ಮಾಗಡಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮತ್ತು ತಾಲ್ಲೂಕು ಮಡಿವಾಳ ಸಂಘದ ವತಿಯಿಂದ ಶ್ರೀ ಮಡಿವಾಳ ಮಾಚೀದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಡಿವಾಳ ಮಾಚೀದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಸಮುದಾಯ ಯಾವುದಾದರೂ ಇದೆಯೆಂದರೆ ಅದು ಮಡಿವಾಳ ಸಮುದಾಯವಾಗಿದೆ.ಈ ಸಮಾಜವು ಪ್ರಸ್ತುತ ಸಮಾಜದಲ್ಲಿ ಪ್ರವರ್ಧಮಾನಕ್ಕೆ ಬರಬೇಕಾದರೆ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು.
ತಾಲ್ಲೂಕಿನಲ್ಲಿ ಸುಮಾರು 250 ಕ್ಕೂ ಹೆಚ್ಚಿನ ಮಂದಿ ಬಟ್ಟೆಗಳನ್ನು ತೊಳೆದು ಇಸ್ತ್ರಿ ಮಾಡಿಕೊಂಡು ಶ್ರಮಿಕ ಬದುಕು ಕಟ್ಟಿಕೊಂಡಿದ್ದಾರೆ.ಇವರಿಗೆ ತಾಲ್ಲೂಕಿನಲ್ಲಿ ದೋಬಿಘಾಟ್ ಇಲ್ಲದಿರುವುದು ಬೇಸರದ ಸಂಗತಿ.ಮಡಿವಾಳ ಸಮುದಾಯದ ಪದಾಧಿಕಾರಿಗಳು ದೋಭಿಘಾಟ್ ನಿರ್ಮಾಣಕ್ಕೆ ಜಾಗ ನೀಡುವಂತೆ ಮನವಿ ಮಾಡಿದ್ದು ಕಂದಾಯ ಭೂಮಿಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಂದ್ರಮೂರ್ತಿ ತಿಳಿಸಿದರು.
ತಾಲ್ಲೂಕು ಮಡಿವಾಳ ಸಮುದಾಯದ ಅದ್ಯಕ್ಷರಾದ ತಿರುಮಲೆ ಶ್ರೀನಿವಾಸ್ ಮಾತನಾಡಿ ಅತಿ ಹಿಂದುಳಿದ ಸಮಾಜವಾದ ಮಡಿವಾಳ ಸಮಾಜವನ್ನು ಎಸ್ಸಿಗೆ ಸೇರಿಸಲು ಅನ್ನಪೂರ್ಣಮ್ಮ ವರದಿಯನ್ನು ಜಾರಿಗೊಳಿಸಬೇಕು.ನಮ್ಮ ಸಮುದಾಯದಲ್ಲಿ ಅತ್ಯಂತ ಕಡು ಬಡತನ ಕುಟುಂಬಗಳಿದ್ದು ಎಸ್ಸಿಗೆ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ವರದಿಯ ಪ್ರಸ್ತಾವನೆ ಸಲ್ಲಿಸಿ ಶಿಫಾರಸು ಮಾಡಬೇಕು.
ಇದೇ ಮೊದಲ ಭಾರಿಗೆ ಸರಕಾರದ ವತಿಯಿಂದ ಮಾಚೀದೇವರ ಜಯಂತಿ ಆಚರಣೆ ಮಾಡಲು ಆದೇಶಿಸಿರುವ ಮುಖ್ಯಮಂತ್ರಿಗಳಿಗೆ ತಾಲ್ಲೂಕು ಮಡಿವಾಳ ಸಮುದಾಯದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಶ್ರೀನಿವಾಸ್ ವಿವರಿಸಿದರು.ನಿವೃತ್ತ ವಾಯುಸೇನಾಧಿಕಾರಿ ಎಚ್.ಎನ್.ಶಿವಲಿಂಗಯ್ಯ ಮಾತನಾಡಿ ಮಾಚೀದೇವರ ಹೆಸರಿನಲ್ಲಿ ಸರಕಾರ ಶೌರ್ಯ ಪ್ರಶಸ್ತಿ ನೀಡಲು ಪ್ರಾರಂಭಿಸಬೇಕು.
ಮಾಚೀದೇವ ಶರಣರ ರಕ್ಷಣೆ ಇಲ್ಲದಿದ್ದರೆ ಬಹುತೇಕ ಶರಣದ ಮಾರಣ ಹೋಮವಾಗುತಿತ್ತು.ಜೊತೆಗೆ ವಚನ ಸಾಹಿತ್ಯ ಬೆಂಕಿಗಾ
ಹುತಿಯಾಗುತಿತ್ತು.ಶರಣರ ಪ್ರಾಣ ಮತ್ತು ಅಮೂಲ್ಯ ಸಾಹಿತ್ಯವನ್ನು ರಕ್ಷಿಸಿದ ಕೀರ್ತಿ ಮತ್ತುಹೆಗ್ಗಳಿಕೆ ಮಡಿವಾಳ ಮಾಚೀದೇವರಿಗೆ ಸಲ್ಲುತ್ತದೆ ಎಂದರು.
ಸಂಘದ ಉಪಾಧ್ಯಕ್ಷ ಪಿ.ರಾಜು, ಪ್ರಧಾನ ಕಾರ್ಯದರ್ಶಿ ಹರೀಶ್, ಗೌರವಾದ್ಯಕ್ಷ ಮಹಾಲಿಂಗಯ್ಯ, ಸಂಘಟನಾ ಕಾರ್ಯದರ್ಶಿ ಮಂಜು
ನಾಥ್, ರಂಗನಾಥ್, ಗಿರೀಶ್, ಅಕ್ಷರ ದಾಸೋಹ ಅಧಿಕಾರಿ ಗಂಗಾಧರ್, ಜುಟ್ಟನಹಳ್ಳಿ ದಿನೇಶ್, ಶ್ರೀಪತಿಹಳ್ಳಿ ರಾಜಣ್ಣ ಸೇರಿದಂತೆ ಮತ್ತಿತರಿದ್ದರು.