ರಾಮನಗರ: ನಗರದ ಆರ್ಟಿಒ ಕಚೇರಿ ಮೇಲೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಭ್ರಷ್ಟರ ಅಕ್ರಮ ಪತ್ತೆ ಹಚ್ಚಿ ಬಿಸಿ ಮುಟ್ಟಿಸಿದ್ದಾರೆ.ಸಾರ್ವಜನಿಕರ ದೂರಿನ ಮೇರೆಗೆ ಲೋಕಾಯುಕ್ತರು ದಾಳಿ ನಡೆಸಿದ್ದು, ಆರ್ಟಿಓ ಕಚೇರಿಗಳಲ್ಲಿ ಏಜೆಂಟರ್ ಗಳದ್ದೇ ಕಾರುಬಾರಾಗಿದೆ ಎಂಬ ದೂರುಗಳ ಆದಾರದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಸಾರಿಗೆ ಕಚೇರಿಗಳ ಮೇಲೆಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿದ್ದ ದಾಖಲೆ ಪರಿಶೀಲಿಸಿದಾಗ ಕೆಲವೊಂದು ಅರ್ಜಿ, ಕಡತಗಳನ್ನು ಹಲವು ತಿಂಗಳಿಂದ ವಿಲೇವಾರಿ ಮಾಡದೇ ಬಾಕಿ ಉಳಿಸಿಕೊಂಡಿರುವುದು, ಏಜೆಂಟ್ಗಳ ಮೂಲಕ ಲಂಚಕ್ಕೆ ಬೇಡಿಕೆಯಿಡಲು ಅಧಿಕಾರಿಗಳು ಪರೋಕ್ಷವಾಗಿ ಪ್ರಯತ್ನಿಸಿದ್ದರು ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ.
ಲೋಕಾಯುಕ್ತ ಎಸ್ ಪಿ ಹಾಗೂ ಡಿವೈಎಸ್ ಪಿ ನೇತೃತ್ವದಲ್ಲಿ ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ತಿಮಿಂಗಲಗಳ ಜಾಲಕ್ಕೆ ಬಲೆ ಬೀಸಿದೆ.ಲೋಕಾಯುಕ್ತ ದಾಳಿ ನಡೆಯುತ್ತಿದ್ದಂತೆ ಪ್ರಾದೇಶಿಕ ಕಚೇರಿ ಮುಂಭಾಗದಲ್ಲಿದ್ದ ಬ್ರೋಕರ್ ಗಳು ಅಂಗಡಿಗಳನ್ನು ತೆರೆಯದೆ ಕಚೇರಿಯತ್ತ ಯಾರು ಮುಖ ಮಾಡಿರಲಿಲ್ಲ. ಇದರಿಂದ ಪ್ರಾದೇಶಿಕ ಕಚೇರಿ ಆವರಣ ಮೌನಕ್ಕೆ ಜಾರಿತ್ತು.