ದೇವನಹಳ್ಳಿ: ಸಮಾಜದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು -ಕೀಳು ತಾರತಮ್ಯ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು.
ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡ ಹರಿಕಾರರು ಎಂದು ದೇವನಹಳ್ಳಿ ತಾಲೂಕಿನ ತಹಸೀಲ್ದಾರ್ ಶಿವರಾಜ್ ಹೇಳಿದರು.ದೇವನಹಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿದಂತಹ ಅನಿಷ್ಟಗಳನ್ನು ಹೋಗಲಾಡಿಸಿದ ಸರ್ವಶ್ರೇಷ್ಠ ಶರಣ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳವಾಗಿ ಆಚರಿಸಿದರು.
ಸಮಾಜದ ಮುಖಂಡರಾದ ಕಾಮೇನಹಳ್ಳಿ ರಮೇಶ್ ಮಾತನಾಡಿ ಶರಣರ ಅಗ್ರ ಗಣ್ಯ ಬಳಗದಲ್ಲಿ ‘ಮಡಿವಾಳ ಮಾಚಿದೇವ’ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವರು.ಸಾಹಿತ್ಯ ರಕ್ಷಣೆಯ ಮಹಾ ದಂಡನಾಯಕ ಸರ್ವಶ್ರೇಷ್ಠ ಶರಣರಲ್ಲಿ ಒಬ್ಬರಾಗಿದ್ದ ಅಚಲ ಕಾಯಕ ನಿಷ್ಟರಾಗಿದ್ದರು,ಇಂದಿನ ಸಮಾಜದ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ತಮ್ಮ ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಇಓ ಶ್ರೀನಾಥ್ ಗೌಡ, ಮಡಿವಾಳ ಮಾಚಿದೇವರ ಸಮಾಜದ ಟೌನ್ ಅಧ್ಯಕ್ಷ ನಾಗೇಶ್(ಗಂಗೂಲಿ) ಪಧಾದಿಕಾರಿಗಳಾದ ಮೂರ್ತಿ, ನಂದಕುಮಾರು, ಮುನಿರಾಜು, ದರ್ಶನ್, ಯಲಿಯೂರು ಚಿಕ್ಕಣ್ಣ, ಬೈಚಾಪುರ ರಮೇಶ್, ವೆಂಕಟೇಶ್, ಬಿಜ್ವವಾರ ಮಧು ಸೇರಿದಂತೆ ಕುಲಬಾಂಧವರು ಭಾಗವಹಿಸಿದ್ದರು.