ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಭರದ ತಯಾರಿ ನಡೆಯುತ್ತಿದೆ. ಈ ಟೆಸ್ಟ್ ಸರಣಿಯು ಗಾಂಧಿ ಮತ್ತು ಮಂಡೇಲಾ ಅವರ ಸ್ಮರಣಾರ್ಥ’ ಫ್ರೀಡಂ ಟ್ರೋಫಿ ‘ಗಾಗಿ ನಡೆಯುತ್ತಿದ್ದು, ಅವರ ಅಹಿಂಸೆಯ ಸಂದೇಶವನ್ನು ಸಾರಲಿದೆ. ಹೀಗಾಗಿ ವಿಶೇಷ ಗೌರವ ಸಲ್ಲಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ ( CAB ) ಒಂದು ವಿಶೇಷ ಚಿನ್ನದ ನಾಣ್ಯವನ್ನು ಪರಿಚಯಿಸಿದೆ.
ನವೆಂಬರ್ ೧೪ ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಚಿತ್ರಗಳಿರುವ ಈ ನಾಣ್ಯವನ್ನು ಟಾಸ್ ಗಾಗಿ ಬಳಸಲಾಗುತ್ತದೆ. ಶಾಂತಿ, ಸ್ವಾತಂತ್ರ್ಯ ಮತ್ತು ಅಹಿಂಸೆಯ ಮೌಲ್ಯಗಳನ್ನು ಪ್ರತಿನಿಧಿಸುವ ಈ ನಾಣ್ಯವನ್ನು ಸರಣಿಗಾಗಿಯೇ ವಿಶೇಷವಾಗಿ ತಯಾರಿಸಲಾಗಿದೆ ಎಂದು CAB ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ ಆರು ವರ್ಷಗಳ ಬಳಿಕ ಈಡನ್ ಗಾರ್ಡನ್ಸ್ ನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಪಂದ್ಯದ ಮೊದಲ ಮೂರು ದಿನಗಳ ಟಿಕೆಟ್ಗಳು ಬಹುತೇಕ ಮಾರಾಟವಾಗಿವೆ. ಸಿಎಬಿ ಖಜಾಂಚಿ ಸಂಜಯ್ ದಾಸ್ ಅವರ ಪ್ರಕಾರ ೧.೪ ಕೋಟಿ ಟಿಕೆಟ್ ಗಳಲ್ಲಿ ೯೬,೦೦೦ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ. ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ, ಪಂದ್ಯದ ವೇಳೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಆಟಗಾರರು ಮತ್ತು ಪ್ರೇಕ್ಷಕರ ಸುರಕ್ಷತೆಗಾಗಿ ಅಂಃ ಮತ್ತು ಕೋಲ್ಕತ್ತಾ ಪೊಲೀಸರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ. ಪಂದ್ಯದ ಮುನ್ನಾ ದಿನವಾದ ನವೆಂಬರ್
೧೩ ರಂದು, ಅಂಃ ಜಗಮೋಹನ್ ದಾಲ್ಮಿಯಾ ಸ್ಮರಣಾರ್ಥ ಉಪನ್ಯಾಸವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ನ ದಂತಕತೆ ಸುನೀಲ್ ಗವಾಸ್ಕರ್ ಅವರು ಮುಖ್ಯ
ಭಾಷಣ ಮಾಡಲಿದ್ದು, ಉಭಯ ತಂಡಗಳ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. BCCI ಮತ್ತು ICCಎರಡನ್ನೂ ಮುನ್ನಡೆಸಿದ್ದ ದಾಲ್ಮಿಯಾ, ಭಾರತವನ್ನು ವಿಶ್ವ ಕ್ರಿಕೆಟ್ನಲ್ಲಿ ಪ್ರಬಲ ರಾಷ್ಟ್ರವನ್ನಾಗಿನರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದು ಉತ್ತಮ ಪಿಚ್: ಗಂಗೂಲಿ ಭಾನುವಾರ ಸಂಜೆ ಶುಭಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಕೋಲ್ಕತಾ ತಲುಪಿದ್ದು ಜಸ್ಮಿತ್ ಬುಮ್ರಾ ಮತ್ತು ಮುಖ್ಯ ಕೋಚ್ ಗೌತಮ್
ಗಂಭೀರ್ ತಂಡದೊಂದಿಗೆ ಇದ್ದರು.



