ದೊಡ್ಡಬಳ್ಳಾಪುರ: ತಾಲ್ಲೂಕಿನ ಸುಪ್ರಸಿದ್ಧ ಕ್ಷೇತ್ರ ಶ್ರೀ ಘಾಟಿ ಸುಬ್ರಹ್ಮಣ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಎರಡು ವರ್ಷ ಕೊರೋನಾ ಹಾಗೂ ಕಳೆದ ವರ್ಷ ಕಾಲು ಬಾಯಿ ರೋಗ ಹಾಗೂ ಗಂಟುರೋಗದ ಕಾರಣ ದನಗಳ ಜಾತ್ರೆಯನ್ನು ನಿಷೇಧಿಸಲಾಗಿತ್ತು ಈ ಕಾರಣದಿಂದಾಗಿ ರೈತರ ತಾವು ಸಾಕಿದ ವಿಶೇಷ ತಳಿಗಳನ್ನು ಪ್ರದರ್ಶನ ಹಾಗೂ ಮಾರಾಟ ಸಾಧ್ಯವಾಗಿರಲಿಲ್ಲಿ.
ಈ ಬಾರಿ ಯಾವುದೇ ರೀತಿಯ ತೊಂದರೆ ಇಲ್ಲ ಇದೇ ಕಾರಣದಿಂದಾಗಿ ಅದ್ದೂರಿ ದನಗಳ ಜಾತ್ರೆ ನಡೆಯುತ್ತಿದೆ ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಹಾಗೂ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಯ ಒಂದಷ್ಟು ವ್ಯವಸ್ಥೆ ಮಾಡಿಕೊಂಡಿದೆ.
ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಜನಜಾನುವಾರುಗಳಿಗೆ ನೀರುಮತ್ತು ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜುವರು ತಿಳಿಸಿದರು.
ಈ ಸಮಯದಲ್ಲಿ ಮಾತನಾಡಿದ ರೈತ ಪಾಪಣ್ಣ ಮೊದಲಿನಂತೆ ಜಾಗದ ವ್ಯವಸ್ಥೆ ಇಲ್ಲ ರಸ್ತೆಯ ಎರಡೂ ಬದಿಗಳಲ್ಲಿ ಜಮೀನುಗಳ ಮಾಲಿಕರು ತಂತಿ ಬೆಲಿಹಾಕಿಕೊಂಡಿರುವ ಕಾರಣ ಸ್ವಲ್ಪ ಮಟ್ಟಿಗೆ ತೊಂದರೆ ಆಗಿದೆ ಈ ಬಾರಿ ಮಳೆಯ ಕೊರತೆ ಕಾರಣ ನೀರು ಮತ್ತು ಮೇವಿನ ಕೊರತೆ ಇದೆ ಎಂದರು.ಈ ಜಾತ್ರೆಯಲ್ಲಿ ಸಾಂಪ್ರದಾಯಿಕ ತಳಿಗಳಾದ ಹಳ್ಳಿ ಕಾರ್, ನಾಟಿ ಹಾಗೂ ವಿವಿಧ ಬಗೆಯ ದನಗಳ ಕಾಣಬಹುದು.