ತಮಿಳುನಾಡಿನ ಮಧುರೈ ನಗರದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ವೇಲಮ್ಮಾಳ್ ಕ್ರಿಕೆಟ್ ಸ್ಟೇಡಿಯಂ ಅನ್ನು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಉದ್ಘಾಟಿಸಿದರು. ಈ ವೇಳೆ ಬಾಲಕನೊಬ್ಬ ಕಾಲು ಮುಟ್ಟಿ ನಮಸ್ಕರಿಸಿದಾಗ ಅವರು ನಡೆದುಕೊಂಡ ರೀತಿ ಎಲ್ಲರ ಮನ ಗೆದ್ದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಐಪಿಎಲ್ ನಲ್ಲಿ ಚೆನ್ನೆöÊ ತಂಡದ ಜೀವನಾಡಿ ಯಾಗಿರುವ ಎಂಎಸ್ ಧೋನಿಯ ಬಗ್ಗೆ ತಮಿಳು ನಾಡಿನ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ಒಲವು. ಗುರುವಾರ ಅವರು ಮಧುರೈನ ನೂತನ ಕ್ರೀಡಾಂಗಣ ಉದ್ಘಾಟನೆ ಮಾಡುವುದನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ನೆರೆದಿದ್ದರು.
ವೆಲಮಲ್ ಎಜುಕೇಷನಲ್ ಟ್ರಸ್ಟ್ ಮತ್ತು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಖಿಓಅಂ) ಸಹಯೋಗದಲ್ಲಿ ನಿರ್ಮಿಸಲಾದ ಹೊಸ ವೆಲಮಲ್ ಕ್ರಿಕೆಟ್
ಸ್ಟೇಡಿಯಂ ಅನ್ನು ಅವರು ಉದ್ಘಾಟಿಸಲು ಆಗಮಿಸಿದ್ದರು. ಚೆನ್ನೆöÊ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಧೋನಿ ಅವರು ಈ ಬಾರಿ ನಿವೃತ್ತಿ ಸಾರಬಹುದು ಎಂದು ಹೇಳಲಾಗುತ್ತಿದೆ. ಅವರ ಅಭಿಮಾನಿಗಳು ಮಧುರೈನ ವಿಮಾನ ನಿಲ್ದಾಣ ಮತ್ತು ಬಳಿಕ ಕ್ರೀಡಾಂಗಣದಲ್ಲಿಘೋಷಣೆಗಳನ್ನು ಕೂಗುತ್ತಾ ಅವರನ್ನು ಸ್ವಾಗತಿಸಿದರು. ಅವರು ತಮ್ಮ ಎಂದಿನ ಸ್ಟೆöÊಲಿಶ್ ಲುಕ್ನಲ್ಲಿ, ಸನ್ ಗ್ಲಾಸ್ ಧರಿಸಿ, ಕ್ಯಾಶುವಲ್ ಉಡುಪಿನಲ್ಲಿ ಕಾಣಿಸಿಕೊಂಡ ೪೪ ವರ್ಷದ ಟೀಂ ಇAಡಿಯಾ ಮಾಜಿ ನಾಯಕ ಅಭಿಮಾನಿಗಳಿಗೆಕೈಬೀಸಿ, ಜನಸಮೂಹಕ್ಕೆ ಶುಭ ಹಾರೈಸಿದರು.
ಈ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಈ ಸಂದರ್ಭದಲ್ಲಿ ಧೋನಿ ಅವರು ಬ್ಯಾಟ್ ಹಿಡಿದು ಮೈದಾನದತ್ತ ತೆರಳಿದರು. ಈ ವೇಳೆ ಒಂದು ಹೃದಯಸ್ಪರ್ಶಿ ಘಟನೆ ನಡೆಯಿತು. ಕ್ರೀಸಿನ ಬಳಿ ನಿಂತಿದ್ದ ಬಾಲಕನೊಬ್ಬ ಧೋನಿ ಬಳಿ ಬಂದು ಪಾದ ಮುಟ್ಟಿ ನಮಸ್ಕರಿಸಿದ. ಈ ವೇಳೆ ತಾಳ್ಮೆಯಿಂದ ನಿಂತ ಅವರು ಹುಡುಗನತ್ತ ಕೈಚಾಚಿ ಹಸ್ತಲಾಘವ ಮಾಡಿದರು. ಬಳಿಕ ಆತನ ಹೆಲ್ಮೆಟ್ ಅನ್ನು ಕೈಯಿಂದ ಮೆಲ್ಲನೆ ತಟ್ಟಿದರು. ಬಾಲಕ ಖುಷಿಪಟ್ಟ. ಪುಟಾಣಿ ಕ್ರಿಕೆಟಿಗನ ಜೊತೆ ಅವರು ನಡೆದುಕೊಂಡ ರೀತಿ ನೆರೆದಿದ್ದ ಅಭಿಮಾನಿಗಳ ಮನಗೆದ್ದಿತು. ಬಳಿಕ ಅವರು ಕ್ರಿಸ್ಗೆ ಬಂದು ಕೆಲವು ಹೊಡೆತಗಳನ್ನು ಬಾರಿಸಿದ್ದು. ಇದನ್ನು ನೋಡಿದ ಅಭಿಮಾನಿಗಳು ತಕ್ಷಣವೇ ಸಂಭ್ರಮಿಸಿದರು. ಅವರ ಪ್ರಖ್ಯಾತ ಹೊಡೆತಗಳನ್ನು ನೋಡಲು ಸಾವಿರಾರು ಜನ ನೆರೆದಿದ್ದರು. ಇತ್ತೀಚೆಗಷ್ಟೇ ಧೋನಿ ಅವರು ತನ್ನ ಬದುಕಿನಲ್ಲಿ ಹೇಗೆ ಧೈರ್ಯ ತುಂಬಿದ್ದರು ಎAಬುದನ್ನು ಸಿರಾಜ್ ಅವರು ತಿಳಿಸಿದ್ದರು.
ಮತ್ತೊಬ್ಬ ವೇಗಿ ಆಕಾಶ್ ದೀಪ್ ಸಹ ಇದೇ ಮಾತನ್ನು ಹೇಳಿದ್ದರು. ಸದ್ಯಕ್ಕೆ ತಮಿಳುನಾಡಿನಲ್ಲಿ ಚೆನ್ನೆöÊ ಚೆಪಾಕ್ ಕ್ರೀಡಾಂಗಣ ಮಾತ್ರ ಅಂತಾರಾಷ್ಟಿ÷್ಕÃಯ
ಕ್ರೀಡಾAಗಣವಾಗಿದೆ. ಈ ಹೊಸ ಸ್ಟೇಡಿಯಂ ೧೧.೫ ಎಕರೆ ಪ್ರದೇಶದಲ್ಲಿ ಸುಮಾರು ೩೨೫ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ಖಿಓPಐ, ರಣಜಿ ಟ್ರೋಫಿ ಮತ್ತು IPಐ ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಿದ್ದು ಅಂತಾರಾಷ್ಟಿçÃಯ ಪAದ್ಯವನ್ನೂ ಇಲ್ಲಿ ಆಯೋಜಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಉತ್ಸುಕಾಗಿದ್ದಾರೆ. ಪ್ರಸ್ತುತ ೭,೩೦೦ ಪ್ರೇಕ್ಷಕರ ಸಾಮಾರ್ಥ್ಯ ಹೊಂದಿದ್ದು, ಭವಿಷ್ಯದಲ್ಲಿ ೨೦,೦೦೦ ಪ್ರೇಕ್ಷಕರ ಸಾಮರ್ಥ್ಯಕ್ಕೆ ವಿಸ್ತರಿಸುವ ಯೋಜನೆ ಇದೆ.