ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.ಇಂದು ರಾತ್ರಿ ಅಥವಾ ನಾಳೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರು ಬಿಜೆಪಿಯಿಂದ ಘೋಷಣೆಯಾಗುವ ಸಾಧ್ಯತೆಇದೆ ಎಂದು ಬಿಜೆಪಿ ಉನ್ನತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ.
ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಹೆಜ್ಜೆಯಿಟ್ಟ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.ಆರ್ಎಸ್ಎಸ್ನ ಪ್ರಮುಖರಾದ ಹರೀಶ್ ಪೈ ನೇತೃತ್ವದಲ್ಲಿ ಬಿಜೆಪಿಗೆ ಆಗಮಿಸುವಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಬೇಡಿಕೆಯಿಟ್ಟು, ಇವರ ಬೇಡಿಕೆಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.
ಇದೇ ವಿಚಾರಕ್ಕೆ ರಾಣಿ ತ್ರಿಷಿಕಾ ಸಿಂಗ್ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಹಮತ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.ರಾಜಮನೆತನ ರಾಜಕಾರಣಕ್ಕೆ ಬರುವುದರಿಂದ, ಮನೆತನಕ್ಕೂ ಸಮಾಜಕ್ಕೂ ಒಳ್ಳೆಯದಾಗಲಿದೆ ಎಂದು ಮಾತುಕತೆ ಮೂಲಕ ಒಪ್ಪಿಸಿದ ಹರೀಶ್ ಪೈ. ಇಂದು ದೆಹಲಿಯಲ್ಲಿ ನಡೆಯಲಿರುವ ಸಿಇಸಿ ಸಭೆಯ ಬಳಿಕ ಬಿಡುಗಡೆಯಾಗಲಿರುವ ಪಟ್ಟಿಯಲ್ಲಿಯೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರು ಅಂತಿಮವಾಗುವ ಸಾಧ್ಯತೆಯಿದೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಯುವ ಹಾಗೂ ಹೊಸಮುಖದ ಅಭ್ಯರ್ಥಿಯಾಗಿದ್ದು, ರಾಜಕಾರಣಕ್ಕೆ ಆಗಮಿಸುವ ಮುನ್ನವೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬಸ್ಥರು. ಒಂದು ರಾಜಮನೆತನದವರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಬಿಜೆಪಿ ಪಕ್ಷಕ್ಕೂ ಹೆಗ್ಗಳಿಕೆ. ಇಲ್ಲಿಯವರೆಗೂ ಬಿಜೆಪಿ ರಾಜ್ಯದಲ್ಲಿ ಇಂತಹ ಪ್ರಯೋಗ ಮಾಡದೇ ಇದ್ದು, ಇದೊಂದು ಹೊಸ ಪ್ರಯತ್ನ.
ಇತ್ತ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕಾರಣಕ್ಕೆ ಬಂದಿದ್ದೇ ಆದ್ರೆ, ಅವರ ಆಗಮನದ ಪ್ರಭಾವ ಹಳೆಯ ಮೈಸೂರು ಭಾಗದ ಕನಿಷ್ಠ ಆರೇಳು ಜಿಲ್ಲೆಗಳಲ್ಲಿನ ಕ್ಷೇತ್ರಗಳ ಮೇಲೆ ಬೀರಲಿರುವುದು. ಹೀಗೆ ಸಾಲು ಸಾಲು ಕಾರಣಗಳನ್ನಿಟ್ಟುಕೊಂಡು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಆಫರ್ ಕೊಟ್ಟಿರುವ ಬಿಜೆಪಿ. ಆರ್ಎಸ್ಎಸ್ನ ಪ್ರಮುಖರಾದ ಹರೀಶ್ ಪೈ ನೇತೃತ್ವದಲ್ಲಿ ಮಾತುಕತೆ ನಡೆಸಿ, ಬಿಜೆಪಿ ಸಹಮತ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.