ಮುಂಬೈ: ಪ್ಲೇ ಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡ, ಶುಕ್ರವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಲು ಮುಂಬೈ ಯೋಚಿಸುತ್ತಿದೆ.ಹಲವು ದಿನಗಳ ಹಿಂದೆಯೆ ಮುಂಬೈ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿದ್ದರೆ ಲಕ್ನೋ ತಂಡ ಶುಕ್ರವಾರದ ಪಂದ್ಯದಲ್ಲಿ ಗೆದ್ದರೂ ಅಂತಿಮ ನಾಲ್ಕರ ಹೋರಾಟಕ್ಕೆ ತೇರ್ಗಡೆಯಾಗುವ ಅವಕಾಶ ಬಹಳ ಕಡಿಮೆ.
ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಲಕ್ನೋ ತಂಡವು ಅಮೂಲ್ಯ ಅಂಕಗಳನ್ನು ಕಳೆದುಕೊಂಡಿತಲ್ಲದೇ ತನ್ನ ರನ್ಧಾರಣೆಯನ್ನು ಉತ್ತಮಪಡಿಸಿಕೊಳ್ಳಲು ವಿಫಲವಾಗಿತ್ತು.ಮುಂಬೈಯ ವಾಂಖೇಡೆ ಮೈದಾನ ಬ್ಯಾಟಿಂಗ್ಗೆ ಹೆಚ್ಚು ನೆರವಾಗುವ ಪಿಚ್. ಆದರೆ ಇದು ಕೆಲವೊಮ್ಮೆ ನಿರ್ದಿಷ್ಟ ಸ್ಪಿನ್ನರ್ಗಳಿಗೆ ನೆರವಾಗುವುದಿದೆ.
ಈ ಮೈದಾನದಲ್ಲಿ ಒಟ್ಟು 115 ಐಪಿಎಲ್ ಪಂದ್ಯಗಳು ನಡೆದಿದ್ದು ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 53 ಪಂದ್ಯಗಳಲ್ಲಿ ಗೆದ್ದಿದ್ದರೆ, ಬೌಲಿಂಗ್ ಮಾಡಿದ ತಂಡ 62 ಪಂದ್ಯಗಳಲ್ಲಿ ಗೆದ್ದಿದೆ. ಮೊದಲ ಇನಿಂಗ್ಸ್ ಸರಾಸರಿ ಸ್ಕೋರ್ 170. ನೇರಪ್ರಸಾರ: ಸ್ಟಾರ್ನ್ಪೋರ್ಟ್ಸ್ (ಟೀವಿ), ಜಿಯೋ ಸಿನಿಮಾ (ಆಪ್), ಪಂದ್ಯ ಆರಂಭ: ರಾತ್ರಿ 7.30