ಭಾರತ ಮತ್ತು ಶ್ರೀಲಂಕಾಗಳ ಜಂಟಿ ಆತಿಥ್ಯದಲ್ಲಿ ಆಯೋಜಿಸಲ್ಪಡುತ್ತಿರುವ ಮಹತ್ವದ ಐಸಿಸಿ ಟಿ೨೦ ವಿಶ್ವಕಪ್ ೨೦೨೬ ಟೂರ್ನಿಗೆ ಇದೀಗ ಬಣಗಳ ರಚನೆ ಆಗಿದೆ. ೨೦ ತಂಡಗಳನ್ನು ೪ ಬಣಗಳಲ್ಲಿ ವಿಂಗಡಿಸಲಾಗಿದ್ದು ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಒಂದೇ ಗುಂಪಿನಲ್ಲಿ ಸ್ಥಾನ ಪಡೆದು ಕೊಂಡಿವೆ. ಹೀಗಾಗಿ ಗುಂಪು ಹಂತದಿಂದಲೇ ಕಠಿಣ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಕಳೆದ ಏಷ್ಯಾ ಕಪ್ ನಲ್ಲಿ ಯೂ ಇತ್ತಂಡಗಳು ಒಂದೇ ಗುಂಪಿನಲ್ಲಿ ಆಡಿದ್ದವು. ಕ್ರಿಕ್ಬಜ್ ವರದಿಯ ಪ್ರಕಾರ, ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ಸಂಪೂರ್ಣ ವಿಭಿನ್ನ ಆರಂಭಿಕ ಸವಾಲುಗಳನ್ನು ಎದುರಿಸಲಿವೆ.
ಭಾರತ ತಂಡ ಸುಲಭ ಎನ್ನಬಹುದಾದ ಗ್ರೂಪ್ನಲ್ಲಿ ಸ್ಥಾನ ಪಡೆದಿದ್ದರೆ, ಶ್ರೀಲಂಕಾ ಕಠಿಣ ಸ್ಪರ್ಧೆಯಿರುವ ಗ್ರೂಪ್ನಲ್ಲಿ ಸಿಲುಕಿದೆ. ನವೆಂಬರ್ ೨೫ ರಂದು ಮುಂಬೈನಲ್ಲಿ
ನಡೆಯುವ ಕಾರ್ಯಕ್ರಮದಲ್ಲಿ ಐಸಿಸಿ ಅಧಿಕೃತವಾಗಿ ಈ ಬಣಗಳನ್ನು ಪ್ರಕಟಿಸಲಿದೆ. ಟೂರ್ನಿ ೨೦೨೪ರ ಆವೃತ್ತಿಯಂತೆಯೇ ನಡೆಯಲಿದೆ. ಪ್ರತಿ ಗ್ರೂಪ್ನಿಂದ ಅಗ್ರ ಎರಡು ತಂಡಗಳು ಸೂಪರ್ ಎಂಟು ಹಂತಕ್ಕೆ ಪ್ರವೇಶಿಸಲಿವೆ. ನಂತರ, ಅಗ್ರ ನಾಲ್ಕು ತಂಡಗಳು ಸೆಮಿ-ಫೈನಲ್ಗೆ ಮುನ್ನಡೆಯಲಿವೆ. ಟಿ೨೦ ಐ ಶ್ರೇಯಾಂಕದಲ್ಲಿ ನಂ.೧ ಸ್ಥಾನದಲ್ಲಿರುವ ಭಾರತ, ತನ್ನ ಐದು ತಂಡಗಳ ಗ್ರೂಪ್ನಲ್ಲಿ ಪಾಕಿಸ್ತಾನ ಹೊರತುಪಡಿಸಿದರೆ ಟೆಸ್ಟ್ ಮಾನ್ಯತೆಯಿರುವ ದೇಶ ಒಂದು ಮಾತ್ರ. ಉಳಿದ ತಂಡಗಳೆAದರೆ ನೆದರ್ಲಾ್ಯಂ ಡ್ಸ್ , ನಮೀಬಿಯಾ ಮತ್ತು ಯುಎಸ್ಎ (ನಂ.೧೮) . ಪ್ರತಿ ಗ್ರೂಪ್ನಿಂದ ಎರಡು ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಯಾಗುವುದರಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸುಲಭದಲ್ಲಿ ತೇರ್ಗಡೆ ಆಗುವ ಸಾಧ್ಯತೆ ಇದೆ. ಈ ತಂಡಗಳಲ್ಲಿ ನೆದರ್ಲೆಂಡ್ ತಂಡ ಕೊಂಚ ಮಟ್ಟಿಗೆ ಸಲಾವು ಒಡ್ಡಬಲ್ಲುದು.



