ಕನಕಪುರ: ಮಹಾಶಿವರಾತ್ರಿ ಅಂಗವಾಗಿ ಸಾವಿರಾರು ಭಕ್ತರು ಮಲೆ ಮಾದಪ್ಪನ ಬೆಟ್ಟಕ್ಕೆ ತೆರಳಲು ಭಾನುವಾರದಿಂದಲೇ ಪಾದಯಾತ್ರೆ ಮೂಲಕ ತೆರಳಲು ಕಾಲ್ನಡಿಗೆ ಪ್ರಾರಂಭ ಮಾಡಿದ್ದಾರೆ.
ಮಹಾಶಿವರಾತ್ರಿ ಅಂಗವಾಗಿ ಪ್ರತಿ ವರ್ಷ ತಾಲೂಕು ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನ ಭಕ್ತರು ಕಾಲ್ನಡಿಗೆಯಲ್ಲಿ ಬೆಟ್ಟ ತಲುಪಿ ಮಲೆ ಮಹಾದೇಶ್ವರನ ದರ್ಶನ ಪಡೆಯುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿ ಮಹಾಶಿವರಾತ್ರಿಗೂ ಒಂದು ವಾರಗಳ ಮುನ್ನವೇ ಮಹದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆ ಆರಂಭ ಮಾಡುವ ಭಕ್ತರು ಮಹಾಶಿವರಾತ್ರಿಯಂದು ಬೆಟ್ಟದಲ್ಲಿ ಜಾಗರಣೆ ಮಾಡಿ ದೇವರ ದರ್ಶನ ಪಡೆದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ ಹಾಗಾಗಿ ಪ್ರತಿ ವರ್ಷ ಹರಕೆ ಹೊರುವ ಲಕ್ಷಾಂತರ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರತಿ ವರ್ಷ ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಹಾಶಿವರಾತ್ರಿ ಅಂಗವಾಗಿ ಇಷ್ಟಾರ್ಥಗಳ ಸಿದ್ದಿಗೆ ಹರಕೆಗಳನ್ನು ಹೊತ್ತು ಲಕ್ಷಾಂತರ ಭಕ್ತರು ಮಲೆ ಮಾದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಭಾನುವಾರ ತಾಲೂಕಿನಿಮದ ಪಾದಯಾತ್ರೆ ಪ್ರಾರಂಭ ಮಾಡಿದ್ದಾರೆ.
ಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವಪ್ರತಿಯೊಬ್ಬ ಭಕ್ತರು ಏಳಗಳ್ಳಿ ಗ್ರಾಮದ ತಾಯಿ ಮುದ್ದಮ್ಮನ ದರ್ಶನ ಪಡೆದು ಆನಂತರ ಬೆಟ್ಟಕ್ಕೆಕಾಲ್ನಡಿಗೆಯಲ್ಲಿ ತೆರಳುವುದು ನೂರಾರು ವರ್ಷಗಳಿಂದ ನಡೆದಿಕೊಂಡು ಬಂದಿರುವ.
ಪದ್ಧತಿಹಾಗಾಗಿ ಭಾನುವಾರ ಮಾದಪ್ಪನ ಬೆಟ್ಟಕ್ಕೆ ತೆರಳಲು ಪಾದಯಾತ್ರೆ ಪ್ರಾರಂಭ ಮಾಡಿರುವ ಸಾವಿರಾರು ಜನ ಭಕ್ತರು ತಾಯಿ ಮುದ್ದಮ್ಮನ ದರ್ಶನ ಪಡೆಯಲು ಉಯ್ಯಂಬಳ್ಳಿ ಹೋಬಳಿಯ ಏಳಗಳ್ಳಿ ಗ್ರಾಮದಲ್ಲಿ ಜಮಾಯಿಸಿದ್ದರು ತಾಯಿ ಮುದ್ದಮ್ಮನ ದರ್ಶನ ಪಡೆದು ಕೆಲವು ಭಕ್ತರು ರಾತ್ರಿ ಸಂಗಮದ ಕೊಗ್ಗೆದೊಡ್ಡಿ ಮಾರ್ಗವಾಗಿ ಕಾಲ್ನಡಿಗೆ ಪ್ರಾರಂಭ ಮಾಡುತ್ತಾರೆ ಇನ್ನು ಕೆಲವರು ಭಕ್ತರು ಭಾನುವಾರ ಏಳಗಳ್ಳಿ ಗ್ರಾಮದಲ್ಲಿ ಆಶ್ರಯ ಪಡೆದು ಸೋಮವಾರ ಪಾದಯಾತ್ರೆ ಪಾರಂಭ ಮಾಡಿ ಮಾದಪ್ಪನ ಬೆಟ್ಟದ ಕಡೆಗೆ ಹೊರಡುತ್ತಾರೆ.
ಪಾದಯಾತ್ರೆ ಹಮ್ಮಿಕೊಂಡಿರುವ ಭಕ್ತರಿಗೆ ದಾರಿಯುವುದಕ್ಕೂ ಗ್ರಾಮಸ್ಥರು ಮಜ್ಜಿಗೆ ಪಾನಕ ಅನ್ನದಾನ ಸಾಗರೋಪಾದಿಯಲ್ಲಿ ಹಮ್ಮಿಕೊಂಡಿದ್ದರು ಏಳಗಳ್ಳಿ ಗ್ರಾಮದಲ್ಲಿ ಸ್ಥಳೀಯ ಗ್ರಾಮಸ್ಥರು ಮುಖಂಡರು ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಕಲ್ಪಿಸಿದರು ಅವರೆಕಾಳು ಗೊಜ್ಜು ಮುದ್ದೆ ಅನ್ನ ಸಾಂಬಾರ್ ಊಟದ ವ್ಯವಸ್ಥೆ ಕಲ್ಪಿಸಿದರು ಲಕ್ಷಾಂತರ ಭಕ್ತರು ರಾತ್ರಿ ಊಟ ಮುಗಿಸಿ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಮಂಗಳವಾರ ಬೆಳಿಗ್ಗೆ ಸಂಗಮದ ಕಾವೇರಿ ನದಿ ದಾಟಿ ಬೆಟ್ಟದ ಕಡೆಗೆ ಪಾದಯಾತ್ರೆ ಮುಂದುವರಿಸಲಿದ್ದಾರೆ.