ನೆಲಮಂಗಲ: ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಮುಂದಿನ ದಿನಗಳಲ್ಲಿ ನೆಲಮಂಗಲ ಬಹುತೇಕ ಕೆರೆ, ಕಟ್ಟಡಗಳನ್ನು ಅಭಿರುದ್ದಿ ಮಾಡಲು ಪಣ ತೊಟ್ಟಿರುವೆ ನಮ್ಮ ಅಧಿಕಾರದವದಿಯಲ್ಲಿ ಪ್ರಾಧಿಕಾರವನ್ನು ಉನ್ನತ ಸ್ಥಾನಕ್ಕೆರಿಸುವುದೇ ನನ್ನ ಗುರಿ ಎಂದು ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಎಂ ನಾರಾಯಣ ಗೌಡ ತಿಳಿಸಿದರು.
ನಗರದ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ತಮ್ಮ ಕೊಠಡಿಗೆ ಪೂಜೆ ಮಾಡಿ ಪದಗ್ರಹಣ ಮಾಡಿದ ಅವರು ನನ್ನ ಪಕ್ಷ ನಿಷ್ಠೆ ಯನ್ನು ಗುರುತಿಸಿ ನನ್ನ ನೆಚ್ಚಿನಶಾಸಕರಾದ ಶ್ರೀನಿವಾಸ್ರವರು, ಎಂ ಎಲ್ ಸಿ ರವಿ ಅಣ್ಣ, ಮುಖ್ಯ ಮತ್ರಿಗಳು, ಉಪ ಮುಖ್ಯ ಮತ್ರಿಗಳು, ಸಂಸದರಾದ ಸುರೇಶ ಅಣ್ಣ ರವರ ಆಶೀರ್ವಾದ ದಿಂದಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದೆನೇ ನಾನು ಅವರಿಗೆ
ಋಣಿಯಾಗಿರುತ್ತೇನೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಪಕ್ಷದ ಕಾರ್ಯಕರ್ತರಿಗೆ ಎಲ್ಲರಿಗೂ ತುಂಬು ಅಭಿನಂದನೆಗಳು ತಿಳಿಸುತ್ತೆನೆ ಎಂದರು.
ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಂತೆ ಕೆಲಸ ಕಾರ್ಯಗಳು ಮಾಡಿ ನೆಲಮಂಗಲವನ್ನು ಅಭಿವೃದ್ಧಿಪಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರದ ಸದಸ್ಯರಾಗಿ ಭಿನ್ನಮಂಗಲ ಬಿ ಜಿ ವಾಸು, ರಂಗಸ್ವಾಮಿ, ಪ್ರಕಾಶ್ ಬಾಬು ಅಧಿಕಾರ ವಹಿಸಿಕೊಂಡರು.
ನೂತನ ಅಧ್ಯಕ್ಷರಿಗೆ ನೂರಾರು ಜನ ಮುಖಂಡರು ಬಂದುಗಳು, ಸ್ನೇಹಿತರುಸೇರಿ ಹೂ ಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು. ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.