ಹೊಸದಿಲ್ಲಿ: ಐಪಿಎಲ್ 2026ರ ಆರಂಭಕ್ಕೆ ಕೇವಲ ಇನ್ನೆರಡು ದಿನಗಳು ಬಾಕಿ ಇದೆ. ಈ ಮಧ್ಯೆ, 2023ರಲ್ಲಿ ಪರಿಚಯಿಸಿದಾಗಿನಿಂದ ಭಿನ್ನಾಭಿಪ್ರಾಯಗಳನ್ನು ಮೂಡಿಸಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಐಪಿಎಲ್ನ ಬಹುಪಾಲು ನಾಯಕರು ಬುಧವಾರ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. 2024ರಲ್ಲಿ ಬಿಸಿಸಿಐ, ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಕನಿಷ್ಠ 2027 ರವರೆಗೆ ವಿಸ್ತರಿಸಿದೆ. ಆದರೂ, ಕಾರ್ಯತಂತ್ರದ ನಿಯಮವನ್ನು ಅಭಿಮಾನಿಗಳು ಮತ್ತು ಆಟಗಾರರು ಸಮಾನವಾಗಿ ಚರ್ಚಿಸುತ್ತಿದ್ದಾರೆ.ಮುಂಬಯಿನಲ್ಲಿ ಬುಧವಾರ ನಡೆದ ಐಪಿಎಲ್ ನಾಯಕರ ಸಭೆಯಲ್ಲಿ, ಎಲ್ಲಾ 10 ಫ್ರಾಂಚೈಸಿಗಳ ನಾಯಕರು ಈ ವಿಷಯವನ್ನು ಸುದೀರ್ಘವಾಗಿ ಚರ್ಚಿಸಿದ್ದಾರೆನ್ನಲಾಗಿದೆ. ” ಬಿಸಿಸಿಐ ಈ ನಿಯಮವನ್ನು 2027 ರವರೆಗೆ ವಿಸ್ತರಿಸಿದ್ದರೂ ಸಹ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡಿದರು. ಹಾಗೆಯೇ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದರು. 2027ರ ಆವೃತ್ತಿಯ ನಂತರ ಮಾತ್ರ ಅದನ್ನು ಪರಿಶೀಲಿಸಬಹುದು. ಅದಕ್ಕೂ ಮೊದಲು ಏನೂ ಮಾಡಲಾಗದು,” ಎಂದು ಅವರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿದೆ. ಆದರೆ ನಿರ್ದಿಷ್ಟವಾಗಿ ಯಾರೆಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಮಾತ್ರ ತಿಳಿದು ಬಂದಿಲ್ಲ.ಇತ್ತೀಚೆಗೆ ಟೀಕಿಸಿದ್ದ ಅಕ್ಷರ್ ಪಟೇಲ್ ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಟೀಕಿಸಿದರು. ”ನಾನು ಸ್ವತಃ ಆಲ್ ರೌಂಡರ್ ಆಗಿರುವುದರಿಂದ ಈ ನಿಯಮವನ್ನು ನಾನು ಇಷ್ಟಪಡುವುದಿಲ್ಲ. ಈ ಹಿಂದೆ ನಾವು ಈ ಪಾತ್ರಕ್ಕೆ (ಬ್ಯಾಟಿಂಗ್ ಮತ್ತು ಬೌಲಿಂಗ್) ಆಲ್ರೌಂಡರ್ಗಳನ್ನು ಆಯ್ಕೆ ಮಾಡುತ್ತಿದ್ದೆವು. ಈಗ ಟೀಮ್ ಮ್ಯಾನೇಜ್ಮೆಂಟ್ ನಿರ್ದಿಷ್ಟ ಬ್ಯಾಟರ್ ಅಥವಾ ಬೌಲರ್ ನೊಂದಿಗೆ ಹೋಗುತ್ತದೆ, ಹೀಗಿರುವಾಗ ನಮಗೆ ಆಲ್ರೌಂಡರ್ ಏಕೆ ಬೇಕು,” ಎಂದು ಅಕ್ಷರ್ ಪ್ರಶ್ನಿಸಿದ್ದರು.10 ಓವರ್ ಬಳಿಕ ಚೆಂಡು ಬದಲಿಗೆ ಆಗ್ರಹ ಕಳೆದ ಋತುವಿನಲ್ಲಿ ಎರಡನೇ ಇನಿಂಗ್ಸ್ನ 10ನೇ ಓವರ್ ನಂತರ ಇಬ್ಬನಿಯನ್ನು ಎದುರಿಸಲು ಬಿಸಿಸಿಐ ತಂಡಗಳಿಗೆ ಒಂದು ಎಸೆತದಲ್ಲಿ ಬದಲಾವಣೆಗೆ ಅವಕಾಶ ನೀಡಿತು. ಬುಧವಾರ, ಒಬ್ಬ ನಾಯಕ ಮೊದಲ ಇನಿಂಗ್ಸ್ನ 10ನೇ ಓವರ್ ನಂತರ ಚೆಂಡನ್ನು ಬದಲಾಯಿಸಲು ತಂಡಗಳಿಗೆ ಅವಕಾಶ ನೀಡಬೇಕು ಎಂದು ಪ್ರಸ್ತಾಪಿಸಿದರು.
ಕಾಯಂ ನಾಯಕ ಪ್ಯಾಟ್ ಕಮಿನ್ಸ್ ಬದಲಿಗೆ ಎಸ್ಆರ್ಎಚ್ ತಂಡವನ್ನು ಮುನ್ನಡೆಸುತ್ತಿರುವ ಇಶಾನ್ ಕಿಶನ್ ಸೇರಿದಂತೆ ಎಲ್ಲಾ ಭಾರತೀಯರು, 2026 ರ ಆವೃತ್ತಿಗೆ ನೀಡಲಾದ ತರಬೇತಿ ಮಾರ್ಗಸೂಚಿಗಳ ಬಗ್ಗೆ ಐಪಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಪಂದ್ಯದ ದಿನಗಳಲ್ಲಿ ಯಾವುದೇ ಅಭ್ಯಾಸಕ್ಕೆ ಅನುಮತಿ ಇಲ್ಲ ಮತ್ತು ಒಂದು ತಂಡವು ತಮ್ಮ ಅಭ್ಯಾಸವನ್ನು ಬೇಗನೆ ಮುಗಿಸಿದರೆ, ಇತರ ತಂಡವು ತಮ್ಮ ಅಭ್ಯಾಸಕ್ಕಾಗಿ ವಿಕೆಟ್ಗಳನ್ನು ಬಳಸಲು ಅನುಮತಿ ನೀಡುವುದಿಲ್ಲಎಂದು ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡ ಮಾರ್ಗಸೂಚಿಯಲ್ಲಿತಿಳಿಸಿದರು.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬೇಕಾ?: ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಬಹುತೇಕರ ಆಕ್ಷೇಪ!



