ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸರು ಉಡುಪಿಯ ಪಿಡಿಓ ಉಪ್ಪೂರ್ ವಿಲೇಜ್ ಪಂಚಾಯತ್ ಸಂಜಯ್ ಎಂಬುವನನ್ನು ರೂ 13,300 ಲಂಚ ಪಡೆಯುವಾಗ ಬಂಧಿಸಿರುತ್ತಾರೆ.ವಿಲೇಜ್ ಪಂಚಾಯತ್ ಸಂಜಯ್ ದೂರುದಾರ ರವಿ ಡಿಲಿಮ ರವರ ಕಡೆಯಿಂದ ಖಾತ ಮತ್ತು ಟ್ರೇಡ್ ಲೈಸೆನ್ಸ್ ನೀಡಲು 13 ಸಾವಿರದ ಮುನ್ನೂರು ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿರುತ್ತಾನೆ.
ಮತ್ತೊಂದು ಪ್ರಕರಣದಲ್ಲಿ ಧಾರವಾಡ ಲೋಕಾಯುಕ್ತ ಪೊಲೀಸರು ಕೆ ಎಸ್ ಎಫ್ ಸಿ ಯಾ ಸೀನಿಯರ್ ಲೀಗಲ್ ಮ್ಯಾನೇಜರ್ ರಮೇಶ್ ಎಂಬುವನನ್ನು 8000 ರೂ ಲಂಚ ಪಡೆಯುವಾಗ ಬಂಧಿಸಿರುತ್ತಾರೆ.ಹಿರೇಕೆರೂರು ತಾಲೂಕಿನ ಪ್ರವೀಣ್ ಮಾಲಾಗಿಗೆ ಕೆಎಸ್ಎಫ್ಸಿಯಲ್ಲಿ ಲೋನ್ ಕೊಡಲು ಸೀನಿಯರ್ ಲೀಗಲ್ ಮ್ಯಾನೇಜರ್ ರಮೇಶ್ ರವರು ಹಣದ ಡಿಮ್ಯಾಂಡ್ ಇಟ್ಟಿದ್ದರು ಎಂದು ಪ್ರವೀಣ್ ಮಲಗಿ ನೀಡಿದ ದೂರಿನ ಮೇಲೆ ಲಂಚದ ಹಣ 8000ರೂ ಪಡೆಯುವಾಗ ಸಿಕ್ಕಿ ಬಿದ್ದಿರುತ್ತಾನೆ.
ಕೊಪ್ಪಳ ಲೋಕಾಯುಕ್ತ ಪೊಲೀಸರು ಟೌನ್ ಮತ್ತು ಕಂಟ್ರಿ ಪ್ಲಾನಿಂಗನ ಟೌನ್ ಪ್ಲಾನರ್ ರಮೇಶ್ ಮೂರು ಲಕ್ಷ ರೂ ಲಂಚ ಪಡೆಯುವಾಗ ಬಲೆಗೆ ಬಿದ್ದಿರುತ್ತಾರೆ.
ಕೊಪ್ಪಳ ಜಿಲ್ಲೆಯ ರವಿಚಂದ್ರನ್ ಲ್ಯಾಂಡ್ ಡೆವಲಪರ್, ಲೇಔಟ್ ಅಪ್ರುವಲ್ಗೆ ಸಲ್ಲಿಸಿದ್ದ ಅರ್ಜಿಗೆ ಒಪ್ಪಿಗೆ ನೀಡಲು 8 ಲಕ್ಷ ಲಂಚ ಡಿಮಾಂಡ್ ಮಾಡುತ್ತಿದ್ದಾನೆ ಎಂದು ನೀಡಿದ ದೂರಿನ ಮೇರೆಗೆ, ಈ ಸಂಬಂಧ ಇಂದು ಮೂರು ಲಕ್ಷ ರೂ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಬಿದ್ದಿರುತ್ತಾನೆ ಎಂದು ಲೋಕಾಯುಕ್ತ ಪೊಲೀಸರು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.