ಮೆಲ್ಬರ್ನ್: ಮಹಿಳಾ ಗ್ರ್ಯಾಂಡ್ಸ್ಲಾಮ್ ಇತಿಹಾಸದಲ್ಲೇ ಅತ್ಯಂತ ದೀರ್ಘ ಟೈಬ್ರೇಕರ್ವರೆಗೆ ಬೆಳೆದ ಪಂದ್ಯದಲ್ಲಿ ಎಲೆನಾ ರಿಬಾಕಿನಾ ಅವರನ್ನು ಪರಾಭವಗೊಳಿಸಿದ ಅನ್ನಾ ಬ್ಲಿಂಕೊವಾ, ಆಸ್ಟ್ರೇಲಿಯನ್ ಓಪನ್ ಟೂರ್ನಿಯ ನಾಲ್ಕನೇ ಸುತ್ತಿಗೆ ಮುನ್ನಡೆದರು.
9 ಬಾರಿ ಮ್ಯಾಚ್ ಪಾಯಿಂಟ್ ಅವಕಾಶ ಕಳೆದುಕೊಂಡ, ಆರು ಬಾರಿ ಉಳಿಸಿಕೊಂಡ ಬ್ಲಿಂಕೊವಾ ಗುರುವಾರ ದೊಡ್ಡ ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣರಾದರು.
ಕಳೆದ ವರ್ಷ ಈ ಟೂರ್ನಿಯ ಫೈನಲ್ ತಲುಪಿದ್ದ ರಿಬಾಕಿನಾ, ಅಂಕಣದ ಇನ್ನೊಂದು ಬದಿ ಅಷ್ಟೇ ನರ್ವಸ್ ಆಗಿದ್ದರು. ಅಂತಿಮವಾಗಿ ಬ್ಲಿಂಕೊನಾ 6-4, 4-6, 7-6 (20) ರಿಂದ ಜಯಗಳಿಸಿದರು. ಟೈಬ್ರೇಕರ್ 42 ಪಾಯಿಂಟ್ಗಳನ್ನು ಕಂಡಿತು. 2022ರ ವಿಂಬಲ್ಡನ್ ಚಾಂಪಿಯನ್ ಸಹ ಆಗಿರುವ ರಿಬಾಕಿನಾ, ಕಳೆದ ವರ್ಷ ಇಲ್ಲಿ ಅರಿನಾ ಸಬಲೆಂಕಾ ಎದುರು ಸೋತಿದ್ದರು.
ಅವರು ಆರು ಸರ್ವಿಸ್ ಬ್ರೇಕ್ಗಳನ್ನು ಕಂಡ ಮೂರನೇ ಸೆಟ್ನಲ್ಲಿ ಎರಡು ಮ್ಯಾಚ್ ಪಾಯಿಂಟ್ಗಳನ್ನು ಉಳಿಸಿದ್ದರು. ‘ನನ್ನಿಂದಾದಷ್ಟು ಶಾಂತಚಿತ್ತಳಾಗಿ ಆಡಲು ಪ್ರಯತ್ನಿಸಿದೆ’ ಎಂದು ಬ್ಲಿಂಕೋವಾ ಹೇಳಿದರು.