ಶಿಡ್ಲಘಟ್ಟ: ಗುಡಿಬಂಡೆಯಿಂದ ಚಿಂತಾಮಣಿಗೆ ಕಡ್ಲೆಕಾಯಿ ಕೊಂಡೊಯ್ಯುತ್ತಿದ್ದ ಲಾರಿ ಇಂದು ಬೆಳಗ್ಗೆ ಪಲ್ಟಿ ಹೊಡೆದು ಲಾರಿ ಚಾಲಕ ಹಾಗೂ ಮಾಲೀಕ ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ.
ಗುಡಿಬಂಡೆಯಿಂದ ಚಿಕ್ಕಬಳ್ಳಾಪುರ – ಶಿಡ್ಲಘಟ್ಟ ಮಾರ್ಗವಾಗಿ ಚಿಂತಾಮಣಿಗೆ ಹೊರಟಿದ್ದ ಕಡಲೆಕಾಯಿ ಮೂಟೆ ತುಂಬಿದ್ದ ಲಾರಿ ಸ್ವಾರಪಲ್ಲಿ ಬಳಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಆಳವಾದ ಮೊರಿಗೆ ಬಿದ್ದಿದೆ.
ಇಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಲಾರಿ ವೇಗಕ್ಕೆ ಲಾರಿಯಲ್ಲಿದ್ದ ಕಳ್ಳೆಕಾಯಿ ಮೂಟೆಗಳು ಚೆಲ್ಲಾಪಲ್ಲಿಯಾಗಿ ಬಿದ್ದಿವೆ. ಆಳವಾದ ಕಂದಕದಲ್ಲಿ ಬಿದ್ದಿರುವ ಲಾರಿ ನುಜ್ಜುಗುಜ್ಜಾಗಿದೆ. ಮಾಲೀಕ ತೀವ್ರವಾಗಿ ಗಾಯಗೊಂಡು ರಕ್ತ ಕಾರಿಕೊಂಡು ಬಿದ್ದಿದ್ದರೆಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಆತನನ್ನು ಚಿಂತಾಮಣಿಗೆ ಸಾಗಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಲಾರಿ ಮುಗಿಚಿ ಬಿದ್ದಿದ್ದು ಮುಂಭಾಗ ಸಂಪೂರ್ಣ ನುಜ್ಜುಗ್ಗುಜ್ಜಾಗಿದೆ. ಚಾಲಕ ಸಿಲುಕಿ ಹಾಕಿಕೊಂಡಿರಬಹುದು ಎಂದು ಸಾರ್ವಜನಿಕರು ಎಷ್ಟೇ ಹುಡುಕಿದರೂ ಸಿಗಲಿಲ್ಲ. ಸ್ಥಳದಲ್ಲಿ ಕಳ್ಳೆಕಾಯಿ ಇರುವುದರಿಂದ ಜನರ ಗುಂಪು ಹೆಚ್ಚಾಗಿತ್ತು.
Leave a Review