ಬೆಂಗಳೂರು: ಲೂಯಿಸ್ ವಿಟಾನ್ ಭಾರತದಲ್ಲಿ ತನ್ನ ಅತಿದೊಡ್ಡ ಮಳಿಗೆಯನ್ನು ಮುಂಬೈನ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ತೆರೆದು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಅಸ್ತಿತ್ವವನ್ನು ವಿಸ್ತರಿಸಿದಂತಾಗಿದೆ.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಪ್ರತಿಷ್ಠಿತ ಆವರಣದಲ್ಲಿ ಇದ್ದು, ಇದು ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಐಷಾರಾಮಿ ಮಳಿಗೆಯಾಗಿದೆ; ಮೈಸನ್ನೊಂದಿಗಿನ ಈ ದೀರ್ಘಾಕಾಲಿನ ಭಾಂಧವ್ಯ 20 ವರ್ಷಗಳ ಹಿಂದೆ ಭಾರತದಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಾಗಗಿನಿಂದಲೂ ಮುಂದುವರೆದಿದೆ.
ಚರ್ಮದ ಉತ್ಪನ್ನಗಳು, ಶೂಗಳು, ಆಕ್ಸಸರೀಸ್ ಮತ್ತು ಸುಗಂಧ ದ್ರವ್ಯಗಳು ಸೇರಿದಂತೆ ಮಹಿಳೆಯರ ಮತ್ತು ಪುರುಷರಿಗಾಗಿ ವಿಶೇಷವಾಗಿ ಸಂಗ್ರಹಿಸಲಾದ ಕಲೆಕ್ಷನ್ಗಳನ್ನು ಗ್ರಾಹಕರು ಇಲ್ಲಿ ಕಾಣುಬಹುದು. ರೆಡಿ-ಟು-ವೇರ್ ಮತ್ತು ವಿಶೇಷ ಆಭರಣಗಳು ಮುಂಬೈನಲ್ಲಿ ಮೊದಲ ಬಾರಿಗೆ ಲಭ್ಯವಿವೆ.
ಪ್ರಸಿದ್ಧ ಭಾರತೀಯ ವಾಸ್ತುಶಿಲ್ಪಿ ಮತ್ತು ವಿನ್ಯಾಸಕರಾದ ರೂಶಾದ್ ಶ್ರಾಫ್ ರವರಿಗೆ ಕಸೂತಿ ಕಲೆಯ ಮರದ ಫಲಕಕ್ಕೆ ಹೊಸ ಸ್ಪರ್ಶ ಸಿದ್ಧಪಡಿಸಲು ನಿಯೋಜಿಸಲಾಗಿತ್ತು – ವಿನ್ಯಾಸಕಾರರ ಸಿಗ್ನೇಚರ್. ಖಾಸಗಿ ಪಾಲುದಾರ ಸಲೂನ್ನಲ್ಲಿ ಪ್ರದರ್ಶಿಸಲಾದ ಈ ಫಲಕವು ಫ್ರೆಂಚ್ ನಾಟ್ಗಳನ್ನು ಹೊಂದಿದ್ದು ಸಾಂಪ್ರದಾಯಿಕ ಸ್ಥಳೀಯ ತಂತ್ರಗಾರಿಕೆಯೊಂದಿಗೆ ಫ್ರೆಂಚ್ನ ಸೌಂದರ್ಯಶಾಸ್ತ್ರದ ಸಂಯೋಜ ನೆಯಾಗಿದೆ. ಹೆಚ್ಚಿನ ಮಾಹಿತಿಗೆ: www.louisvuitton.com