This is the title of the web page
This is the title of the web page

ಲಕ್ನೋ-ಹೈದರಾಬಾದ್ ಇಂದು ಮುಖಾಮುಖಿ

ಹೈದರಾಬಾದ್: ಐಪಿಎಲ್ 2023 ರಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ.

ಇಂದು ಎರಡು ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಲಕ್ನೋ-ಹೈದರಾಬಾದ್ ಮುಖಾಮುಖಿಯಾಗುತ್ತಿದೆ. ಲಕ್ನೋ ಕಳೆದ ಮೂರು ಪಂದ್ಯಗಳಿಂದ ಗೆಲುವಿಲ್ಲದೇ ಬರಗಾಲ ಎದುರಿಸುತ್ತಿದೆ.

ಇದುವರೆಗೆ ಆಡಿದ 11 ಪಂದ್ಯಗಳಿಂದ 5 ಗೆಲುವು ಮಾತ್ರ ಕಂಡಿದೆ. ಹೀಗಾಗಿ ಗೆಲುವಿನ ಒತ್ತಡದಲ್ಲಿದೆ. ಅತ್ತ ಸನ್ ರೈಸರ್ಸ್ ಹೈದರಾಬಾದ್ ಆಡಿದ 10 ಪಂದ್ಯಗಳಲ್ಲಿ ಗೆದ್ದಿದ್ದು 4 ಪಂದ್ಯ. ಕಳೆದ ಪಂದ್ಯದಲ್ಲಿ ಗೆಲುವು ಕಂಡಿದ್ದರಿಂದ ಹೈದರಾಬಾದ್ ಆತ್ಮವಿಶ್ವಾಸದಲ್ಲಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗುವುದು.