ನವದೆಹಲಿ: ಹೊಸ ವರ್ಷಕ್ಕೆ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯ ಶಾಕ್ ಸಿಕ್ಕಿದೆ. ೨೦೨೫ರಲ್ಲಿ ೨೦೦ ರೂಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆ ಆಗಿದೆ. ಆದರೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿಲ್ಲ. ೧೯ ಕಿಲೋ ಮತ್ತು ೪೭.೫೦ ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳು ದುಬಾರಿಯಾಗಿವೆ. ೧೯ ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ ೧೧೦ ರೂನಿಂದ ೧೧೨ ರೂನಷ್ಟು ಏರಿದೆ. ಬೆಂಗಳೂರಿನಲ್ಲಿ ೧೧೦.೫೦ ರೂ ಬೆಲೆ ಹೆಚ್ಚಳ ಆಗಿದೆ. ಇನ್ನು, ೪೭.೫೦ ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ೨೭೪.೫೦ ರೂ ಏರಿಕೆ ಆಗಿದ್ದು, ೪,೪೦೭ ರೂ ಗಡಿ ಮುಟ್ಟಿದೆ.
ಬೆಂಗಳೂರಿನಲ್ಲಿ ೧೪.೨ ಕಿಲೋ ಅಡುಗೆ ಅನಿಲ: ೮೫೫.೫೦ ರೂ, ೫ ಕಿಲೋ ಅಡುಗೆ ಅನಿಲ: ೩೧೮.೫೦ ರೂ, ೧೯ ಕಿಲೋ ವಾಣಿಜ್ಯ ಸಿಲಿಂಡರ್: ೧,೭೬೪.೫೦ (೧೧೦.೫೦ ರೂ ಏರಿಕೆ), ೪೭.೫ ಕಿಲೋ ವಾಣಿಜ್ಯ ಸಿಲಿಂಡರ್: ೪,೪೦೭ ರೂ (೨೭೪.೫೦ ರೂ ಏರಿಕೆ)
ಬಹಳ ತಿಂಗಳುಗಳಿAದ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚೇನೂ ಏರಿಕೆ ಆಗಿಲ್ಲ. ೧೪.೨ ಕಿಲೋ ಎಲ್?ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ ೧-೨ ವರ್ಷದಲ್ಲಿ ಹೆಚ್ಚಳ ಆಗಿರುವುದು ಸುಮಾರು ೫೦ ರೂ ಮಾತ್ರವೇ.
ದೇಶಾದ್ಯಂತ ವಿವಿಧ ನಗರಗಳಲ್ಲಿ ೧೯ ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ (ಜ. ೧ಕ್ಕೆ):
ದೆಹಲಿ: ೧,೬೯೧.೫೦ ರೂ,ಕೋಲ್ಕತಾ: ೧,೬೮೪ ರೂ, ಮುಂಬೈ: ೧,೬೪೨.೫೦ ರೂ, ಬೆಂಗಳೂರು: ೧,೭೬೪.೬೦ ರೂ, ಪಾಟ್ನಾ: ೧,೯೫೩ ರೂ,ಲಕ್ನೋ: ೧,೮೧೪ ರೂ, ಗುರುಗ್ರಾಮ್: ೧,೭೦೮.೫೦ ರೂ, ಭೋಪಾಲ್; ೧,೬೯೬ ರೂ, ನೋಯ್ಡಾ: ೧,೬೯೧ ರೂ
ಕಮರ್ಷಿಯಲ್ ಗ್ಯಾಸ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಅಡುಗೆ ವೆಚ್ಚ ಏರಿಕೆಯಾಗಿ, ಅಂತಿಮವಾಗಿ ಗ್ರಾಹಕರಿಗೆ ಊಟದ ಬಿಲ್?ನಲ್ಲಿ ಏರಿಕೆ ಆಗುತ್ತದೆ.



