ಕುಣಿಗಲ್: ಪಟ್ಟಣದ ಬೆಸ್ಕಾಂ ಕಚೇರಿಯ ಮುಖ್ಯ ಗುಮಾಸ್ತ ವಿ.ಮಹೇಶ್ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ 22ನೇ ತ್ರೈಮಾಸಿಕ ಅಧಿವೇಶನದ ಚುನಾವಣೆಯಲ್ಲಿ ಕೇಂದ್ರ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಎರಡನೇ ಭಾರಿಗೆ ಅವಿರೋಧ ಅಯ್ಕೆಯಾಗಿದ್ದಾರೆ.
ತಾಲೂಕು ಬೆಸ್ಕಾಂ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ವಿ.ಮಹೇಶ್ ಅವರೊಬ್ಬರೇ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರೂ ಬೇರೆಯಾರು ಕೂಡ ಚುನಾವಣೆಗೆ ಸ್ಪರ್ದೆ ಮಾಡದ ಕಾರಣ ವಿ.ಮಹೇಶ್ ಅವಿರೋಧವಾಗಿ ಎರಡನೇ ಬಾರಿಗೂ ಆಯ್ಕೆಯಾಗಿದ್ದಾರೆ.ಕೇಂದ್ರ ಕಾರ್ಯಕಾರಣಿ ಸಮಿತಿ ನೂತನ ಸದಸ್ಯರಾಗಿ ಆಯ್ಕೆಯಾದ ವಿ.ಮಹೇಶ್ ಮಾತನಾಡಿ ಹಿರಿಯ ಕಿರಿಯ ಸಹಕಾರದಿಂದ ಹಾಗೂ ಕೇಂದ್ರ ಸಮಿತಿಯ ಅಧಿಕ ಕಾರ್ಯದರ್ಶಿಗಳಾಗಿ ನಿವೃತ್ತರಾದ ಎಚ್.ಎನ್.ಶ್ರೀನಿವಾಸ್ಗೌಡ ಅವರ ಅರ್ಶಿವಾದದಿಂದ ನೌಕರರ ಪ್ರತಿನಿಧಿಯಾಗಿ ಆಯ್ಕೆಯಾಗಿ ನೌಕರರ ಸಮಸ್ಯೆಗಳ ಹಾಗೂ ಕಷ್ಟಸುಖಗಳಿಗೆ ಸ್ಪಂದಿಸಿ ಸೇವೆ ಮಾಡುವ ಭಾಗ್ಯ ದೊರಕಿದೆ.
ನೌಕರರ ಹಿತ ಕಾಪಾಡುವ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಮಹೇಶ್ ಅವರು ನೂತವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನೌಕರರು ಬೆಸ್ಕಾಂ ಅವರಣದಲ್ಲಿ ಸಹಿ ಹಂಚಿ ಸಂಭ್ರಮಿಸಿ ಅಭಿನಂದಿಸಿದರು. ಬೆಸ್ಕಾಂ ನೌಕರರ ಸಂಘದ ಸ್ಥಳೀಯ ಸಮಿತಿ ಅಧ್ಯಕ್ಷ ಶೇಖರ್, ಕಾರ್ಯದರ್ಶಿ ಎ.ಜಿ.ಸುರೇಶ್. ಖಜಾಂಚಿ ಸರ್ದಾರ್ಪಾಷಾ, ಸಹ ಕಾರ್ಯದರ್ಶಿ ರಾಜು, ಸದಸ್ಯರಾದ ರವಿ, ಚನ್ನಕೃಷ್ಣಯ್ಯ, ರಾಮಚಂದ್ರ ಮುಂತಾದವರು ಹಾಜರಿದ್ದರು.