ತಿ.ನರಸೀಪುರ: ಕೇತಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಮಾದನಾಯಕ ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕಿನ ಕೇತಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ನಿಂಗಶೆಟ್ಟಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಬಯಸಿ ಮಾದನಾಯಕ ಒಬ್ಬರೇ ನಾಮಪತ್ರ ಸಲ್ಲಿಸಿ ಇವರ ವಿರುದ್ಧವಾಗಿ ಮತ್ಯಾರು ನಾಮಪತ್ರ ಸಲ್ಲಿಸಿದ ಕಾರಣ ಕೇತಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಮಾದನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಂಘದ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಕೋಮಲ ಘೋಷಣೆ ಮಾಡಿದರು.
ಅಧ್ಯಕ್ಷರ ಆಯ್ಕೆಯನ್ನು ನಿಕಟ ಪೂರ್ವ ಅಧ್ಯಕ್ಷ ನಿಂಗಶೆಟ್ಟಿ, ಉಪಾಧ್ಯಕ್ಷ ನಂಜಮ್ಮಣಮ್ಮ, ನಿರ್ದೇಶಕರುಗಳಾದ ಬಸವರಾಜು, ಮಲ್ಲಣ್ಣ, ಮಹದೇವಮ್ಮ, ಗೌರಮ್ಮ, ಚಿಕ್ಕಸ್ವಾಮಿ ನಾಯಕ, ಕುಮಾರ, ರವೀಂದ್ರ, ಜಗದೀಶ್, ಸಿದ್ದನಾಯಕ ಅಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಹಾಜರಿದ್ದು ಅನುಮೋದಿಸಿದರು.
ನೂತನ ಅಧ್ಯಕ್ಷ ಮಾದನಾಯಕ ಮಾತನಾಡಿ ನನ್ನನ್ನು ಅವಿರೋಧ ಆಯ್ಕೆ ಮಾಡಲು ಸಹಕರಿಸಿದ ನಿರ್ದೇಶಕರು ಸಂಘದ ಸದಸ್ಯರುಗಳು ಹಾಗೂ ಗ್ರಾಮದ ಗೌಡ್ರು ಯಜಮಾನರುಗಳು ಅಭಿನಂದಿಸಿದರು. ಮುಂದು ವರೆದು ಮಾತನಾಡಿದ ಅವರು ಸಂಘವು ಉತ್ತಮವಾಗಿ ನಡೆಯುತ್ತಿದ್ದು ಲಾಭದಲ್ಲಿದೇ ಸಂಘವು ಇನ್ನು ಉತ್ತಮವಾಗ ಬೆಳೆಯಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಗ್ರಾಮದ ನಾಡಗೌಡ ಕೆ.ಬಿ.ಶಾಂತಮೂರ್ತಿ, ಯಜಮಾನರುಗಳಾದ ನಿಂಗಪ್ಪ,ನAಜಪ್ಪ, ಮುಖಂಡರಾದ ಗುತ್ತಿಗೆದಾರ ರಾಜಣ್ಣ, ಎಂ. ನಂಜೇಗೌಡ, ದೀಪು ಕೇತಹಳ್ಳಿ ನೀರು ಬಳಕೆ ದಾರರ ಸಂಘದ ಅಧ್ಯಕ್ಷ ಕೆ. ಸಿದ್ಧ ಶೆಟ್ಟಿ,ಕೇತಹಳ್ಳಿ ಮಧು, ಮಾಜಿ ಗ್ರಾಂ. ಪಂ. ಸದಸ್ಯ ಪ್ರಶಾಂತ,ಮಹದೇವ, ಮಾದು, ಸಿದ್ದನಾಯಕ,ಮಹೇಶ್, ನಾಗು, ರಾಜು,ಸೇರಿದಂತೆ ಮತ್ತಿತರರು ಹಾಜರಿದ್ದರು.
“ಕೇತಹಳ್ಳಿ ಡೈರಿ ಅಧ್ಯಕ್ಷರಾಗಿ ಮಾದನಾಯಕ ಆಯ್ಕೆ”



