ಬೆಂಗಳೂರು: ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧಡೆ ಎಂಟು ಜಾಗಗಳಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದ್ದಾರೆ.
ಕೊಡಗು ಜಿಲ್ಲೆಯ ಹಾರಂಗಿ ಡ್ಯಾಮ್ ನ ಎ ಇ ಇ ಪುಟ್ಟಸ್ವಾಮಿ, ಬೀದರ್ ಜಿಲ್ಲೆಯ ಕೆ ಎಲ್ ಸುರೇಶ್ ನಿವೃತ್ತ ಹಣಕಾಸು ವಿಭಾಗದ ಅಧಿಕಾರಿ ಪಶು ಸಂಗೋಪನಾ ಇಲಾಖೆ, ಬಳ್ಳಾರಿ ಜಿಲ್ಲೆಯ ಶಿವಣ್ಣ ಡೈರೆಕ್ಟರ್ ಫಿಶರೀಸ್ ವಿಭಾಗ, ಮೈಸೂರು ಜಿಲ್ಲೆಯ ರೇವನ್ ಕುಮಾರ್ ಎಇ ಪಿಡಬ್ಲ್ಯೂಡಿ ಇಲಾಖೆ, ಚಿತ್ರದುರ್ಗ ಜಿಲ್ಲೆಯ ಸುಶೀಲಮ್ಮ ನಿವೃತ್ತ ಹಣಕಾಸು ವಿಭಾಗದ ಅಧಿಕಾರಿ ನಿರ್ಮಿತಿ ಕೇಂದ್ರ ಚಿತ್ರದುರ್ಗ ಜಿಲ್ಲೆ, ಮಂಗಳೂರಿನ ಬಾಬು ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್, ಶಿವಮೊಗ್ಗ ಜಿಲ್ಲೆಯ ಶೋಭಾ ಡಿಸ್ಟ್ರಿಕ್ಟ್ ಆಫೀಸರ್, ಬ್ಯಾಕ್ವರ್ಡ್ ಕ್ಲಾಸೆಸ್ ಅಂಡ್ ವೆಲ್ಫೇರ್ ಡಿಪಾರ್ಟ್ಮೆಂಟ್, ಮತ್ತು ಬೆಳಗಾವಿ ಜಿಲ್ಲೆಯ ಅಜಯ್ ಸಿಂಗ್ ಎ ಇ ಇ, ಜಿಲ್ಲಾ ನಗರಾಭಿವೃದ್ಧಿ ಕೋಶ ದಾಳಿಗೊಳಗಾಗಿರುವ ಅಧಿಕಾರಿಗಳು.ಈ ಎಂಟು ಜನ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ. ತಕ್ಷಣದ ಮಾಹಿತಿ ಪ್ರಕಾರ ಅಪಾರ ಮೌಲ್ಯದ ಅಕ್ರಮವಾಗಿ ಸಂಪಾದಿಸಿರುವ ನಗ ನಾಣ್ಯ ಹಾಗೂ ನಿವೇಶನ ಪತ್ರಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ .
ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ಇಲಾಖೆ, ಜಿಲ್ಲಾ ಮಟ್ಟದ ಅಧಿಕಾರಿ, ಶೋಭಾ ಅವರ ಮೇಲೆ ನಡೆದಿರುವ ದಾಳಿಯಲ್ಲಿ ಅಪಾರಮೊತ್ತದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಸುಮಾರು 40 ಲೋಡ್ನಷ್ಟು ಅಕ್ರಮ ಮರಳು ಸಂಗ್ರಹವಾಗಿರುವುದು ಪತ್ತೆಯಾಗಿದೆ. ಶಿಕಾರಿಪುರದಲ್ಲಿ 50ಲಕ್ಷ ರೂಪಾಯಿ ಹೆಚ್ಚು ಬೆಲೆ ಬಾಳುವ ನಿವೇಶನ ಹಾಗೂ ಕೋಟ್ಯಂತರ ರೂ. ಬೆಲೆ ಬಾಳುವ ಮೂರು ಅಂತಸ್ತಿನ ಕಟ್ಟಡ ಸೇರಿದಂತೆ ಸಾಗರ ಮತ್ತಿತರ ಕಡೆ ಸೇರಿದಂತೆ ಒಟ್ಟು 6 ಕಡೆ ದಾಳಿ ಅಕ್ರಮ ಗಳಿಕೆ ಪತ್ತೆ ಹಚ್ಚಿದ್ದಾರೆ ಎಂದು ಹೇಳಲಾಗಿದೆ.
ಬೆಳಗಾವಿಯ ಅಧಿಕಾರಿ ಅಜಿತ್ ರಜಪೂತ್ ಅವರ ಅಥಣಿ ನಿವಾಸಿ ಸೇರಿದಂತೆ ಬೆಳಗಾವಿಯಲ್ಲೂ ಮೂರು ಮನೆ ಹೊಂದಿದ್ದಾರೆ ಎನ್ನಲಾಗಿದೆ.
ಭ್ರಷ್ಟರ ಬೇಟೆ ಅಕ್ರಮ ಆಸ್ತಿ ಗಳಿಕೆ ಪತ್ತೆ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ



