ಯಲಹಂಕ: ಬಿಬಿಎಂಪಿ 3ನೇ ವಾರ್ಡ್ ನ ಯಲಹಂಕ ಉಪನಗರ 4ನೇ ಹಂತದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕೂಟದ ಕಾರ್ಯಕರ್ತರು ಅಭ್ಯರ್ಥಿ ಕೆ ಸುಧಾಕರ್ ಪರ ಅಬ್ಬರದ ಪ್ರಚಾರ ನಡೆಸಿ ಬಿಜೆಪಿಗೆ ಗೆಲುವು ತಂದು ಕೊಟ್ಟು, ನರೇಂದ್ರ ಮೋದಿಯವರ ಕೈಬಲ ಪಡಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಈ ಮುನ್ನ ಯಲಹಂಕ ಉಪನಗರ ನಾಲ್ಕನೇ ಹಂತದ ಬಲಮರಿ ಗಣಪತಿ ದೇವಾಲಯದಲ್ಲಿ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ಅವರ ಹೆಸರಲ್ಲಿ ಅರ್ಚನೆ ಪೂಜೆ ಸಲ್ಲಿಸಿ ಗೆಲುವು ನಮ್ಮದಾಗಬೇಕೆಂದು ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಕಾರ್ಯಕರ್ತರು ವಿಜ್ಞ ನಿವಾರಕ ವಿನಾಯಕನಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ. ಶಶಿಕುಮಾರ್, ಬ್ರಾಹ್ಮಣ ಸಮಾಜದ ನಿರ್ದೇಶಕರು ಆದ ಪವನ್ ಕುಮಾರ್, ಜೆಡಿಎಸ್ ಯಲಹಂಕ ಬಾಗದ ಪ್ರಧಾನ ಕಾರ್ಯದರ್ಶಿ ಗಂಗೇಗೌಡ, ಬಿಜೆಪಿ ಯಲಹಂಕ ನಗರ ಮಂಡಲ ಉಪಾಧ್ಯಕ್ಷರು ಹಾಗೂ ಬೂತ್ ಗಳ ಪ್ರಭಾರಿ ಸುಬ್ರಾಮ್ ನಾಯಕ್,ವಾರ್ಡ್ 3ರ, 150, 151, 152, 153, 154 ಹಾಗೂ 155ನೇ ನಂಬರಿನ ಬೂತ್ ಗಳ ಅಧ್ಯಕ್ಷರಾದ ಶ್ರೀಯುತ ಶಿವಣ್ಣ, ನಾಗೇಶ್, ವೆಂಕಟೇಶ್, ಚೇತನ್, ಹೆಚ್.ಜಯಣ್ಣ, ಸುಬ್ರಾಮ್ ನಾಯಕ್, ಮತ್ತು ಕಾರ್ಯದರ್ಶಿಗಳಾದ ಶ್ರೀಯುತ ಪವನ್ ಕುಮಾರ್, ಸುರೇಶ್, ರಾಜಣ್ಣ, ಪಂಡಿತ್ ಆರಾಧ್ಯ, ಸಿ.ಎಸ್.ಮಣಿ ಪಿ.ವೆಂಕಟರಮಣ ಹಾಗೂ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.