ಬೆಂಗಳೂರು: ತುಮಕೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಲು ಮತ್ತೋರ್ವ ಮಾಜಿ ಸಚಿವ ತುಮಕೂರು ಜಿಲ್ಲೆಯ ಹಿರಿಯ ರಾಜಕಾರಣಿ ಜೆ.ಸಿ. ಮಾಧುಸ್ವಾಮಿ ನಿರಾಕರಿಸಿದ್ದಾರೆ.
ಈ ವಿಷಯವನ್ನು ಸ್ವತಃ ಸೋಮಣ್ಣ ಅವರೇ ಸ್ಪಷ್ಟಪಡಿಸಿದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಸೋಮಣ್ಣ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನಿನ್ನೆ ಮಾಧುಸ್ವಾಮಿ ಅವರಿಗೆ ದೂರವಾಣಿ ಮಾಡಿ ನಿಮ್ಮ ಮನೆಗೆ ಭೇಟಿಯಾಗಲು ಬರುತ್ತೇನೆ ಎಂದೆ ಬೇಡವೆಂದರು.
ತಂಗಿಯನ್ನು ಮಾತನಾಡಿಸಲು ಬರುತ್ತೇನೆ ಎಂದೆ ಆದರೂ ಬೇಡವೆಂದರು ನಾಲ್ಕು ದಿನಗಳು ಕಳೆಯಲಿ. ವಿಧಿಲಿಖಿತ ನನಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ ಎಂದಷ್ಟೇ ಸೋಮಣ್ಣ ಪ್ರತಿಕ್ರಿಯಿಸಿದರು.