ಬೆಂಗಳೂರಿನ ನಾಟ್ಯ ತರಂಗದ ನಿರ್ದೇಶಕಿ ಹಾಗೂ ಹೆಸರಾಂತ ಭರತ ನಾಟ್ಯ ಗುರು ವಿದುಷಿ Samudhyata ಭಟ್ ಅವರ ಶಿಷ್ಯೆ ಕು. ಮಾಧವಿ ಶರ್ಮ ಅವರ ಯಶಸ್ವಿ ರಂಗಪ್ರವೇಶಕ್ಕೆ JSS AUDITORIUM ನಲ್ಲಿ 400 ಕ್ಕೂ ಮೀರಿ ಕಿಕ್ಕಿರಿದ ಪ್ರೇಕ್ಷಕರು, ಹಿರಿಯ ವಿದ್ವಾಂಸರು ಸಾಕ್ಷಿಯಾದರು.
ಮುಖ್ಯ ಅತಿಥಿಗಳಾಗಿ ಸಾಗರದ ನಾಟ್ಯ ತರಂಗದ ಸಂಸ್ಥೆ ಅಧ್ಯಕ್ಷರು ಹಾಗೂ ಭರತ ನಾಟ್ಯ ಗುರು ವಿದ್ವಾನ್ ಜನಾರ್ದನ ಭಟ್, ವಿಶೇಷ ಆಹ್ವಾನಿತರಾಗಿ ನಿವೃತ್ತ ನ್ಯಾಯಾಧೀಶ Justice N.. ಕುಮಾರ್ ಮತ್ತು ಗಾಯನ ಸಮಾಜದ ಅಧ್ಯಕ್ಷರು ಆಡಿ.ಒಖಗಿ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಧವಿ ಶರ್ಮ ಅವರ ಮೂರು ಗಂಟೆಗೂ ಮೀರಿದ ಮನೋಗ್ನಯ, ಸುಂದರ, ಭಾವಪೂರ್ಣ ಹಾಗೂ ವಿದ್ವತ್ ಪೂರ್ಣ ನೃತ್ಯ ಪ್ರದರ್ಶನದ ಸೊಬಗನ್ನು ಕಿಕ್ಕಿರಿದು ತುಂಬಿದ ಪ್ರೇಕ್ಷಕರು ನೋಡಿ ಆನಂದಿಸಿದರು.
ನಾಡಿನ ಹಿರಿಯ ಮೃದಂಗ ವಿದ್ವಾಂಸರಾದ ಏಗಿ ರವಿಶಂಕರ್ ಶರ್ಮ ಹಾಗೂ ಶ್ರೀದೇವಿ ಅವರ ಪುತ್ರಿ ಮಾಧವಿ ಅವರ ಅದ್ಭುತ ರಂಗ ಪ್ರವೇಶಕ್ಕೆ ಅಷ್ಟೇ ಮಹತ್ವದ ಸಂಗೀತ ಹಿಮ್ಮೇಳ ಮನೋಹರವಾದ ಒತ್ತಾಸೆ ನೀಡಿತು.ನಟುವಾಂಗದಲ್ಲಿ ಗುರು ಸಮುದ್ಯತ ಅವರ ಖಚಿತ ಲಯದಲ್ಲಿ ಮೂಡಿ ಬಂದ ವಿಶೇಷ ಜತಿಗಳು/ ವಿದ್ವತ್ ಪೂರ್ಣನೃತ್ಯ ಸಂಯೋಜನೆ, ಗಾಯನದಲ್ಲಿ ಖ ರಘುರಾಮ, ಮೃದಂಗದಲ್ಲಿ ನಾಡಿನ ಯುವ ಪ್ರತಿಭೆ ಹಾಗೂ ಮಾಧವಿ ಅವರ ಅಣ್ಣ ವಿ. ರಕ್ಷಿತ ಶರ್ಮ ಏಖ (ಇತ್ತೀಚೆಗೆ “A” GRADE ಪಡೆದ ಕೀರ್ತಿ ಇವರದು) ವೀಣೆಯಲ್ಲಿ .
ಗೋಪಾಲ ವೆಂಕಟರಮಣ, ಪಿಟೀಲಿನಲ್ಲಿ ವಿ . ಕೇಶವ ಮೋಹನ್ ಮತ್ತು ವಿದ್ವಾನ್ ಆಗಿ ಪ್ರಸನ್ನ ಕುಮಾರ್ RYTHM PADS ನಲ್ಲಿ ಕಾರ್ಯಕ್ರಮದ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದರು. ಮಾಧವಿ ತನ್ನ ರಂಗ ಪ್ರವೇಶದ ಪ್ರಸ್ತುತಿಯಲ್ಲಿ ಶ್ರೋತಸ್ವಿನಿ ರಾಗದ ಪುಷ್ಪಾಂಜಲಿ, ತ್ರಿಶ್ರ ಮುಖಿ ತಾಳದ ಅಲರಿಪು, ಗಂಭೀರ ನಾಟದಲ್ಲಿ ಜತಿಸ್ವರ, ಭರತನಾಟ್ಯದಲ್ಲಿ ಅಷ್ಟು ಸಾಮಾನ್ಯವಾಗಿ ಪ್ರಯೋಗ ಮಾಡದ ಶ್ರೀ ಪಟ್ಟಣ ಸುಬ್ರಹ್ಮಣ್ಯ ಅಯ್ಯರ್ ಅವರ ರಘುವಂಶ ಸುಧಾಬುಧಿ, ತೋಡಿ ರಾಗದ ದಂಡಾಯುಧಪಾಣಿ ಪಿಳ್ಳೈ ಅವರ ತೋಡಿ ವರ್ಣ, ಸ್ವಾತಿ ತಿರುನಾಳ್ ಮಹಾರಾಜರ ಅಷ್ಟ ರಾಗ ಮಾಲಿಕಾ ಪದಂ, ವೃಂದವನ ನಿಲಯೆ ಹಾಗೂ ಮಾಧವಿಯ ಪರಮಗುರು ಡಾ. ಪದ್ಮಾ ಸುಬ್ರಹ್ಮಣ್ಯಂ ಅವರೇ ರಚನೆ/ ನೃತ್ಯ ಸಂಯೋಜನೆ ಮಾಡಿರುವ ಕನ್ನಡ ರಾಗದ ತಿಲ್ಲಾನ ಮತ್ತು ಮಂಗಳ.
ಗುರುಗಳ ಅದ್ಭುತ ಹಾಗೂ ಶಿಸ್ತಿನ ಪಾಠ ಕ್ರಮ, ನವರಸಗಳನ್ನು ಭಾವ ಪೂರ್ಣವಾಗಿ ನಿರಾಯಾಸವಾಗಿ ಮೂಡಿಸುವ ಕ್ಷಮತೆ, ಹಸನ್ಮುಖದ ಪ್ರಸ್ತುತಿ, ಲಯದಲ್ಲಿ ಬಿಕ್ಕಟ್ಟು ಇವೆಲ್ಲವೂ ಒಟ್ಟಿನಲ್ಲಿ ಮಾಧವಿ ಶರ್ಮ ಅವರ 15 ವರ್ಷದ ಸತತ ಸಾಧನೆಯಲ್ಲಿ ಪರಿಪೂರ್ಣತೆ ಕಡೆಗೆ ಮುನ್ನೆಡೆಯುತ್ತಿದೆ ಎನ್ನುವ ಅನುಭವ ನೀಡಿತು. ಇಂತಹ ಭರವಸೆಯ ಕುಮಾರಿ ಮಾಧವಿ ಶರ್ಮ ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶಗಳು ಸಿಕ್ಕಿ ಅವರು ನಾಡಿನ ಹೆಮ್ಮೆಯ ಕಲಾವಿದರಾಗಿ ಹೊರ ಹೊಮ್ಮುವಂತೆ ಆಗಲಿ.