ಮಾಗಡಿ: ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಅವರು ಈ ಹಿಂದೆ 1993:94 ನೇ ಸಾಲಿನಲ್ಲಿ ಕೊಟ್ಟ ಮಾತಿನಂತೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಸಚಿವ ಸಂಪುಟದಲ್ಲಿ ನಾಲ್ಕು ಖಾತೆ ಸಚಿವರಾಗಿದ್ದ ಸಂದರ್ಭದಲ್ಲಿ ಹೊಸಪೇಟೆಯ ಶ್ರೀ ಬಿಸಿಲು ಮಾರಮ್ಮ ದೇವಾಲಯದ ಪ್ರತಿಷ್ಢಾಪನೆ ಮಾಡಲು ಸಂಪೂರ್ಣ ಸಹಕಾರ ನೀಡಿದ್ದರು.ಇಂದು ದೇವಿಗೆ ಹೊಸಪೇಟೆ ಗ್ರಾಮಸ್ಥರು ಸೇರಿದಂತೆ ಪಟ್ಟಣದಾದ್ಯಂತ ಸುಮಾರು 1200 ಕುಟುಂಬಗಳು ಪ್ರತಿ ಮನೆ ಮನೆಯಲ್ಲಿಯೂ ಮಾರಮ್ಮ ದೇವಿಗೆ ಮಡಲಕ್ಕಿ ತುಂಬಿಸಿ ಸೇವೆ ಸಲ್ಲಿಸುವ ಮೂಲಕ ಬಿಸಿಲಿ ದೇವಿಯ ಭಕ್ತಿಯ ಕೃಪೆಗೆ ಪಾತ್ರರಾಗಿದ್ದಾರೆ.
ಬಿಸಿಲು ಮಾರಮ್ಮ ದೇವಿಯು ಭಕ್ತರ ಸಮಸ್ತ ಇಷ್ಟಾರ್ಥಗಳನ್ನು ಈಡೇರಿಸುವ ದೇವತೆಯಾಗಿದ್ದು ತಮ್ಮ ಇಷ್ಢಾರ್ಥಗಳನ್ನು ಬಗೆಹರಿಸುವ ಶಕ್ತಿ ದೇವತೆ ಎಂಬುದು ಈ ಭಾಗದ ಭಕ್ತರ ಪರಮ ನಂಬಿಕೆಯಾಗಿದೆ.ದೇವಿಗೆ ಶನಿವಾರದಿಂದ ಪ್ರಾರಂಭವಾಗುವ ಈ ವಿಶೇಷ ಪೂಜೆಯು ಭಾನುವಾರ ವಿಶೇಷ ಪೂಜೆ,ಸೋಮವಾರ ಹೊಸಪೇಟೆ ಗ್ರಾಮದ ಪ್ರತಿ ಮನೆಯಲ್ಲಿಯೂ ಸ್ಪರ್ದಾತ್ಮಕವಾಗಿ ಆರತಿ ಸಲ್ಲಿಸುವ ವಾಡಿಕೆ ಕಾಲಾಂತರದಿಂದ ನಡೆದುಕೊಂಡು ಬಂದಿದೆ.
ಮಂಗಳವಾರ ಗ್ರಾಮಸ್ಥರ ನೆಂಟರಿಷ್ಟರು ಬಂಧು ಬಳಗದವರಿಗೆ ಬಾಡೂಡಕ್ಕೆ ಆಹ್ವಾನಿಸಿ ತಮ್ಮ ಶಕ್ತಾನುಸಾರವಾಗಿ ಊಟ ಉಣ ಬಡಿಸುವ ಸಾಂಪ್ರದಾಯಿಕವಾಗಿದೆ.ಹೊಸಪೇಟೆ ಗ್ರಾಮಸ್ಥರ ಮನವಿಯಂತೆ ಈ ಸಂದರ್ಭದಲ್ಲಿ ಮಾರಮ್ಮ ದೇವಿಯ ನೆಲೆಗುಡಿ ನಿರ್ಮಿಸಿಕೊಟ್ಟಿರುವ ಹೆಚ್.ಎಂ.ರೇವಣ್ಣರವರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ.ಪುರಸಭಾ ಸದಸ್ಯರಾದ ಹೊಸಪೇಟೆ ಅಶ್ವಥ್, ಆಶಾಪ್ರವೀಣ್, ಅರ್ಚಕ ರುದ್ರೇಶ್, ನಾರಾಯಣಪ್ಪ,ಯಜಮಾನ್ ಸುರೇಶ್, ಕಾರ್ಪೆಂಟರ್ ಮುನಿರಾಜು, ಭೂ ಬ್ಯಾಂಕ್ ಮಾಜಿ ನಿರ್ದೇಶಕ ಗೋಪಾಲ್, ಕಾರುನರಸಿಂಹಣ್ಣ, ಗುರುಸಿದ್ದಪ್ಪ, ಪಾಟೀಲ್ ರಂಗನಾಥ್, ಶಿವಲಿಂಗಯ್ಯ,ನೇತ್ರವತಿ ಮತ್ತಿತರಿದ್ದರು.