ಬೆಂಗಳೂರು: ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟಣೆ ಬಳಿಕ ನಿನ್ನೆ ಪಾಕಿಸ್ತಾನ ಪರ ಘೋಷಣೆ ವಿಧಾನಸೌಧದಲ್ಲಿ ಕೇಳಿ ಬಂದದ್ದು ಮತ್ತು ರಾಜ್ಯಸಭೆಗೆ ಆಯ್ಕೆಯಾದ ನಾಸಿರ್ ಅದನ್ನು ಗಂಭೀರವಾಗಿ ಪರಿಗಣಿಸದೇ, ಪತ್ರಕರ್ತರ ಮೇಲೆ ಹರಿಹಾಯ್ದದ್ದು ಖಂಡನೀಯ.
ಈ ನಿಲುವಿನ ಹಿಂದೆ ಜಿಹಾದಿ ಶಕ್ತಿಗಳ ಮನಸ್ಥಿತಿ ಇದ್ದು, ದೇಶದ್ರೋಹದ ಹಿನ್ನಲೆ ಎದ್ದು ಕಾಣುತ್ತಿದೆ ಇಂತಹ ದೇಶದ್ರೋಹಿಗಳನ್ನು ಚುನಾಯಿತ ಪ್ರತಿನಿಧಿಗಳನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನಮ್ಮ ಭಾರತಕ್ಕೆ ಕೊಡುಗೆಯಾಗಿ ನೀಡಿದೆ. ಇದು ಅತ್ಯಂತ ಖಂಡನೀಯ ಎಂದು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಸಿ.ಮಂಜುಳಾ ತಿಳಿಸಿದ್ದಾರೆ.