಕ್ಷಕ್ಕೂ ಅಧಿಕ ಐ. ಪಿ. ಎಸ್ ಹಾಗು ಇತರೆ, ಹಿರಿಯ ಮತ್ತು ಕಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಿದ್ದು , ಸುಮಾರು 90000 ಸಾವಿರ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪ್ರತಿದಿನ ಹಗಲು ಮತ್ತು ರಾತ್ರಿ ಸ್ಥಳೀಯರ ಮತ್ತು ಸಾರ್ವಜನಿಕರ ಸಂಪರ್ಕದಲ್ಲಿರುವ ಸ್ಥಳೀಯ ಊರು, ತಾಲೂಕು ಅಥವಾ ಗ್ರಾಮದವರಾಗಿರುವವರ ಪೊಲೀಸ್ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್,
ಎಎಸ್ಐ ಮತ್ತು ಶ್ರೇಣಿಯ ಬಡ್ತಿ ಪಡೆದಿರುವ ಪಿಎಸ್ಐ /ಪಿ. ಐ ರವರ ಹೆಸರುಗಳನ್ನು ಗುರುತಿಸಿ ಚುನಾವಣೆ ಮುಗಿಯುವವರೆಗೂ ಪಕ್ಕದ ತಾಲೂಕುಗಳಿಗೆ/ ನಗರ ಪ್ರದೇಶದಲ್ಲಿ ಠಾಣೆಗಳಿಗೆ ವರ್ಗಾವಣೆ ಮಾಡಲು ಮತ್ತು ಸಿವಿಲ್ ಸಬ್ ಇನ್ಸ್ಪೆಕ್ಟರ್ ಮತ್ತು ಮೇಲ್ಪಟ್ಟ ಅಧಿಕಾರಿಗಳನ್ನು ನಗರದಿಂದ ಜಿಲ್ಲೆಗಳಿಗೆ ಮತ್ತು ಜಿಲ್ಲೆಗಳಿಂದ ನಗರಗಳಿಗೆ ಮತ್ತು ಇಲಾಖೆಯ ವಿವಿಧ ಘಟಕಗಳಿಗೂ, ಹಾಗೆಯೇ 30 ಎಸ್ ಪಿ, 60 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಐಜಿಪಿ ಅಧಿಕಾರಿ ಶ್ರೇಣಿ ಅಧಿಕಾರಿಗಳನ್ನು ಜಿಲ್ಲೆಗಳಿಂದ ಮತ್ತು ವಲಯಗಳಿಂದ ವರ್ಗಾವಣೆ ಮಾಡಲು ಪೂರ್ವ ತಯಾರಿ ನಡೆದಿದೆ.ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಮಧ್ಯದಲ್ಲಿ ಈ ವರ್ಗಾವಣೆಗಳನ್ನು ಮಾಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿರುತ್ತಾರೆ.